ಕೋಲಾರ

ಕ್ಷುಲ್ಲಕ ಕಾರಣಕ್ಕೆ ಐಟಿಐ ಮೇಲೆ ದಾಳಿ

Published On :

ಮಾಲೂರು: ಶಿಕ್ಷಕರೂಬ್ಬರು ತನ್ನ ಮಗನನ್ನು ಹೊಡೆದರೆಂದು ಆರೋಪಿಸಿ ವಿದ್ಯಾರ್ಥಿ ಕುಟುಂಬದವರು ಕಾಲೇಜು ಮೇಲೆ ದಾಳಿ ನಡೆಸಿ ಶಿಕ್ಷಕ ಸೇರಿದಂತೆ ವಿದ್ಯಾರ್ಥಿಗಳನ್ನು ಗಾಯಗೊಳಿಸಿರುವ ಘಟನೆ ಇಲ್ಲಿನ ಮಾಸ್ತಿ ರಸ್ತೆಯ ರಕ್ಷಿತಾ ಐಟಿಐನಲ್ಲಿ ಶನಿವಾರ ನಡೆದಿದೆ.
ದಾಳಿಗೆ ಐಟಿಐ ಕಾಲೇಜಿನ ಕಿಟಿಕಿ ಗಾಜುಗಳು ಸೇರಿದಂತೆ ವರ್ಕ್‌ಶಾಪ್ ಸಂಪೂರ್ಣ ಜಖಂಗೊಂಡಿದೆ. ಶಿಕ್ಷಕರ ಮೇಲಿನ ಹಲ್ಲೆ ತಡಯಲು ವಿದ್ಯಾರ್ಥಿಗಳು ಪ್ರತಿ ದಾಳಿ ನಡೆಸಿದ್ದು, ಎರಡು ಕಡೆಗಳಿಂದ 10 ಜನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವಿರ: ಇಲ್ಲಿನ ಮಾಸ್ತಿ ರಸ್ತೆಯ ರಕ್ಷಿತಾ ಐಟಿಐನಲ್ಲಿ ಮೊದಲ ವರ್ಷದ ವಿದ್ಯಾರ್ಥಿ ಅರ್ಬಾಜ್‌ಖಾನ್ ಹೋಂವರ್ಕ್ ಮಾಡಿದಿದ್ದ ಹಿನ್ನೆಲೆಯಲ್ಲಿ ಪೋಷಕರನ್ನು ಕರೆಸುವಂತೆ ಶಿಕ್ಷಕ ಮಂಜುನಾಥ್ ತಿಳಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಐಟಿಐಗೆ ಬಂದ ಅರ್ಬಾಜ್ ಸಹೋದರ ಮನೆಯಲ್ಲಿ ಇದೇ ರೀತಿ ವರ್ತಿಸುತ್ತಿದ್ದು, ಬುದ್ಧಿ ಹೇಳಿ ಎಂದು ಹೇಳಿದ್ದು, ಈ ಸಂದರ್ಭದಲ್ಲಿ ಶಿಕ್ಷಕ ಮಂಜುನಾಥ್ ಒಂದೇಟು ಹಾಕಿ ಬುದ್ದಿಮಾತು ಹೇಳಿದರು ಎನ್ನಲಾಗಿದೆ. ಈ ವಿಷಯ ಮನೆಯಲ್ಲಿ ತಿಳಿದು ಕೆರಳಿದ ಆತನ ತಂದೆ ಚಾನ್‌ಪಾಷ ಪೋನಿನ ಮೂಲಕ ಶಿಕ್ಷಕರನ್ನು ಬಯ್ದರಲ್ಲದೇ ಕುಟುಂಬದೊಂದಿಗೆ ಕಾಲೇಜಿಗೆ ಹೋಗಿ ಗಲಾಟೆ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಶಿಕ್ಷಕ ಮಂಜುನಾಥ್‌ನನ್ನು ಹೊರಗೆ ಎಳೆದು ತಂದು ಇಟ್ಟಿಗೆ, ಹೆಂಚಿನಿಂದ ಹಲ್ಲೆ ಮಾಡಿದ್ದಾರೆ. ಉಪನ್ಯಾಸಕಿ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಗಮನಿಸಿದ ಇತರೆ ವಿದ್ಯಾರ್ಥಿಗಳು ಅರ್ಬಾಜ್ ಖಾನ್ ಕುಟುಂಬದವರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಈ ಸಂಧರ್ಭದಲ್ಲಿ ಶಿಕ್ಷಕ ಮಂಜುನಾಥ್, ವಿದ್ಯಾರ್ಥಿಗಳಾದ ಅಬೀಷೇಕ್, ಮಧುಸೂಧನ್, ಹೇಮಂತ್ ಕುಮಾರ್, ಚಂದ್ರ ಹಾಗೂ ಗಲಾಟೆಗೆ ಕಾರಣವಾದ ಅರ್ಬಾಜ್‌ಖಾನ್, ಅತನ ತಂದೆ ಚಾನ್‌ಪಾಷ, ಸರ್ವರ್‌ಖಾನ್, ಖಾದಿರ್ ಗಾಯಗೊಂಡಿದ್ದು, ಎಲ್ಲರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ನಿಸ್ಸಾಹಯಕ: ಇಲ್ಲಿನ ರಕ್ಷಿತಾ ಐಟಿಐನಲ್ಲಿ ದಾಂದಲೆ ನಡೆಯುತ್ತಿದ್ದಾಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಸ್ತಿ ಕಡೆ ತರೆಳುತ್ತಿದ್ದ ಶಾಸಕ ಕೆ.ಎಸ್. ಮಂಜುನಾಥ್ ವಿಷಯ ತಿಳಿದು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಪೋಷಕರು ಹಾಗೂ ಐಟಿಐ ಸಂಸ್ಥೆಯವರೂಂದಿಗೆ ಮಾತುಕತೆ ಮಾಡುತ್ತಿದ್ದಾಗ ಪೋಷಕರ ಕಡೆಯವರು ಶಾಸಕರ ಎದುರೇ ಶಿಕ್ಷಕನನ್ನು ಹೊಡೆದಾಗ ಪರಿಸ್ಥಿತಿ ಮತ್ತೇ ಉಲ್ಬಣಗೊಂಡಿತು. ಶಾಸಕರ ಮಾತನ್ನು ಎರಡು ಕಡೆಯವರು ಕೇಳದ ಪರಿಸ್ಥಿತಿ ಉಂಟಾಯಿತು. ಈ ಸಂಧರ್ಭದಲ್ಲಿ ನಿಸ್ಸಾಹಾಯಕರಾದ ಶಾಸಕರು ಪೊಲೀಸರಿಗೆ ಪೋನಾಯಿಸಿ ಸ್ಥಳಕ್ಕೆ ಕರೆಸಿ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕಾಯಿತು.
ಆಸ್ವತ್ರೆ ಬಳಿ ಉದ್ನಿಗ್ನ ಪರಿಸ್ಥಿತಿ: ಐಟಿಐನಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡವರನ್ನು ಮಾಲೂರು ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಗಲಾಟೆ ವಿಷಯ ಪಟ್ಟಣದಾದ್ಯಂತ ಹರಡಿ ಆಸ್ವತ್ರೆ ಬಳಿ ಜನ ಜಮಾಯಿಸಿದರು. ಗಾಯಗೊಂಡ ಶಿಕ್ಷಕ ಮತ್ತು ದಾಳಿ ಮಾಡಿದವರು ಬೇರೆ ಬೇರೆ ಕೋಮಿಗೆ ಸೇರಿದವರಾದ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಂದೋಬಸ್ತು ಎರ್ಪಡಿಸಿದರಲ್ಲದೇ ಜನರನ್ನು ಚದುರಿಸಲು ಡಿವೈಎಸ್‌ಪಿ ಆಶೋಕ್ ಕುಮಾರ್ ಇಳಿದಿದ್ದರು. ಎಸ್‌ಪಿ ರಾಮ್‌ನಿವಾಸ್ ಸಪಟ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳಗಳ ಆರೋಗ್ಯ ವಿಚಾರಿಸದರಲ್ಲದೇ ಮತ್ತೇ ಗಲಾಟೆ ಮುಂದುವರೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇನ್ಸ್‌ಪೆಕ್ಟರ್ ಶಿವುಕುಮಾರ್ ರವರಿಗೆ ಆದೇಶಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.