ಕೋಲಾರ

ಆರೋಗ್ಯ, ವೈದ್ಯ ಶಿಕ್ಷಣ ಇಲಾಖೆ ಸಂಘಕ್ಕೆ ಮಾನ್ಯತೆ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಜ.12
ಜಿಲ್ಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘಕ್ಕೆ ಕೇಂದ್ರ ಸಂಘ ನೀಡಿರುವ ಮಾನ್ಯತಾ ಪತ್ರವನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಅವರಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷರೂ ಹಾಗೂ ಆರೋಗ್ಯ ಸಂಘದ ಗೌರವಾಧ್ಯಕ್ಷರೂ ಆಗಿರುವ ಮುನಿರಾಜು, ಹಾಲಿ ನೂತನ ಸಂಘದ ಅಧ್ಯಕ್ಷೆಯಾಗಿದ್ದ ಎಸ್.ವಿಜಯಮ್ಮ ಅವರು ಮಂಜುನಾಥ್ ಅವರಿಗೆ ಈ ಪತ್ರ ಹಸ್ತಾಂತರಿಸಿ, ರಾಜ್ಯ ಸಂಘ ನಮ್ಮ ಸಂಘವನ್ನು ಮಾನ್ಯತೆ ಮಾಡಿದ್ದು, ಸಮಸ್ಯೆಗಳು, ಹೋರಾಟಗಳಿಗೆ ಸ್ಪಂದನೆ ನೀಡುವಂತೆ ಮನವಿ ಮಾಡಲಾಯಿತು.
ರಾಜ್ಯ ಸಂಘದ ಅಧ್ಯಕ್ಷ ಎ.ಪುಟ್ಟಸ್ವಾಮಿ ಅವರು ಜಿಲ್ಲಾ ಸಂಘಕ್ಕೆ ನೀಡಿರುವ ಮಾನ್ಯತಾ ಪತ್ರ ನೀಡಿರುವುದರಿಂದಾಗಿ ಇದೀಗ ಸಂಘದ ಮಾನ್ಯತೆ ಕುರಿತಂತೆ ಇದ್ದ ವಿವಾದಗಳಿಗೆ ತೆರೆ ಬಿದ್ದಂತಾಗಿದೆ. ಕಳೆದ ನವೆಂಬರ್‌ನಲ್ಲಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ವಿಜಯಮ್ಮ ಅವರೇ ಆ ಸ್ಥಾನದಲ್ಲಿ ಮುಂದುವರಿದಂತಾಗಿದೆ.
ಈ ವೇಳೆ ಮಾತನಾಡಿದ ಕೆ.ಎನ್.ಮಂಜುನಾಥ್, ನೂತನ ಸಂಘದ ಕಾರ್ಯಕಾರಿ ಸಮಿತಿಗೆ ಸಹಕಾರ ನೀಡುವುದಾಗಿಯೂ, ನೌಕರರ ನ್ಯಾಯಯುತ ಸಮಸ್ಯೆಗಳಿಗೆ ನಿಮ್ಮ ಯಾವುದೇ ನಿರ್ಧಾರಗಳಿಗೂ ಬೆಂಬಲ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.
ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ ಕಳೆದ ಐದು ವರ್ಷಗಳಿಂದಲೂ ರಾಜ್ಯ ನೌಕರರ ಸಂಘದ ಮಾನ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆ ನೌಕರರು ಮಹಿಳೆಯರೇ ಆಗಿದ್ದರೂ, ಇದುವರೆಗೂ ಜಿಲ್ಲಾಧ್ಯಕ್ಷರಾಗಿ ಮಹಿಳೆಯರು ಯಾರೂ ಆಯ್ಕೆಯಾಗಿರಲಿಲ್ಲ. ಇದೀಗ ಕೋಲಾರ ಜಿಲ್ಲಾ ಸಂಘದ ನೂತನ ಅಧ್ಯಕ್ಷೆಯಾಗಿ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಎಸ್.ವಿಜಯಮ್ಮ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಂಘದ ಖಜಾಂಚಿಯಾಗಿ ಆರ್.ನಾಗರಾಜ್, ಉಪಾಧ್ಯಕ್ಷರಾಗಿ ಸರಸ್ವತಿ, ಕಮಲಾಕರ್, ರಮಣಪ್ಪ, ವೇಣುಗೋಪಾಲ್, ಸಂದಪ್ಪ, ಕಾರ್ಯದರ್ಶಿಯಾಗಿ ರಘುನಾಥ್, ಕೃಷ್ಣಪ್ಪ, ಜಂಟಿ ಕಾರ್ಯದರ್ಶಿಯಾಗಿ ದಿನೇಶ್, ಮಹೇಶ್, ಗುರುಪ್ರಸಾದ್ ಆಯ್ಕೆಯಾದರು.
ಈ ವೇಳೆ ಸಮಿತಿ ನಜುರುಲ್ಲಾಖಾನ್, ವೀರಭದ್ರ, ಧನಂಜಯ, ರಾಮಮೂರ್ತಿ, ಮಂಜುನಾಥ್, ಲಕ್ಷ್ಮೀನಾರಾಯಣ, ರಾಮಪ್ಪ, ಬೀರಪ್ಪ, ಜಾರ್ಜ್, ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಯಾರಂಘಟ್ಟ ನಾರಾಯಣಪ್ಪ, ವೆಂಕಟೇಶ್‌ಬಾಬು, ಚಾಲಕರ ಸಂಘದ ಮಾರುತಿಕುಮಾರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.