ಅತಿಥಿ ಉಪನ್ಯಾಸಕರ ಕಡೆಗಣನೆ: ಸಿಎಂ ಮನೆ ಮುಂದೆ ಮುಷ್ಕರ
ಕೋಲಾರ: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಜ.27 ರಿಂದ ಮುಖ್ಯಮಂತ್ರಿಗಳ ನಿವಾಸದ ಮುಂದೆ ಅನಿರ್ಧಿಷ್ಟಾವಧಿ ಧರಣಿಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಬಿ. ರಾಜಶೇಖರಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 350 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10,650 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವಾರು ಹೋರಾಟ ನಡೆಸಲಾಗಿದೆ. ಆದರೆ, ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಭರವಸೆಗಳನ್ನು ನೀಡಿ ಕಾಲಹರಣ ಮಾಡುತ್ತಿರುವುದರಿಂದ ಸರ್ಕಾರದ ಗಮನ ಸೆಳೆಯಲು ಜ.27 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಕಂದಾಯ ಅದಾಲತ್ ಪ್ರಾರಂಭ
ಮಾಲೂರು: ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನಲ್ಲಿ ಜ.20ರಿಂದ ಕಂದಾಯ ಅದಾಲತ್ ಪ್ರಾರಂಭವಾಗಲಿದೆ ಎಂದು ತಹಸೀಲ್ದಾರ್ ಡಾ.ಸುಧಾ ಪಾಯ್ಸ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಪ್ರಥಮ ಹಂತವಾಗಿ ಟೇಕಲ್ ಹೋಬಳಿಯಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದ ತಹಸೀಲ್ದಾರ್ ಅವರು, ಹುಣಸೀಕೋಟೆಯಲ್ಲಿ 20ರಂದು, ಹಳೇ ಪಾಳ್ಯದಲ್ಲಿ 21ರಂದು, ನಿದರಮಂಗಲ 22ರಂದು, ಟೇಕಲ್ನಲ್ಲಿ 23ರಂದು ನಡೆಯಲಿದೆ. ಮಾಕಾರಹಳ್ಳಿಯಲ್ಲಿ 24, ನೂಟವೇಯಲ್ಲಿ 25, ಬನಹಳ್ಳಿಯಲ್ಲಿ 27, ಸೀತಹಳ್ಳಿಯಲ್ಲಿ 28, ಹುಳದೇನಹಳ್ಳಿಯಲ್ಲಿ 29 ಹಾಗೂ ಕೆ.ಜಿ.ಹಳ್ಳಿಯಲ್ಲಿ 31ರಂದು ನಡೆಯಲಿದೆ ಎಂದು ತಿಳಿಸಿದರು.ಕಂದಾಯ ಅದಾಲತ್ನಲ್ಲಿ ರೈತರು ಕಂದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಪ್ರಯತ್ನ ಇದಾಗಿದ್ದು, ರೈತರು ಫವತಿ ಖಾತೆ, ವಿಲ್ಪತ್ರ, ಮುಜುಭಾನೆ ವಿಭಾಗ ಪತ್ರ, ಆರ್.ಟಿ.ಸಿ. ಕಲಂ 3 ಮತ್ತು 9ರ ತಿದ್ದುಪಡಿಗೆ ಸಂಬಂಧಿಸಿದ ಗ್ರಾಮ ಲೆಕ್ಕಿಗರಿಂದ ಅರ್ಜಿ ಪಡೆದು ಸಲ್ಲಿಸಲು ತಹಸೀಲ್ದಾರ್ ಡಾ.ಸುಧಾ ಪಾಯ್ಸ್ ತಿಳಿಸಿದ್ದಾರೆ.
ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಲು ಸೂಚನೆ
ಶ್ರೀನಿವಾಸಪುರ: ತಾಲೂಕಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ವಹಿಸಿಬೇಕೆಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆ.
