ಕೋಲಾರ

'ಹೆಣ್ಣು ಮಕ್ಕಳಿಗೆ ಅರಿವು ಅಗತ್ಯ'

Published On :

ಕ.ಪ್ರ.ವಾರ್ತೆ , ಕೋಲಾರ , ಜ.15           
ಜಿಲ್ಲೆಯಲ್ಲಿನ ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸಲು ಜಾಗೃತಿ ಅಗತ್ಯ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ನಾರಾಯಣಮ್ಮ ಶಿವಣ್ಣ ತಿಳಿಸಿದರು.
ಬಂಗಾರಪೇಟೆ ತಾಲೂಕಿನ ಎಸ್.ಜಿ. ಕೋಟೆಯಲ್ಲಿ ನೆಹರು ಯುವ ಕೇಂದ್ರ ಕೋಲಾರ, ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಸ್.ಜಿ.ಕೋಟೆ, ಮಾತೃಭೂಮಿ ಯುವ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ದಿನಾಚರಣೆ ಪ್ರಯುಕ್ತ ಹೊಲಿಗೆ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಪುರುಷನಿಗೆ ಸಮನಾಗಿ ಬಾಳಬೇಕು. ಜೀವನದಲ್ಲಿ ಛಲದಿಂದ ಬದುಕಿ ಸಮಾಜವನ್ನು ಸುಧಾರಿಸಬೇಕಾಗಿರುವುದರಿಂದ ಹಳ್ಳಿ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಂತ್ವನ ಮಹಿಳಾ ಸಂಘದ ಕಾರ್ಯದರ್ಶಿ ಮಮತಾರೆಡ್ಡಿ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಮಹಿಳೆಯರಿಗೆ ಝಾನ್ಸಿರಾಣಿ ಲಕ್ಷ್ಮಿಬಾಯಿ, ಇಂದಿರಾಗಾಂಧಿ ಇನ್ನು ಅನೇಕ ಮಹಾನ್ ಮಹಿಳೆಯರ ಜೀವನದ ಸಾಧನೆಗಳನ್ನು ತಿಳಿಸುತ್ತಾ ಪ್ರಸ್ತುತ ದಿನಗಳಲ್ಲಿ ಅತ್ಯಾಚಾರ, ಅನ್ಯಾಯ ತಾಂಡವಾಡುತ್ತಿವೆ. ಪ್ರತಿಯೊಂದಕ್ಕೂ ಹೆಣ್ಣು ಅವಶ್ಯಕ ಆದರೆ ಅವರ ಮೇಲೆ ದಬ್ಬಾಳಿಕೆ ಯಾಕೆ ಎಂಬ ವಿಷಯಗಳ ಜನತೆ ಚಿಂತನೆ ಮಾಡಿ ಸೂಕ್ತ ರಕ್ಷಣೆ ಒದಗಿಸಬೇಕಾಗಿದೆ ಎಂದು ತಿಳಿಸಿದರು. ಕವಿ ಶರಣಪ್ಪ ಗಬ್ಬೂರ ಮಾತನಾಡಿ, ದಿನನಿತ್ಯದ ಬದುಕಿನ ಆಗುಹೋಗುಗಳ ಬಗ್ಗೆ ಚರ್ಚಿಸಿ ಹಂತ ಹಂತವಾಗಿ ಬದಲಾವಣೆಯಾಗಬೇಕು ಮತ್ತು ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನು ಪಡೆದುಕೊಳ್ಳಬೇಕೆಂದರು.
ಸಮಾರಂಭದಲ್ಲಿ ಮಾತೃಭೂಮಿ ಯುವ ಕಲಾ ಸಂಘದ ಅಧ್ಯಕ್ಷ ನಾಗೇಂದ್ರಕುಮಾರ್, ಸಮಾಜ ಸೇವಕಿ ಮಂಗಳ, ದಕ್ಷಿಣಾಮೂರ್ತಿ, ಸ್ವಸಹಾಯ ಸಂಘದ ಅಧ್ಯಕ್ಷ ಲಕ್ಷ್ಮಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.