ಕೋಲಾರ

ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

Published On :

ಕೋಲಾರ: ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ರೈತ ಸಂಘ ಒತ್ತಾಯಿಸಿದೆ.
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಭೂತಕ್ಕೆ ಪ್ರಕೃತಿ ಸಂಪತ್ತು ಲೂಟಿಯಾಗುತ್ತಿದೆ. ಬೆಟ್ಟಗಳನ್ನು 60 ರಿಂದ 100 ಅಡಿ ಆಳದವರೆಗೂ ಬಗೆದು ಹೊಸ ಕಂದಕಗಳನ್ನು ಸೃಷ್ಟಿಸುತ್ತಿದ್ದಾರೆಂದು ರೈತ ಮುಖಂಡರು ಆರೋಪಿಸಿ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಿದರು.
ಕ್ಯಾರಿ ಮಾಡುವ ವೇಳೆಯಲ್ಲಿ ಮಿತಿಮೀರಿದ ಡೈನಾಮೇಟ್‌ಗಳ ಸ್ಫೋಟದಿಂದಾಗಿ ಮನೆಗಳು ಜಖಂಗೊಳ್ಳುತ್ತಿವೆ. ರೈತ ಬೆಳೆದ ಬೆಳೆ ಮೇಲೆ ನೀರುಣಿಸುವ ಬಾವಿಗಳಲ್ಲಿ ಧೂಳು ಕುಳಿತು ರೋಗಗಳು ಹೆಚ್ಚಾಗುತ್ತಿವೆ. ಇಷ್ಟೆಲ್ಲಾ ಆತಂಕಗಳ ನಡುವೆಯೂ ನಿರಂತಕವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ಮನವಿಯನ್ನು ಹೆಡ್ ಮನ್ಷಿ ಕೃಷ್ಣೇಗೌಡರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀನಿವಾಸಗೌಡ, ಬಂಗವಾದಿ ನಾಗರಾಜಗೌಡ, ಮೂರಾಂಡಹಳ್ಳಿ ಶಿವಾರೆಡ್ಡಿ, ನೀಲ್ಟೂರು ರಮೇಶ್, ತೆರನಹಳ್ಳಿ ವೆಂಕಿ, ಆಂಜಿನಪ್ಪ, ಕೆಂಬೋಡಿ ಕೃಷ್ಣೇಗೌಡ, ನರಸಾಪುರ ಪುರುಷೋತ್ತಮ್, ನೀಲಕಂಠಪುರ ಮುನೇಗೌಡ, ರಾಜೇಶ್, ಅಮರನಾರಾಯಣಸ್ವಾಮಿ, ಕಲ್ವಮಂಜಲಿ ರಾಮು, ರಂಜಿತ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.