ಕೋಲಾರ

ಜಿಎಸ್ಸೆಸ್ ತೆಂಗಿನ ಮರವಿದ್ದಂತೆ: ಪ್ರೊ. ನಂಗಲಿ

Published On :

ಮಾಲೂರು: ಕಾವ್ಯ-ತತ್ವಜ್ಞಾನ, ಕವಿ ಮತ್ತು ವಿಮರ್ಶಕ, ಪರಂಪರೆ-ಆಧುನಿಕತೆಯನ್ನು ಸಮನ್ವಯವಾಗಿ ಬಳಸಿಕೊಳ್ಳುತ್ತಿದ್ದ ಜಿ.ಎಸ್. ಶಿವರುದ್ರಪ್ಪ ರವರು ಆಧುನಿಕ ಕನ್ನಡ ಸಾಹಿತ್ಯದ ಜೀನೀಸ್ ಆಗಿದ್ದರು ಎಂದು ಸಾಹಿತಿ ಪ್ರೊ.ಚಂದ್ರಶೇಖರ್ ನಂಗಲಿ ಅಭಿಪ್ರಾಯಪಟ್ಟರು.
   ಅವರು ಸ್ಥಳೀಯ ಸಂಗೂಳ್ಳಿ ರಾಯಣ್ಣ ಕನ್ನಡ ಗೆಳೆಯರ ಬಳಗ ಸಂಕ್ರಾಂತಿ ಹಬ್ಬದ ಅಂಗವಾಗಿ ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಕಾವ್ಯ ಸಂಕ್ರಮಣ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅವರ ಆಪ್ತ ಶಿಷ್ಯನಾಗಿದ್ದ ನನಗೆ ಸಾಹಿತಿಗಳಲ್ಲಿ ಕಾಣಲಾಗದ ಬಹುಮುಖ ಪ್ರತಿಭೆ ಅವರಲ್ಲಿ ಕಂಡಿತ್ತು. ಅವರು ಗಂಡಭೇರುಡ ಇದ್ದಂತೆ ಎಂದರು.
ಉಪನ್ಯಾಸಕ ಹೆಚ್. ಸತ್ಯನಾರಾಯಣ ಮಾತನಾಡಿ ಕುವೆಂಪು ತಮ್ಮ ನೆರಳಿನಲ್ಲಿ ಹಲವಾರು ಶಿಷ್ಯರನ್ನು ಬೆಳೆಸಿದರೆ, ಜಿ.ಎಸ್. ಶಿವರುದ್ರಪ್ಪ ತೆಂಗಿನ ಮರದಂತೆ ತಾವೂ ಬೆಳೆದು ತಮ್ಮ ಶಿಷ್ಯರನ್ನು ಜತೆಯಲ್ಲಿ ಬೆಳೆಸಿದವರು.ಬಡವರಿಗಾಗಿ ಮಿಡಿಯುತ್ತಿದ್ದ ಜಿ.ಎಸ್.ಎಸ್. ಸುತ್ತಾಟದ ಕವಿ ಎಂದೇ ಪ್ರಖ್ಯಾತರಾದವರು. ಒಬ್ಬ ಅಧ್ಯಾಪಕರಾದವರು ತಮ್ಮ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಸಾಹಿತ್ಯ ಜಗತ್ತಿಗೆ ತೋರಿಸಿಕೊಟ್ಟವರು ಎಂದರು. ಪುರಸಭೆ ಸದಸ್ಯ ಸಿ. ಲಕ್ಷ್ಮಿನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ. ಸದಸ್ಯ ರಾಮಸ್ವಾಮಿ ರೆಡ್ಡಿ, ಸ.ಪ್ರೌ.ಶಿ.ಸಂ. ಅಧ್ಯಕ್ಷ ಕೆಂಪಣ್ಣ, ಕಸಾಪ ಅಧ್ಯಕ್ಷ ಮಧುಸೂಧನ್, ಕಸಾಪ ಜಿಲ್ಲಾ ಗೌರವಾಧ್ಯಕ್ಷ ಅಶ್ವಥ್ ರೆಡ್ಡಿ,ಚು.ಸಾ.ಸಂ. ಅಧ್ಯಕ್ಷ ಚಂದ್ರಪ್ಪ, ಪ್ರಬಂಧಕಾರ ಈರಪ್ಪ ಕಂಬಳಿ, ಡಾ.ಸಿ.ಎಂ. ಗೋವಿಂದ ರೆಡ್ಡಿ, ಉದ್ಯಮಿ ವಿಶ್ವನಾಥ್ ಗುಪ್ತ ಇದ್ದರು. ಗಾಯಕ ಗುಲ್ಜಾರ್, ಡಾ. ಮುನಿರಾಜು, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಮಾಸ್ತಿ ಕೃಷ್ಣಪ್ಪ, ಸತೀಶ್ ಕಾಟೇರಿ, ಸರ್ವೆಶ್, ಬಂಟಹಳ್ಳಿ, ಜ.ಮು. ಚಂದ್ರು, ಮಹೇಶ್, ಸಂಘದ ಅಧ್ಯಕ್ಷ ಪ್ರಶಾಂತ, ವೇಣುಗೋಪಾಲ್ ವಹ್ನಿ ತಮ್ಮ ಕವನ ವಾಚಿಸುವ ಜತೆಯಲ್ಲಿ ಜಿ.ಎಸ್.ಎಸ್. ರಚನೆಗಳನ್ನು ಗಾಯನ ಮೂಲಕ ನುಡಿ ನಮನ ಸಲ್ಲಿಸಿದರು. ಮಂಜುನಾಥ್ ಸ್ವಾಗತಿಸಿದರು. ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.