ಕೋಲಾರದಲ್ಲಿ ಪಲ್ಸ್ ಪೋಲಿಯೊ ಯಶಸ್ವಿ
ಬಂಗಾರಪೇಟೆ: ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಪೋಲಿಯೊ ಮುಕ್ತ ರಾಜ್ಯವಾಗಿ ಮಾಡಲು ಪೋಷಕರು ಸಹಕರಿಸುವಂತೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕರೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಎರಡು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲದಿರುವುದು ಸಂತೋಷದ ವಿಷಯವಾಗಿದ್ದು ಈ ಮಾರಕ ಪಿಡುಗನ್ನು ದೇಶದಿಂದಲೇ ಓಡಿಸಲು ಎಲ್ಲ ಪೋಷಕರ ಸಹಕಾರ ಅಗತ್ಯ ಎಂದರು.
ಸರ್ಕಾರ ಬಡ ರೋಗಿಗಳ ಹಿತದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗೆ ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಟ್ಟಿದೆ ವಿನಾಕಾರಣ ಔಷಧಿಗಳನ್ನು ಹೊರಗಡೆ ಪಡೆಯಲು ಚೀಟಿ ಬರೆದು ಕೊಡಬಾರದು ಹಾಗೂ ರೋಗಿಗಳನ್ನು ಹಣ ಪಡೆಯಬಾರದು ಇದು ಕಂಡು ಬಂದರೆ ಮುಲಾಜಿಲ್ಲದೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ತಾಲೂಕು ವೈಧ್ಯಾಧಿಕಾರಿ ಡಾ.ಕಮಲಾಕರ್, ತಹಸೀಲ್ದಾರ್ ಉಷಾ, ಇಒ ಕೆ.ಎಸ್. ಭಟ್, ವೃತ್ತ ನಿರೀಕ್ಷಕ ವೆಂಕಟಾಚಲಪತಿ, ಪುರಸಭೆ ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್ ಇದ್ದರು.
ಟೇಕಲ್ನಲ್ಲಿ ಜಿಪಂ ಸದಸ್ಯರಿಂದ ಕಾರ್ಯಕ್ರಮಕ್ಕೆ ಚಾಲನೆ
ಟೇಕಲ್: ಜಿಪಂ ಅಧ್ಯಕ್ಷ ತೋಪಲ್ಲಿ ನಾರಾಯಣಸ್ವಾಮಿ ಅವರ ಅನುದಾನದಡಿ ಟೇಕಲ್ ಸಮೀಪದ ಹುಳದೇನಹಳ್ಳಿಯಲ್ಲಿ ನಿರ್ಮಿಸುತ್ತಿರುವ ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡದ ಸುತ್ತಲೂ ಕಾಂಪೌಂಡ್ಗೆ ಜಿಪಂ ಅನುದಾನದಡಿ 10 ಲಕ್ಷ ರು. ಮಂಜೂರಾಗಿದೆ.
ಆದಷ್ಟೂ ಬೇಗ ಕಾಮಗಾರಿ ಮಾಡಲಾಗುವುದೆಂದು ಟೇಕಲ್ ಜಿಪಂ ಸದಸ್ಯೆ ರತ್ನಮ್ಮನಂಜೇಗೌಡ ತಿಳಿಸಿದರು. ಟೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್ಪೋಲಿಯೊ ಹನಿಯನ್ನು ಮಗುವಿಗೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಉತ್ತಮವಾಗಿದ್ದು 5 ವರ್ಷದ ಎಲ್ಲಾ ಮಕ್ಕಳು ಪೋಲಿಯೊ ಹನಿ ತಪ್ಪದೆ ಹಾಕಿಸಿಕೊಳ್ಳಬೇಕೆಂದರು.
ತಾಪಂ ಸದಸ್ಯೆ ನಿರ್ಮಲಾಆಂಜಿನಪ್ಪ ಮಾತನಾಡಿ, ಟೇಕಲ್ ಮತ್ತು ಕೆ.ಜಿ. ಹಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಹೆಚ್ಚು ಫ್ಲೋರೈಡ್ ಅಂಶ ಹೊಂದಿದ್ದು ಈ ಬಗ್ಗೆ ಈ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಫ್ಲೋರೈಡ್ ಮುಕ್ತ ಕುಡಿಯುವ ನೀರಿನ ಕೇಂದ್ರಗಳನ್ನು ನಿರ್ಮಿಸಲು ತಾಪಂ ಸಭೆಯಲ್ಲಿ ವಿಚಾರ ಮಂಡಿಸಿದ್ದರೂ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಹುಣಸಿಕೋಟೆ ತಾಪಂ ಸದಸ್ಯೆ ಮಂಜುಳಾ ವೆಂಕಟೇಶ್, ಕೆಜಿ ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮರಮೇಶ್, ವೈದ್ಯಾಧಿಕಾರಿ ಡಾ. ಪ್ರಕಾಶ್, ಹುಳದೇನಹಳ್ಳಿ ವೈದ್ಯೆ ಶೃತಿ, ಟೇಕಲ್ ಆಂಜಿನಪ್ಪ, ಆರೋಗ್ಯ ಇಲಾಖೆಯ ರಾಜು, ಸೆಲ್ವಿ ಇದ್ದರು.
ಶಿಡ್ಲಘಟ್ಟದಲ್ಲಿ ಶಾಸಕ ರಾಜಣ್ಣ ಚಾಲನೆ
ಶಿಡ್ಲಘಟ್ಟ: ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕು ಎಂದು ಶಾಸಕ ಎಂ. ರಾಜಣ್ಣ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಪೋಲಿಯೊ ಹನಿಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದರು.
