ಕೋಲಾರ

ಸುಳ್ಳು ಆರೋಪ ಮಾಡುತ್ತಿರುವವರ ಬಂಧನಕ್ಕೆ ಎಸ್‌ಡಿಎಂಸಿ ಸದಸ್ಯರ ಆಗ್ರಹ

Published On :

ಬಂಗಾರಪೇಟೆ: ತಾಲೂಕಿನ ಹುದುಕುಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶಾಲಾ ಕಟ್ಟಡ ಗುಣ ಮಟ್ಟದಿಂದ ನಿರ್ಮಾಣ ಮಾಡುತ್ತಿದ್ದರೂ ಗ್ರಾಮದ ಎಚ್.ವಿ. ಶ್ರೀನಿವಾಸ್ ಎಂಬವರು ಸುಳ್ಳು ಆರೋಪ ಮಾಡಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ಸದರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಾಸಕರು ಶಂಕುಸ್ಥಾಪನೆ ಮಾಡಿದ್ದರು, ನಂತರ ಇದರ ಗುತ್ತಿಗೆಯನ್ನು ಪಂಚಾಯ್ತಿ ಸದಸ್ಯ ರವಿ ಪಡೆದು ಸರ್ಕಾರದ ಆದೇಶದಂತೆ ಶಾಲೆಯ ಎಸ್‌ಡಿಎಂಸಿ ಮತ್ತು ಶಾಲೆಯ ಶಿಕ್ಷಕರನ್ನು ಹಾಗೂ ಗ್ರಾಮಸ್ಥರ ವಿಶ್ವಾಸಪಡೆದು ಗುಣಮಟ್ಟದ ಕೆಲಸ ಮಾಡುತ್ತಿದ್ದರೂ ಎಚ್.ವಿ.ಶ್ರೀನಿವಾಸ್ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಸುಳ್ಳು ಸುದ್ದಿ ಹಬ್ಬಿಸಿ ಇಲಾಖೆಗೆ ದೂರು ನೀಡಿ ಜನರ ಗಮನ ಬೆರೆಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆಂದು ಆರೋಪ ಮಾಡಿದರು.
ಶ್ರೀನಿವಾಸ್ ಮಾಡಿರುವ ಆರೋಪದಲ್ಲಿ ಹುರಳಿಲ್ಲ ಒಂದು ವೇಳೆ ಕಳಪೆ ಕಾಮಗಾರಿಯಾಗಿದ್ದರು ಮೇಲಾಧಿಕಾರಿಗಳು ಕ್ರಮಕೈಗೊಳ್ಳಲಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಮಶೆಟ್ಟಿ, ಪಂಚಾಯ್ತಿ ಸದಸ್ಯ ರವಿ, ಪ್ರಕಾಶ್,ನಾರಾಯಣಪ್ಪ, ನಂಜಪ್ಪ, ಶಾಂತಮ್ಮ, ಚಂದ್ರಪ್ಪ,ನಾರಾಯಣಸ್ವಾಮಿ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.