ಕೋಲಾರ

ಡಿ.ಎಂ. ತಿಮ್ಮರಾಯಪ್ಪ ಪುಣ್ಯತಿಥಿ ಆಚರಣೆ

Published On :

ಮಾಲೂರು: ಬೆಂಗಳೂರಿನ ವಿಧಾನಸೌಧದ ಮುಂಭಾಗ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ದಿ. ಡಿ.ಎಂ.ತಿಮ್ಮರಾಯಪ್ಪ ಅವರು ದಲಿತರ ಏಳಿಗೆಗಾಗಿ ಶ್ರಮಿಸಿದವರು ಎಂದು ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಜಿ. ಶ್ರೀನಿವಾಸಯ್ಯ ಹೇಳಿದರು.
ಕರ್ನಾಟಕ ಕ್ರಿಯಾ ದಲಿತ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಿ.ಎಂ. ತಿಮ್ಮರಾಯಪ್ಪ ಅವರ 3ನೇ ವರ್ಷದ ಪುಣ್ಯತಿಥಿ ಅಂಗವಾಗಿ ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನತೆಗಾಗಿ ಏಳುವರೆ ಸಾವಿರ ಸಿರಂಜ್‌ನ್ನು ಉಚಿತವಾಗಿ ವಿತರಿಸಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರ ಹೋರಾಟ ಗುಣ ಇಂದಿನ ದಲಿತ ಹೋರಾಟಗಾರರಿಗೆ ಮಾದರಿಯಾಗಿದ್ದು, ಸವರ್ಣೀಯರು ಮತ್ತು ಹರಿಜನರು ಘರ್ಷಣೆಯಿಲ್ಲದೆ ಶಾಂತಿ, ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡುತ್ತಿದ್ದ ಅವರ ಗುಣಗಳನ್ನು ಆದರ್ಶವಾಗಲಿ ಎಂದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು ಹಂಪಲು-ಬ್ರೆಡ್ ಗಳನ್ನು ವಿತರಿಸಲಾಯಿತು. ಡಾ. ಮಂಜುನಾಥ್, ಡಾ. ಜಗದೀಶ್,ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನಯ್ಯ, ಸಿ.ಎಂ. ನಾರಾಯಣಸ್ವಾಮಿ, ನಟರಾಜ್, ನಾಗರಾಜು, ಮುನಿಯಪ್ಪ, ಗೋಪಾಲ್, ದ್ಯಾಪಸಂದ್ರ ಶ್ರೀನಿವಾಸ್, ಹುಲಿಮಂಗಲ ಶ್ರೀನಿವಾಸ ರೆಡ್ಡಿ, ಮಾದನಹಟ್ಟಿ ಗೋಪಾಲಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.