ಜಿಲ್ಲಾಧಿಕಾರಿಗಳ ಪ್ರವಾಸ ಕಾರ್ಯಕ್ರಮ
ಕೋಲಾರ; ಜಿಲ್ಲಾಧಿಕಾರಿಗಳಾದ ಡಿ.ಕೆ. ರವಿ ಅವರ 2014ನೇ ಜನವರಿ ಮಾಹೆಯ ಎರಡನೆಯ ಪಾಕ್ಷಿಕ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ಈ ಕೆಳಕಂಡಂತಿದೆ.
ಜ.16 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯುವ ಭೂ ಸ್ವಾಧೀನಕ್ಕೆ ಸೂಕ್ತ ಬೆಲೆ ನಿಗದಿಪಡಿಸುವ ಹಾಗೂ ಪುರ್ನಸತಿ ಕಲ್ಪಿಸುವ ಸಂಬಂಧ ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸುವರು.
ಜ.17 ಮತ್ತು 18 ರಂದು ಕೇಂದ್ರ ಸ್ಥಾನದಲ್ಲಿದ್ದು ಪ್ರಸ್ತುತ ಕಚೇರಿ ಕೆಲಸ ನಿರ್ವಹಿಸುವರು. ಜ.20 ರಂದು ಬೆಳಗ್ಗೆ 10 ಗಂಟೆಗೆ ಕೋಲಾರ ತಾಲೂಕು ಕಸಬಾ ಹೋಬಳಿ, ದೊಡ್ಡಹಸಾಳ ಗ್ರಾಮದಲ್ಲಿ ಮತ್ತು ಮಧ್ಯಾಹ್ನ 2.ಗಂಟೆಗೆ ಕೂಟೇರಿ ಗ್ರಾಮದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಜ.21 ರಂದು ಬೆಂಗಳೂರಿಗೆ ಪ್ರಯಾಣ ಮಾಡಿ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸುವರು. ಜ.22 ರಂದು ಕೇಂದ್ರ ಸ್ಥಾನದಲ್ಲಿದ್ದು ಪ್ರಸ್ತುತ ಕೆಲಸ ನಿರ್ವಹಿಸುವರು. ಮಧ್ಯಾಹ್ನ 3ಗಂಟಗೆ ಅಪೀಲು ಪ್ರಕರಣಗಳ ವಿಚಾರಣೆ ನಡೆಸುವರು.
ಜ.23 ರಂದು ಬೆಳಗ್ಗೆ 10. ಗಂಟೆಗೆ ಕೋಲಾರ ತಾಲೂಕು ಕಸಬಾ ಹೋಬಳಿ ಮಾರ್ಜೇನಹಳ್ಳಿ ಗ್ರಾಮದಲ್ಲಿ ಮತ್ತು ಮಧ್ಯಾಹ್ನ 2ಗಂಟೆಗೆ ಕಾಮಧೇನಹಳ್ಳಿ ಗ್ರಾಮದಲ್ಲಿ ಕಂದಾಯ ಅದಾಲತ್ಸ್‌ಭೆ ನಡೆಸುವರು.
ಜ.24 ರಂದು ಬೆಳಗ್ಗೆ 10 ಗಂಟೆಗೆ ಕೋಲಾರ ತಾಲೂಕು ಕಸಬಾ ಹೋಬಳಿ ಕೊಂಡರಾಜನಹಳ್ಳಿ ಗ್ರಾಮದಲ್ಲಿ ಮತ್ತು ಮಧ್ಯಾಹ್ನ 2 ಗಂಟೆಗೆ ಬೆಗ್ಲಿಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು. ಜ.25 ರಂದು ಬೆಳಗ್ಗೆ 10 ಗಂಟಗೆ ಕೋಲಾರ ತಾ.ಕಸಬಾ ಹೋಬಳಿ, ಅರಹಳ್ಳಿ ಗ್ರಾಮದಲ್ಲಿ ಮತ್ತು ಮಧ್ಯಾಹ್ನ 2 ಗಂಟೆಗೆ ತೊರದೇವಂಡಹಳ್ಳಿ ಗ್ರಾಮದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಜ.26 ರಂದು ಗಣರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಜ.27 ರಂದು ಕೇಂದ್ರಸ್ಥಾನದಲ್ಲಿದ್ದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಪ.ಜಾ, ಪ.ವರ್ಗಗಳ ಕುಂದು ಕೊರತೆಗಳ ಬಗ್ಗೆ ಸಮಿತಿ ಸಭೆ ನಡೆಸುವರು.
ಜ.28 ರಂದು ಕೇಂದ್ರ ಸ್ಥಾನದಲ್ಲಿದ್ದು ಬೆಳಗ್ಗೆ11 ಗಂಟೆಗೆ ಎನ್.ಎಚ್.4 ಭೂ ಸ್ವಾಧೀನ , ಎಂ.ಎ.ಜಿ, ಎಲ್.ಆರ್.ಎಫ್. ಪ್ರಕರಣಗಳ ವಿಚಾರಣೆ , ಅನುಸೂಚಿತ ಜಾತಿ, ವರ್ಗದ ಅಭಿವೃದ್ಧಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. 3 ಗಂಟೆಗೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಆರ್‌ಟಿಎ ಸಭೆ ನಡೆಸುವರು. ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಆರ್.ಎಸ್.ಬಿ.ವೈ. ಸಭೆ ನಡೆಸುವರು. 5 ಗಂಟೆಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಅಂಗನವಾಡಿ ನೌಕರರ ಸಮಸ್ಯೆಗಳ ಬಗ್ಗೆ ಸಭೆ ನಡೆಸುವರು.
ಜ.29 ರಂದು ಕೇಂದ್ರಸ್ಥಾನದಲ್ಲಿದ್ದು ಪ್ರಸ್ತುತ ಕೆಲಸ ನಿರ್ವಹಿಸುವರು. ಮ.3 ಗಂಟೆಗೆ ಅಪೀಲು ಪ್ರಕರಣಗಳ ವಿಚಾರಣೆ ನಡೆಸುವರು. ಜ.30 ರಂದು ಕೇಂದ್ರಸ್ಥಾನದಲ್ಲಿದ್ದು,11 ಗಂಟೆಗೆ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಸಂಬಂಧಿಸಿದಂತೆ ಹೋಂಡಾ ಕಂಪನಿ ಸಭಾಂಗಣದಲ್ಲಿ ಏಕಗವಾಕ್ಷಿ ಸಭೆ ನಡೆಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

