ಕೋಲಾರ

ನರೇಗಾ ಯೋಜನೆ ಸದ್ಬಳಕೆಗೆ ಸೂಚನೆ

Published On :

ಬಾಗೇಪಲ್ಲಿ: ನರೇಗಾ ಯೋಜನೆಯನ್ನು ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಕರೆ ನೀಡಿದರು.
ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಪರಿಶೀಲಿಸಲು ತಾಲೂಕಿನ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿನ ಹೊಸಹುಡ್ಯ, ಪುಟ್ಟಪರ್ತಿ, ಆದೇಪಲ್ಲಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪಜಾ ಮತ್ತು ಪ.ಪಂ. ಸಮುದಾಯದ ಜಮೀನುಗಳಲ್ಲಿ ಸಮತಟ್ಟು ಮಾಡಿಕೊಳ್ಳಲು 3-4 ಲಕ್ಷ ಹಣವನ್ನು ನೀಡಲಾಗುತ್ತದೆ. ತಮ್ಮ ಜಮೀನುಗಳಲ್ಲಿ ಕಣಿವೆ ಮತ್ತು ಮಳೆಗಾಲದಲ್ಲಿ ನೀರು ಹಿಂಗಿಸಲು ಗಣಿವೆ ಪಕ್ಕದಲ್ಲಿ ಗುಣಿ ಆಗೆದು ಸಪೋಟಾ, ಸೀಬೆ ಹಣ್ಣು ಮುಂತಾದ ಹಣ್ಣು ಬಿಡುವ ಗಿಡಗಳನ್ನು ನೆಡಲು ನರೇಗಾ ಯೋಜನೆಯಲ್ಲಿ ಉಪಯೋಗಿಸಿಕೊಳ್ಳಬಹುದೆಂದರು.
ಎತ್ತರ ಏರಿಸಿ: ಪುಟ್ಟಪರ್ತಿ ಗ್ರಾಮದ ನದಿಯಲ್ಲಿ ನಿರ್ಮಾಣಗೊಂಡಿರುವ ಚೆಕ್ ಡ್ಯಾಂ ಪರಿಶೀಲನೆ ಮಾಡಿದ ಅವರು, ಈ ಚೆಕ್ ಡ್ಯಾಂ ಎತ್ತರ ಏರಿಸಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದರು.
ಆದೇಪಲ್ಲಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿರುವ ಗೋಕುಂಟೆ ಕೆಲಸ ಮಾಡಿ 4-5 ತಿಂಗಳು ಕಳೆದಿದ್ದರೂ ಗ್ರಾ.ಪಂ ಅಧಿಕಾರಿಗಳು ಹಣ ಪಾವತಿ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಇದಕ್ಕೆ ಸಂಬಂಧಪಟ್ಟ ಎಂಜಿನಿಯರ್ ವೆಂಕಟರವಣಪ್ಪ ಹಾಗೂ ಪಿಡಿಒ ಶಶಿಕಲಾ ಅವರನ್ನು ಪ್ರಶ್ನಿಸಿದಾಗ, ನಿರೀಕ್ಷೆಗಿಂತ ಹೆಚ್ಚಿಗೆ ಕೂಲಿಯಾಳುಗಳು ಹಣ ಕೇಳಲು ಬಂದರು. ಆದ್ದರಿಂದ ಹಣ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಉತ್ತರಿಸಿದ್ದಕ್ಕೆ ಕುಪಿತಗೊಂಡ ವಿಜಯಭಾಸ್ಕರ್, ಕೆಲಸ ಮಾಡಿರುವಂತಹವರಿಗೆ ಈ ಹಣದಲ್ಲಿ ಸಮವಾಗಿ ನೀಡಿ, ನರೇಗಾ ಯೋಜನೆಯಡಿಯಲ್ಲಿ ಯಾವುದೇ ಕಾಮಗಾರಿ ಮಾಡಿದರೂ 15 ದಿನಗಳ ಒಳಗೆ ಹಣ ಪಾವತಿಸಬೇಕು. ಇಲ್ಲದಿದ್ದಲ್ಲಿ 0.5 ಬಡ್ಡಿ ಹಣ ನಿಮ್ಮ ಕೈಯಿಂದ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ವಾರದೊಳಗೆ ಹಣವನ್ನು ಪಾವತಿ ಮಾಡುವಂತೆ ಸೂಚಿಸಿದರು.
ಗ್ರಾಮಸ್ಥರ ಆರೋಪ: ಕೆಲವು ಗ್ರಾಮಗಳಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೌಚಾಲಯಗಳಿಗೆ ಗೋಡೆ ಬರಹ ಬರೆಸಲು ತಲಾ 50 ಗಳನ್ನು ಖರ್ಚು ಮಾಡಿದ್ದರೂ  ನಯಾ ಪೈಸೆ ನೀಡಿಲ್ಲ. ಈ ಹಣವನ್ನು ಅಧಿಕಾರಿಗಳೇ ನುಂಗಿ ನೀರು ಕುಡಿಯುತ್ತಿದ್ದಾರೆ.ನರೇಗಾ ಯೋಜನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ವಿಚಾರವಾಗಿ ಗ್ರಾ.ಪಂ.ಗೆ ಹೋಗಿ ಕೇಳೋಣಾ ಎಂದು ಕಚೇರಿಗೆ ಹೋದರೆ ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಇರುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ನೀಲಾ ಮಂಜುನಾಥ್, ತಾಪಂ ಇಒ ಶ್ರೀನಿವಾಸ್, ಪಂಚಾಯತ್ ರಾಜ್ ಇಲಾಖೆ ಎಇಇ ಪಿ.ವಿ. ನಾಗಪ್ಪ ಮುಂತಾದ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.