ತಾಪಂಕಾರ್ಯಾಲಯದ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ನೂನ್ಯತೆಗಳ ಬಗ್ಗೆ ತಿಳಿಸಿ ಹೆಚ್ಚು ಅನುಧಾನ ಬಿಡುಗಡೆಗೊಳಿಸಿದರೆ ತಾಲೂಕಿನ ಅಭಿವೃದ್ಧಿಗೆ ಅನುವು ಮಾಡಿಕೊಟ್ಟಾಂಗೆಗಾಗುತ್ತದೆ ಎಂದು ಕೆಲ ಅಧಿಕಾರಿಗಳು ಸಭೆಗೆ ತಿಳಿಸಿದರು. ಕಾರ್ಯನಿರ್ವಹಣಾಧಿಕಾರಿ ಸಿ. ಶಂಕರಪ್ಪ, ಎಇಇ ವೆಂಕಟರಾಯಪ್ಪ ಇದ್ದರು.
ಸೆಮಿಸ್ಟರ್ ಪದ್ಧತಿ ವಿರೋಧಿಸಿ ಪ್ರತಿಭಟನೆ
ಮಾಲೂರು: ರಾಜ್ಯದ ಐಟಿಐ ವಿದ್ಯಾರ್ಥಿಗಳಿಗೆ ಸಮಿಸ್ಟರ್ ಪದ್ಧತಿ ಅಳವಡಿಸಲು ಹೊರಡಿಸಿರುವ ಆದೇಶ ಹಿಂಪಡಿಯಬೇಕು ಎಂದು ಅಗ್ರಹಿಸಿ ಇಲ್ಲಿನ ವಿವಿಧ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಎಸ್ಎಫ್ಐ ಅಧ್ಯಕ್ಷ ಗೋಪಿ, ಶೀಘ್ರ ಉದ್ಯೋಗ ಸಿಗಬಹುದೆಂಬ ಉದ್ದೇಶದಿಂದ ಐಟಿಐ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಆನೇಕ ಐಟಿಐ ಕಾಲೇಜಿಗಳಲ್ಲಿ ಮಿಷನ್, ಟೂಲ್ಸ್ ಸೇರಿದಂತೆ ಮೂಲ ಸೌಕರ್ಯಗಳೇ ಇಲ್ಲ. ಜತೆಯಲ್ಲಿ ಉಪಾನ್ಯಾಸಕರ ಕೊರತೆ ಕಾಡುತ್ತಿರುವಾಗಲೇ ರಾಜ್ಯ ಸರ್ಕಾರ ಸಮಿಸ್ಟರ್ ಪದ್ಧತಿ ಅಳಡಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮಾರಕವಾಗುತ್ತಿದ್ದು, ಕೂಡಲೇ ಈ ಪದ್ಧತಿ ಕೈಬಿಡಬೇಕೆಂದು ಅಗ್ರಹಿಸಿದರು. ಉಮೇಶ್, ದಾಕ್ಷಯಿಣಿ, ಶರತ್, ಶ್ರೀನಿವಾಸ್, ಮಾಲತಿ, ವೆಂಕಟಾಚಲಪತಿ, ಅಭಿಷೇಕ್, ಮಧು, ತಿಮ್ಮರಾಯ, ರಜನಿ, ಸ್ಮಿತಾ, ಸುಮ, ರವಿ, ಅರುಣ್ ಇದ್ದರು.
ಅಣ್ಣಮ್ಮ ದೇವಿ ಮೆರವಣಿಗೆ
ಮಾಲೂರು: ಇಲ್ಲಿನ ಗಾಂಧೀ ವೃತ್ತದ ಅಣ್ಣಮ್ಮದೇವಿ ಯುವಕರ ಸಂಘ ಬೆಂಗಳೂರಿನಿಂದ ಕರೆ ತಂದ ಅಣ್ಣಮ್ಮ ದೇವಿ ಉತ್ಸವ ಮೂರ್ತಿಯನ್ನು ಗುರುವಾರ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು.
