ಆಳುವ ಸರ್ಕಾರಗಳಿಂದ ಅನ್ನದಾತನ ಕಡೆಗಣನೆ
ಬಾಗೇಪಲಿ;್ಲ ದೇಶದ ಬೆನ್ನೆಲುಬಾಗಿರುವ ಅನ್ನದಾತನನ್ನು ಆಳುವ ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆರೋಪಿಸಿದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಸಂಭ್ರಮ ಸಮಿತಿ ಬಳಗ ಹಾಗೂ ಎಸ್.ಎನ್. ಸುಬ್ಬಾರೆಡ್ಡಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಂತಹ ಸರ್ಕಾರಗಳು ನಿರಂತರವಾಗಿ ದುಡಿದು ವಿಶ್ವಕ್ಕೆ ಅನ್ನವನ್ನು ನೀಡುವ ಅನ್ನದಾತನಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಮೀನಮೇಷ ಎಣಿಸುತ್ತವೆ ಎಂದು ಆರೋಪಿಸಿದರು.
ಜಮೀನುಗಳನ್ನು ಮಾರಿ ಗುಲಾಮರಾಗಬೇಡಿ, ನೀವು ಜಮೀನನ್ನು ಮಾರಿದ್ದೇ ಆದರೆ ನಿಮ್ಮ ಜನ್ಮದಲ್ಲಿ ಮತ್ತೇ ಜಮೀನು ಖರೀದಿಸಲು ಸಾಧ್ಯವಿಲ್ಲ, ಇದರಿಂದ ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳನ್ನು ಮಾರಾಟ ಮಾಡಬೇಡಿ ಎಂದು ರೈತರಿಗೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಮಾಜಿ ಸಚಿವ ವಿ. ಮುನಿಯಪ್ಪ ಮಾತನಾಡಿದರು. ಪ್ರೋ.ಕೆ.ಎಸ್. ಸಿದ್ದಪ್ಪ (ಆಧ್ಯಾತ್ಮಿಕ), ರವಿ(ಅಂಚೆ), ಚೌಡಪ್ಪ(ಪರಿಸರ), ಪಿ.ಎನ್. ಲಕ್ಷ್ಮೀ(ಚಿತ್ರಕಲೆ), ವೇಣುಬಾಯಿ(ತೊಗಲುಗೊಂಬೆ), ಮುನಿರೆಡ್ಡಿ(ಜಾನಪದ), ಶ್ರೀರಾಮಪ್ಪ(ಮಡಿವಾಳ), ನರಸಿಂಹಪ್ಪ(ಸವಿತಾ ಸಮಾಜ), ತೋಟಿ ಆದಿನಾರಾಯಣಪ್ಪ(ತೋಟಿ), ತಲಾರಿ ನರಸಿಂಹಪ್ಪ(ತಲಾರಿ),ನಿರಗಂಟಿ ಲಕ್ಷನ್ನ( ನಿರಗಂಟಿ) ಸೇರಿದಂತೆ ರಂಗೋಲಿ ಸ್ಪರ್ಧೆ ಮತ್ತು 10 ನೇ ತರಗತಿ ಪಿಯು ಹಾಗೂ ಪದವಿಗಳಲ್ಲಿ ಉತ್ತಮ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಡಾ.ಎಚ್.ಎನ್. ವೃತ್ತದಿಂದ ಕಲಾ ತಂಡಗಳಾದ ಕೀಲುಕುದರೆ, ವೀರಾಗಾಸೆ ಕುಣಿತ, ಡೊಳ್ಳುಕುಣಿತ, ನಾದಸ್ವರ, ಡೋಲು, ತಮಟೆವಾದ್ಯ, ಮುಂತಾದ ಕಲಾ ತಂಡಗಳ ಭವ್ಯ ಮೆರವಣಿಗೆ ಹಾಗೂ ರಾತ್ರಿ ಬಾಣಬಿರುಸುಗಳ ಪ್ರರ್ದಶನ ಅಕರ್ಷಕವಾಗಿ ನಡೆಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಎ. ಪದ್ಮ, ಗುಡಿಬಂಡೆ ತಹಸೀಲ್ದಾರ್ ಎಸ್. ಶೈಲಜಾ, ಸಂಕ್ರಾಂತಿ ಸಂಭ್ರಮ ಬಳಗದ ಸಂಚಾಲಕ ಎ.ಜಿ. ಸುಧಾಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