ಪಟ್ಟಣ ಪ್ರದೇಶಲ್ಲಿ 4 ದಿನಗಳ ಕಾಲ ಹಾಗೂ ಗ್ರಾಮೀಣ ಪ್ರದೇಶದಲ್ಲಿ 3 ದಿನಗಳ ಕಾಲ ಲಸಿಕೆ ಹಾಕುವ ಕಾರ್ಯ ನಡೆಯಲ್ಲಿದ್ದು, ಮೊದಲ ದಿನ ಬೂತ್ಗಳಲ್ಲಿ ಲಸಿಕೆ ಹಾಕಲಾಗುತ್ತದೆ, ನಂತರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಕಾರ್ಯಕ್ರಮವನ್ನು ಮುಂದುವರೆಸಲಾಗಿತ್ತದೆ. ಆಯುಷ್ ವೈದ್ಯರಾದ ಮೇಘಶ್ರೀ, ಅಂಗನವಾಡಿ ಕಾರ್ಯಕರ್ತೆಯರಾದ ಎಸ್. ಭವ್ಯ, ಕನಕರತ್ಮಮ್ಮ, ಸುಭ್ರಮಣಿ, ವೆಂಕಟರೆಡ್ಡಿ, ಪಾಪಮ್ಮ, ಮಂಜುಳಮ್ಮ ಇದ್ದರು. ಡಾ. ದನುಂಜನರೆಡ್ಡಿ, ಪಿ. ಶಿವಾರೆಡ್ಡಿ ಇದ್ದರು.
ಮಾಲೂರಿನಲ್ಲಿ....
ಮಾಲೂರು: ಪೋಲಿಯೊ ರೋಗವನ್ನು ಪರಿಣಾಮಕಾರಿಯಾಗಿ ತೆಡಯಲು ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸರ್ಕಾರಿ ಆಸ್ವತ್ರೆ ವೈದ್ಯಾಧಿಕಾರಿ ಡಾ. ಶ್ರೀನಿವಾಸ ಗೌಡ ಹೇಳಿದರು.
ತಾಲೂಕು ಆಡಳಿತ, ತಾಪಂ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ಪೋಲಿಯೊ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕಾಡುತ್ತಿದ್ದ ಪೋಲಿಯೊ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರ 1995 ರಲ್ಲಿ ಪ್ರಾರಂಭಿಸಿದ ಪಲ್ಸ್ಪೋಲಿಯೊ ದೇಶದಲ್ಲಿ ಪರಿಣಾಮಕಾರಿಯಾಗಿದ್ದು, ಕಳೆದ ಎರಡು ವರ್ಷದಿಂದ ಒಂದೇ ಒಂದು ಪೋಲಿಯೊ ಪ್ರಕರಣ ದಾಖಲಾಗದಿರುವುದೇ ಸಾಕ್ಷಿ ಎಂದರು.
ತಾಪಂ ಸದಸ್ಯ ಲೋಕೇಶ್ ಮಾತನಾಡಿ, ಪೋಲಿಯೊ ರೋಗವನ್ನು ತಡೆಗಟ್ಟಬೇಕಾದರೆ ಪ್ರತಿ ಇಲಾಖೆಯ ಅಧಿಕಾರಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಅವರ ಗೈರು ಹಾಜರಿ ಕಾರ್ಯಕ್ರಮದ ಹುರುಪುಗೆ ತಡೆಯಾಗುತ್ತಿದೆ ಎಂದರು. ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ ಮಾತನಾಡಿದರು. ಜಿಪಂ ಸದಸ್ಯೆ ಯಶೋಧಮ್ಮ ಮಗುವಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಅನುರಾಧ, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಕ್ಷೇತ್ರಾಶಿಕ್ಷಣಾಧಿಕಾರಿ ಸುಬ್ರಮಣ್ಯ, ಕಂದಾಯ ಅಧಿಕಾರಿ ಬೀರಪ್ಪ, ಆರೋಗ್ಯ ಇಲಾಖೆಯ ಗೋವಿಂದು, ಎಂ.ಎನ್. ರಾಜು, ಸೋಮಶೇಖರ್ ಇದ್ದರು.
ಗೌರಿಬಿದನೂರಿನಲ್ಲಿ ....
ಗೌರಿಬಿದನೂರು; ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿ ಅವರನ್ನು ಪೋಲಿಯೊದಿಂದ ರಕ್ಷಿಸಬೇಕೆಂದು ನಾಮಗೊಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಘುನಾಥ್ ಕರೆ ನೀಡಿದರು.
ನಾಮಗೊಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ಯ ಗ್ರಾಮಗಳ 17 ಬೂತುಗಳಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು 100 ಮಂದಿ ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ನಿಯೋಜಿಸಲ್ಪಟ್ಟಿದ್ದಾರೆ ಎಂದು ತಿಳಿಸಿದರು.
19 ವರ್ಷದ ಸತತ ಪ್ರಯತ್ನದ ಮೂಲಕ ಭಾರತ ಪೋಲಿಯೊ ಮುಕ್ತ ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಟಿಪಿಎಸ್ ಸದಸ್ಯ ಪದ್ಮ ಪ್ರಕಾಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ರೂಪ, ಉಮಾಸಿಸ್ಟರ್, ಕುಮಾರ್, ಎಮ್.ಎನ್. ರಾಧಾಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

