ಕೋಲಾರ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ

Published On :

ಗೌರಿಬಿದನೂರು: ದಲಿತ ಸಂಘಟನೆಗಳ ಯುವ ಒಕ್ಕೂಟ ನಿವೇಶನ ರಹಿತ ವೇದಿಕೆ ಹಾಗೂ ಭ್ರಷ್ಟಾಚಾರ ವಿರೋಧಿ ಸಮಿತಿ ಆಶ್ರಯದಲ್ಲಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ಬೇಡಿಕೆಗಳು: ವಿದ್ಯಾನಿಧಿ ಪಬ್ಲಿಕ್ ಶಾಲೆಯು ಆಕ್ರಮಿತ ಮಾಧನಹಳ್ಳಿ ಸರ್ವೇ ನಂ.11,12,13,ರ ಒಂಡುಬಿಟ್ಟ ಭೂಮಿಯನ್ನು ಸರ್ಕಾರ  ಹಾಗೂ ಜಿಲ್ಲಾಧಿಕಾಗಳ ಆದೇಶದಂತೆ ಕೂಡಲೇ ಹದ್ದುಬಸ್ತು ನಿಗದಿಗೊಳಿಸಿ ರಾಜೀವ್ಗಾಂಧೀ ಹೌಸಿಂಗ್ಕಾರ್ಪೋರೇಷನ್ ಅವರಿಗೆ ಅನುಕೂಲವಾಗುವಂತೆ ಪುರಸಭೆಗೆ ಬೌಗೋಳಿಕವಾಗಿ ಹಸ್ತಾಂತರಿಸಬೇಕು. ಹಾಗೂ ವಿದ್ಯಾನಿಧಿ ಪಬ್ಲಿಕ್ ಶಾಲೆಯು ಅತಿಕ್ರಮಿಸಿರುವ ಪುರಸಭೆಗೆ ಸೇರಿರುವ ನಂಜಪ್ಪ ಲೇಔಟ್ನ ಸಾರ್ವಜನಿಕ ಪಾರ್ಕ್ ಮತ್ತು ಜಾಗ ಕೂಡಲೇ ಅಳತೆ ಮಾಡಿ ಸರ್ಕಾರದ ವಶಕ್ಕೆ ಪಡೆಯಬೇಕು ಹಾಗೂ ಸಾರ್ವಜನಿಕರಿಗೆ ಅರ್ಪಿಸಬೇಕು. ಹಾಗೂ ಗೌರಿಬಿದನೂರು ಪಟ್ಟಣದಲ್ಲಿ ಎಲ್ಲಾ ಜಾತಿಯ ನಿಜವಾದ ಬಡವರನ್ನು ಹಾಗೂ ನಿವೇಶನ ರಹಿತರನ್ನು ಗುರ್ತಿಸಿ ಸರ್ವೇ ಮಾಡಿ ನಿಜವಾದ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ದಲಿತ ಮುಖಂಡರಾದ ಕಡಬೂರು ಅಶ್ವತ್ಥ, ಉದಯ್ಕುಮಾರ್, ಅಂಜನ್, ಅಂಜನ ಮೂರ್ತಿ, ಬಷೀರ್ ಅಹ್ಮದ್ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.