ಪಟ್ಟಣದ ಬೆಂಗಳೂರು ರಸ್ತೆಯ ಡಾ. ರಾಜ್ ವೃತ್ತದಿಂದ ಗೃಹಿಣಿಯರ ಪೂರ್ಣ ಕುಂಭದೊಡನೆ ಅಣ್ಣಮ್ಮ ದೇವಿಯನ್ನು ತರೆ ತರಲಾಯಿತು. ರಸ್ತೆ ಬದಿಯ ಮನೆಯವರು ಅಣ್ಣಮ್ಮ ದೇವಿಯ ಪೊಜೆ ಸಲ್ಲಿಸಿದರು. ಸಮಿತಿಯ ಸಿ. ರಾಮಣ್ಣ, ಕಿರಣ್, ರವಿ, ನರಸಿಂಹ ರಾವ್, ಮಂಜುನಾಥ್, ಆಂಜಿ, ಎಂ.ಆರ್. ರವಿ, ಕೆ.ವಿ. ಕೃಷ್ಣ, ಆಂಜನ್ ರಾವ್, ಆರ್. ಶ್ರೀನಿವಾಸ್ ಇದ್ದರು.
ವ್ಯಕ್ತಿಜೀವನ ಸಾರ್ಥಕವಾಗಲು ಧರ್ಮದ ನೆರವು ಅಗತ್ಯ
ಚಿಂತಾಮಣಿ: ವ್ಯಕ್ತಿಜೀವನ ಸಾರ್ಥಕವಾಗಬೇಕಾದರೆ ಧರ್ಮದ ನೆರವು ಅಗತ್ಯ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು.
ಕೈವಾರ ಯೋಗಿ ನಾರೇಯಣ ಮಠದಲ್ಲಿ ನಡೆದ ಹುಣ್ಣಿಮೆ ವಿಶೇಷ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಸಮಾಜ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಹುಣ್ಣಿಮೆ ಚಂದ್ರ ಸಾವಿರಾರು ಮನೆಗಳ ಅಂಗಳಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಒಂದೊಂದು ಮನೆಯವರೂ ತಮ್ಮ ಅಂಗಳದಲ್ಲೇ ನಿಂತು ಚಂದ್ರನನ್ನು ನೋಡಬಹುದು. ಹಾಗೆಂದು ಸಾವಿರ ಚಂದ್ರರು ಇರಲು ಸಾಧ್ಯವಿಲ್ಲ. ಇರುವವನು ಒಬ್ಬನೇ ಚಂದ್ರ. ಸಾವಿರ ಕಡೆ ಕಾಣಿಸಿಕೊಳ್ಳುವುದೇನೋ ನಿಜ. ಆದರೆ ಕಾಣಿಸಿಕೊಳ್ಳುವುದು ಒಂದೇ ಚಂದ್ರ ಹಾಗೆಯೇ ಧರ್ಮಗಳು ಹಲವಾದರೂ ದೇವರು ಒಬ್ಬನೇ ಎಂದರು.
ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಟಾವದಾನ ಸೇವೆಯನ್ನು ನೆರವೇರಿಸಲಾಯಿತು. ತಾತಯ್ಯನವರ ಬೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥೋತ್ಸವದಲ್ಲಿ ಅಸಂಖ್ಯ ಭಕ್ತಾಧಿಗಳು ಭಾಗವಹಿಸಿದ್ದರು.
