ಅನಧಿಕೃತ ಫ್ಲೆಕ್ಸ್ಗಳಿಂದ ಸಂಚಾರಕ್ಕೆ ಅಡ್ಡಿ
ಮಾಲೂರು: ಗ್ರಾಮ ದೇವತೆ ಮಾರಿಕಾಂಭ ದೇವಾಲಯದ ಮಹಾದ್ವಾರವು ಸಂಪೂರ್ಣ ಫ್ಲೆಕ್ಸ್ಗಳಿಂದ ಮುಚ್ಚಿಹೋಗಿದ್ದು, ಸುಗುಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಕ್ರಮವಾಗಿ ಹಾಕಿರುವ ಇವುಗಳನ್ನು ತೆರವುಗೊಳಿಸದ ಇಲ್ಲಿನ ಪುರಸಭೆಯ ನಿರ್ಲಕ್ಷತನ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಪಟ್ಟಣದ ಡಬ್ಬಲ್ ರಸ್ತೆ ಸೇರಿದಂತೆ ಮಾರಿಕಾಂಭ ಮಹಾದ್ವಾರ ಹಾಗೂ ಸೌಧದ ಮುಂಭಾಗಗಳಲ್ಲಿ ಬಹಳ ಫ್ಲೆಕ್ಸ್ಗಳನ್ನು ಪುರಸಭೆ ಅನುಮತಿ ಪಡೆಯದೆ ರಸ್ತೆ ಸಂಚಾರಕ್ಕೆ ಅಡ್ಡಲಾಗಿ ಬೇಕಾಬಿಟ್ಟಿಯಾಗಿ ಕಟ್ಟಿದ್ದರೂ,ಪುರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸರಾಶಿ ಜತೆಯಲ್ಲಿ ಫ್ಲೆಕ್ಸ್ಗಳ ಭರಾಟೆ ಹೆಚ್ಚಾಗಿದ್ದು, ಇವು ಇಲ್ಲಿನ ಅಂದವನ್ನೇ ಹಾಳುಗೆಡವುತ್ತಿದೆ.
ಕಾರ್ಯಕ್ರಮ ನಡೆಯುವ ತಿಂಗಳ ಮುಂಚೆಯೇ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಈ ಹಿಂದಿನ ಪುರಸಭೆ ಆಡಳಿತ ಬಸ್ನಿಲ್ದಾಣದಲ್ಲಿರುವ ಉದ್ಯಾನವನ ಕಾಂಪೌಂಡ್ ಹಾಗೂ ಮಾರಿಕಾಂಭ ಮಹಾದ್ವಾರದ ಮೇಲೆ ಫ್ಲೆಕ್ಸ್ ಹಾಕಬಾರದು ಎಂದು ಆದೇಶ ಹೊರಡಿಸಿತ್ತು. ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸಬೇಕಾದಲ್ಲಿ ಪುರಸಭೆ ಅನುಮತಿ ಅಗತ್ಯ ಎಂದು ಆದೇಶಿಸಿತ್ತು. ಆದರೆ ಈಗ ಆ ಆದೇಶಕ್ಕೆ ಬೆಲೆಯೇ ಇಲ್ಲ. ಪಟ್ಟಣದಲ್ಲಿ ಈಗ ಹಾಕಲಾಗಿರುವ ಬಹುತೇಕ ಫ್ಲೆಕ್ಸ್ಗಳಲ್ಲಿ ಶಾಸಕರ ಭಾವಚಿತ್ರ ಇರುವುದರಿಂದ ಅವುಗಳನ್ನು ತೆರವುಗೊಳಿಸಲು ಹಿಂಜರಿಕೆ ಉಂಟಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಪುರಸಭೆ ಅಧಿಕಾರಿಯೊಬ್ಬರು ಹೇಳುತ್ತಾರೆ. ಹಾಗಾದರೆ ಇದನ್ನು ಹಾಗೆಯೇ ಬಿಡಲಾಗುತ್ತದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

