ಕೋಲಾರ

ನಿತ್ಯಾನಂದ ಗಡಿಪಾರಿಗೆ ಕರವೇ ಆಗ್ರಹ

Published On :

ಕೋಲಾರ: ರಾಜ್ಯದಲ್ಲಿ ಮಠ ಸ್ಥಾಪಿಸಿ ಸಾಕಷ್ಟು ಆಸ್ತಿ ಸಂಪಾದಿಸಿರುವ ಬಿಡದಿಯ ಕಪಟ ಸ್ವಾಮಿಯಾದ ನಿತ್ಯಾನಂದ ಕನ್ನಡಿಗರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದರಿಂದ ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ವೇದಿಕೆಯ ಕಾರ್ಯಕರ್ತರು ನಿತ್ಯಾನಂದನ ಅಣುಕು ಶವಯಾತ್ರೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ಕುಮಾರ್ ರಾಜು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ. ರಾಘವೇಂದ್ರ ಈ ಸಂದರ್ಭದಲ್ಲಿ ಮಾತನಾಡಿ ರಾಮನಗರ ಜಿಲ್ಲೆಯು ಬಿಡದಿಯ ಬಳಿ ಧಾರ್ಮಿಕ ಕ್ಷೇತ್ರಕ್ಕಾಗಿ 2 ಎಕರೆ ಭೂಮಿಯನ್ನು ಪಡೆದು, ನಂತರ ಸರ್ಕಾರಕ್ಕೆ ಮೋಸ ಮಾಡಿ 20 ಎಕರೆ ಭೂಮಿಯನ್ನು  ಲಪಟಾಯಿಸಿರುವುದಲ್ಲದೆ ಕನ್ನಡಿಗರ ಬಗ್ಗೆ ಹೊರ ರಾಜ್ಯದಲ್ಲಿ ಲಘವಾಗಿ ಮಾತನಾಡುವ ಮೂಲಕ ಉದ್ದಟತನ ಪ್ರದರ್ಶಿಸಿರುವುದರಿಂದ ಸರ್ಕಾರ ನಿತ್ಯಾನಂದನ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ವಂಚಕ ನಿತ್ಯಾನಂದನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇದೇ ಜ.24 ರಂದು ವಿಧಾನಸೌಧ ಚಲೋ ಚಳವಳಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ಜಿ. ಮಂಜುನಾಥ ಗೌಡ, ಎಸ್.ಎಂ. ರಾಜ್, ಕೂಟೇರಿ ನಾಗರಾಜ್, ಬೆಗ್ಲಿ ಶ್ರೀನಿವಾಸ್, ಪ್ರಭಾಕರ್ಗೌಡ, ಲೋಕೇಶ್, ಎಂ. ಮುನಿರಾಜು, ಎಂ.ವಿ. ನಾರಾಯಣಸ್ವಾಮಿ, ಮುರಳಿಮೋಹನ್, ವೆಂಕಟೇಶ್, ನಂದೀಶ್ಗೌಡ, ಲಕ್ಷ್ಮಿದೇವಿ, ಮುನಿರತ್ನ, ಕಮಲಮ್ಮ,ಲತಾಬಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.