ಲಕ್ಷ್ಮೀನರಸಿಂಹ ದೇವರ ಕಣಿವೆ ಬಳಿ ಜಲಾಶಯ ನಿರ್ಮಾಣಕ್ಕೆ ಒತ್ತಾಯ
ಗುಡಿಬಂಡೆ: ಗುಡಿಬಂಡೆ ಮತ್ತು ಗೌರಿಬಿದನೂರು ತಾಲೂಕುಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಪಟ್ಟಣದ ಹೊರವಲಯದ ಲಕ್ಷ್ಮೀನರಸಿಂಹ ದೇವರ ಕಣಿವೆ ಬಳಿ ಜಲಾಶಯ ನಿರ್ಮಿಸಬೇಕೆಂದು ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ಮುಂದಿನ ದಿನಗಳಲ್ಲಿ ಗುಡಿಬಂಡೆ ಸೇರಿದಂತೆ ನೆರೆಯ ಬಾಗೇಪಲ್ಲಿ, ಗೌರಿಬಿದನೂರು ತಾಲೂಕುಗಳಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗುವ ಸೂಚನೆಗಳಿವೆ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಿಂತನೆ ನಡೆಸಿ ಪರಿಹಾರ ಹುಡುಕಲು ತಂಡವೊಂದನ್ನು ನೇಮಿಸಿದ್ದರು. ಶಾಸಕರ ಸೂಚನೆ ಮೇರೆಗೆ ಹೋರಾಟ ತಂಡ ಮಳೆ ನೀರು ಸಂಗ್ರಹಣೆಗೆ ಯೋಗ್ಯವಾದ ಪ್ರದೇಶವನ್ನು ಗುರ್ತಿಸಿದೆ. ಗುಡಿಬಂಡೆ ಪಟ್ಟಣಕ್ಕೆ ಸಮೀಪದ ದೇವರ ಕಣಿವೆ ಬಳಿಯ ಸುಮಾರು ಒಂದು ಸಾವಿರ ಎತ್ತರದ ಎರಡು ಬೆಟ್ಟಗಳ ನಡುವೆ ಜಲಾಶಯ ನಿರ್ಮಿಸಿದರೆ ಅಪಾರ ಪ್ರಮಾಣದ ನೀರು ಸಂಗ್ರಹಿಸಲು ಸಾಧ್ಯ. ಇದನ್ನು ಅರಿತ ತಂಡ ಈ ಬಗ್ಗೆ ಉಪಸಭಾಪತಿ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅವರ ಗಮನಕ್ಕೆ ತಂದಿದೆ. ಸದರಿ ಯೋಜನೆ ಯಶಸ್ವಿಯಾದರೆ ಎರಡೂ ಪಟ್ಟಣಗಳ ನೀರಿನ ಬರ ನೀಗುವುದರ ಜೊತೆಗೆ ಜನತೆಯನ್ನು ಕಾಡುತ್ತಿರುವ ಪ್ಲೋರೈಡ್ ಸಮಸ್ಯೆ, ಅಂತರ್ಜಲಮಟ್ಟ ಕುಸಿತ ಮೊದಲಾದಂತಹ ಸಮಸ್ಯೆಗಳಿಗೆ ಪರಿಹಾರ ದೊರೆತು ಅಮೂಲ್ಯವಾದ ಜಲಸಿರಿಯನ್ನು ಉಳಿಸಿದಂತಾಗುತ್ತದೆ ಎಂದು ಸಮಿತಿ ಇತರ ಸಂಚಾಲಕರಾದ ಅಪ್ಸರ್, ಲಕ್ಷ್ಮೀಚಂದ್ರಪ್ಪ, ರಾಜಣ್ಣ, ವಾಲ್ಮಿಕಿ ಮುಖಂಡ ಎ. ನಾಗರಾಜು ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