ಕ್ಷುಲ್ಲಕ ಜಗಳ; ಲಘುಲಾಠಿ ಪ್ರಹಾರ
ಚಿಂತಾಮಣಿ: ಮುರುಗಮಲ್ಲಾ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮುಕಿ ನಡೆದು ಪರಿಸ್ಥಿತಿ ಕೈ ಮೀರುವ ಸ್ಥಿತಿಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿರುವ ಘಟನೆ ಗುರುವಾರ ಸಂಜೆ ನಡೆದಿದೆ. ತಾಲೂಕಿನ ಮುರುಗಮಲ್ಲಾ ಗ್ರಾಮದಲ್ಲಿ ಕಳೆದ 2 ದಿನಗಳಿಂದ ಅಮ್ಮಾಜಾನ್ - ಬಾಬಾಜಾನ್ ಉರೂಸ್ ಕಾರ್ಯಕ್ರಮ ನಡೆಯುತ್ತಿದ್ದು, ಸಾವಿರಾರು ಜನರು ಬಂದಿದ್ದರು. ಇಲ್ಲಿನ ದಿಗವನಾರೇಪಲ್ಲಿ ಭಾವಿ (ಕಲ್ಯಾಣಿ) ನೀರನ್ನು ಅಶುಚಿಗೊಳಿಸಿದ ಬಗ್ಗೆ ಇಬ್ಬರು ಮಹಿಳೆಯರು ಬೆಂಗಳೂರು ಮೂಲದವರನ್ನು ಪ್ರಶ್ನಿಸಿದಾಗ ಈ ವಿಷಯ ದೊಡ್ಡದಾಗಿ ಎರಡೂ ಸಮುದಾಯಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿದಾಗ ತಕ್ಷಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಸುದ್ದಿ ತಿಳಿದು ಎರಡೂ ಸಮುದಾಯಗಳ ಜನರು ಗುಂಪು ಸೇರುತ್ತಿರುವುದನ್ನು ತಪ್ಪಿಸಲು ಪೊಲೀಸರು ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತನ್ನು ನಿಯೋಜಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
'ಮಹಾತ್ಮರ ಆದರ್ಶ ಮೈಗೂಡಿಸಿಕೊಳ್ಳಿ'
ಮುಳಬಾಗಲು: ಸ್ವಾವಲಂಭಿ ಬದುಕನ್ನು ಯುವ ಜನಾಂಗ ರೊಢಿಸಿಕೊಳ್ಳ ಬೇಕು ಎಂದು ಗಾಂಧಿವಾದಿ ಉತ್ತನೂರು ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಉತ್ತನೂರು ಗ್ರಾಮದಲ್ಲಿ ಗುರುವಾರ ಭಾರತ ಸೇವಾದಳ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಹಾತ್ಮರ ಆದರ್ಶ ಅರಿತು ಬಾಳಿ, ಮುಂದೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯವೆಂದರು. ಕಾಮನೂರು ನಾರಾಯಣಸ್ವಾಮಿ, ಎಂವಿಕೆ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೆಂಕಟರೆಡ್ಡಿ ಮಾತನಾಡಿದರು. ಶಿಕ್ಷಕ ಎಂ.ಎ. ಮಂಜುನಾಥ್, ವಿ. ಶ್ರೀನಿವಾಸ್, ಎನ್. ಚೌಡಪ್ಪ, ಎಂ. ಸೋಮಪ್ಪ, ಎಂ. ವೆಂಕಟೇಶಪ್ಪ ಭಾಗವಹಿಸಿದ್ದರು..
ಪಿಎಸ್ಐಗೆ ಸಂತಾಪ
ಮುಳಬಾಗಲು: ಗುಂಡೇಟಿನಿಂದ ಸಾವಿಗೀಡಾದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರಿಗೆ ಪಟ್ಟಣದ ಡಿವಿಜಿ ಸರ್ಕಲ್ ಬಳಿ ಗುರುವಾರ ವಿವಿಧ ಸಂಘಟನೆಗಳ ವತಿಯಿಂದ ಸಂತಾಪ ವ್ಯಕ್ತಪಡಿಸಲಾಯಿತು. ಸರ್ಕಾರ ಮನಸ್ಸು ಮಾಡಿದ್ದರೇ ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಅಪಾಯದಿಂದ ಪಾರುಮಾಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು. ಮೃತರ ಕುಟುಂಬ ಸದಸ್ಯರಿಗೆ ಒಂದು ಕೋಟಿ ರು.ಗಳ ಪರಿಹಾರ ನೀಡಲು ಒತ್ತಾಯಿಸಿದರು. ತಾಲೂಕು ಕನ್ನಡ ಸಾಹಿತ್ಯ ಪಷತ್ ಅಧ್ಯಕ್ಷ ಮು.ಕೃ. ಪದ್ಮನಾಭರಾವ್, ಕಾರ್ಯದರ್ಶಿ ಶಂಕರಕೇಸರಿ, ಓಶಕ್ತಿ ಚಲಪತಿ, ವಕೀಲ ಜಯಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

