ಕೋಲಾರ

ಶಿಕ್ಷಕರ ಸಂಘದ ಪದಾಧಿಕಾರಿಗಳ ಬದಲಾವಣೆ

Published On :

ಮಾಲೂರು: ತಾಲೂಕು ಸಂಘದ ಕಾರ್ಯಕಾರಿ ಸಮಿತಿಯ ನಡವಳಿಕೆಯಂತೆ ಸಂಘದ ಹಾಲಿ ಪ್ರಧಾನ ಕಾರ್ಯದರ್ಶಿ ಆರ್. ನರಸಿಂಹ ಹಾಗೂ ಖಂಜಾಚಿ ಅಶ್ವಥ್ ನಾರಾಯಣ್ಶೆಟ್ಟಿರನ್ನು ಅವರ ಸ್ಥಾನಗಳಿಂದ ತೆರವುಗೊಳಿಸುತ್ತಿರುವುದಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ತಾಲೂಕು ಕಾರ್ಯಕ್ರಮಗಳಿಗೆ ಸರಿಯಾಗಿ ಸ್ಪಂದಿಸದೆ ಸಂಘಧ ಧ್ಯೇಯೋದ್ದೇಶಗಳಿಗೆ ಭಂಗ ಉಂಟು ಮಾಡಿರುತ್ತಾರೆಂಬ ತಾಲೂಕು ಕಾರ್ಯಕಾರಿ ಸಮಿತಿಯ ನಡವಳಿಕೆಯ ವರಿದಿ ಅನ್ವಯ ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ ಸಂಘದ ಹಿತದೃಷ್ಟಿಯಿಂದ ಪ್ರಧಾನ ಕಾರ್ಯದರ್ಶಿ ಆರ್. ನರಸಿಂಹ ಹಾಗೂ ಖಜಾಂಚಿ ಅಶ್ವಥ್ನಾರಾಯಣ್ ಶೆಟ್ಟಿ ಅವರ ಸ್ಥಾನಗಳನ್ನು ತೆರವು ಗೊಳಿಸಿ ಅವರ ಸ್ಥಾನಗಳಿಗೆ ಎ.ಎಂ. ರವಿ(ಪ್ರಧಾನ ಕಾರ್ಯದರ್ಶಿ)ಹಾಗೂ ಎಚ್.ಈ. ಸುರೇಶ್ (ಖಂಜಾಚಿ) ರನ್ನು ಅನುಮೋದಿಸಲಾಗಿದೆ. ನೂತನ ಪದಾಧಿಕಾರಿಗಳು ಬೈಲಾ ನಿಯಮಗಳನ್ವಯ ಕಾರ್ಯ ನಿರ್ವಹಿಸಲು ಕೋರಿದ್ದಾರೆ.
ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿನಾರಾಯಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಹಿತ ದೃಷ್ಟಿಯಿಂದ ಮಹಿಳಾ ನಾಮಿನಿ ಉಪಾಧ್ಯಕ್ಷರಾಗಿ ಪಟ್ಟಣದ ಕುಂಬಾರ ಪೇಟೆ ಸರ್ಕಾರಿ ಶಾಲೆಯ ಮುನಿತಾಯಮ್ಮರನ್ನು ಹಾಗೂ ಲೆಕ್ಕ ಪರಿಶೋಧಕರಾಗಿ ಅಬ್ಬೇನಹಳ್ಳಿಯ ಸರ್ಕಾರಿ ಶಾಲೆಯ ಕೆ.ಎಂ. ಚಂದ್ರಪ್ಪರನ್ನು ಅಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.