ಕೋಲಾರ

ಲೋಕಾಯುಕ್ತ ಬಲೆಗೆ ಸರ್ವೆ ಸೂಪರ್‌ವೈಸರ್

Published On :

ಬಂಗಾರಪೇಟೆ: ಸರ್ಕಾರಿ ಜಮೀನನ್ನು ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಸರ್ವೆ ಸೂಪರ್ವೈಸರ್ 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ತಮ್ಮ ಬಲೆಗೆ ಹಾಕಿಕೊಂಡಿರುವ ಘಟನೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದಿದೆ.
ತಾಲೂಕು ಕಚೇರಿ ಬಳಿಯಿರುವ ಹೊಟೇನಲ್ಲಿ ತಾಲೂಕಿನ ರಾಮಪುರ ಗ್ರಾಮದ ಅಪ್ಪಾಲಪ್ಪ ಎಂಬುವರಿಂದ 50ಸಾವಿರ ಹಣ ಸ್ವಿಕರಿಸುವಾಗ ಸರ್ವೆ ಸೂಪವೈಸರ್ ನಾಗರಾಜ್ ಕೋಲಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಹುಲಿಬೆಲೆ ಪಂಚಾಯ್ತಿ ಸಮೀಪ ರಾಮಪುರ ಗ್ರಾಮದ ಸರ್ವೆ ನಂಬರ್ 34ಪಿ10ಗೆ ಸಂಬಂಧಿಸಿ ಪಿ ನಂಬರ್‌ನಲ್ಲಿ ಒಂದೂ ಕಾಲು ಎಕರೆ ಜಮೀನನ್ನು ಪೋಡಿ ಮಾಡಿಕೊಡಲು ನ್ಯಾಯಾಲಯದ ಆದೇಶವಿದ್ದರೂ ಎರಡೂವರೆ ಲಕ್ಷ ರು. ಲಂಚ ಕೇಳಿದ್ದ ಎನ್ನಲಾಗಿದೆ. ರೈತ ಅಪ್ಪಾಲಪ್ಪ ಅಷ್ಟು ಪ್ರಮಾಣದ ಹಣ ನೀಡಲು ಆಗುವುದಿಲ್ಲ ಎಂದು ಅಧಿಕಾರಿಯನ್ನು ಕಾಡಿ ಬೇಡಿ ಎರಡು ಲಕ್ಷಕ್ಕೆ ಒಪ್ಪಿಸಿದ್ದ. ಅದರಂತೆ ಶನಿವಾರ 50ಸಾವಿರ ಹಣ ನೀಡಲು ಕಚೇರಿಗೆ ಬಂದರು.
ಕಚೇರಿಯಲ್ಲಿ ವ್ಯವಹಾರ ಬೇಡ ಎಂದು ಪಕ್ಕದಲ್ಲೆ ಇದ್ದ ಹೊಟೇಲ್‌ಗೆ ಹೋಗಿ ರೈತನಿಂದ ಅಧಿಕಾರಿ ಹಣ ಪಡೆಯುವಾಗ ಕೋಲಾರದ ಲೋಕಾಯುಕ್ತ ಎಸ್ಪಿ ಮೋಹನ್ ದಾಸ್ ನೇತೃತ್ವದಲ್ಲಿ ಡಿವೈಎಸ್ಪಿ ರಾಮಮೂರ್ತಿ ಮತ್ತು ಸಿಐ ಅಶ್ವಥನಾರಾಯಣ ದಾಳಿ ಮಾಡಿ ಹಣ ಸಮೇತವಾಗಿ ಆರೋಪಿಯನ್ನು ಹಿಡಿದರು. ಈ ಪ್ರಕರಣದಿಂದ ಇತರೇ ಅಧಿಕಾರಿಗಳಲ್ಲಿ ನಡುಕ ಉಂಟಾಗಿತ್ತು. ನಂತರ ಆರೋಪಿ ನಾಗರಾಜ್‌ರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಆಗಾಗ ಪಟ್ಟಣದಲ್ಲಿ ಲೋಕಾಯುಕ್ತರು ಬಂದು ದಾಳಿ ಮಾಡುತ್ತಿದ್ದರೂ ರೈತರಿಂದ ಹಣ ಪೀಕುವುದು ಮಾತ್ರ ನಿಂತಿಲ್ಲ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧಿಕಾರಿಗಳು ಲಂಚಕ್ಕಾಗಿ ರೈತರನ್ನು ಪೀಡಿಸಬಾರದು ಅದು ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿದ್ದರೂ ರೈತರ ಶೋಷನ ಮಾತ್ರ ನಿಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.