ಕೋಲಾರ

ನೀರಾವರಿ ಸಲಹಾ ಮಂಡಳಿಯಿಂದ ನಿವೃತ್ತ ಎಂಜಿನಿಯರ್ಗಳ ವಜಾಕ್ಕೆ ಒತ್ತಾಯ

Published On :

ಕೋಲಾರಛ ರಾಜ್ಯ ನೀರಾವರಿ ಸಲಹಾ ಮಂಡಳಿಯಿಂದ ನಿವೃತ್ತ ಇಂಜಿನಿಯರುಗಳಾದ ಕೆ.ಸಿ. ರೆಡ್ಡಿ ಮತ್ತು ದೇಸಾಯಿಯವರನ್ನು ವಜಾಗೊಳಿಸಬೇಕೆಂದು ಪ್ರೋಗ್ರೇಸೀವ್ ಪೀಪಲ್ಸ್ ಇನ್ಸಿಟಿಟ್ಯೂಟ್ನ ಸಂಚಾಲಕರಾದ ಎ.ಟಿ. ಕೃಷ್ಣನ್, ಮತ್ತು ಅಬ್ಬಣಿ ಶಂಕರ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.  
ದಿ. ದೇವರಾಜ ಅರಸುರವರನ್ನು ಬಿಟ್ಟರೆ ತದನಂತರ ಬಂದ 14 ಮುಖ್ಯಮಂತ್ರಿಗಳು 14 ಸರ್ಕಾರಗಳು ರಾಜ್ಯಭಾರ ಮಾಡಿದರು ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಆಗಿಲ್ಲ. ಡಾ.ಪರಮಶಿವಯ್ಯ ವರದಿ, ಎತ್ತಿನಹೊಳೆ, ಮಧುಸೀತಪ್ಪನವರ ಅಘನಾಶಿನಿ ಹಾಗೂ ಭದ್ರ ನದಿಗಳಿಂದ ನೀರು ತರುವ ವರದಿಗಳು ಕೇವಲ ಪ್ರಚಾರದ ವಸ್ತುಗಳು ಅನುಷ್ಠಾನಕ್ಕೆ ಪ್ರಯತ್ನಗಳಾಗಿಲ್ಲವೆಂದು ತಿಳಿಸಿದ್ದಾರೆ. ಜನತೆಯ ಆಶಯಗಳಿಗೆ ತಕ್ಕಂತೆ ಯೋಜನೆ ಅನುಷ್ಠಾನಗೊಳಿಸಿ ಬರದಿಂದ ಬಳಲುತ್ತಿರುವ ಜಿಲ್ಲೆಗಳಿಗೆ ನೀರಿನ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.


ಶ್ರೀರಾಮಸೇನೆಗೆ ಪದಾಧಿಕಾರಿಗಳ ಆಯ್ಕೆ
ಮುಳಬಾಗಲು: ಪಟ್ಟಣದ ಪ್ರಸನ್ನ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶ್ರೀರಾಮಸೇನೆ ಮುಳಬಾಗಲು ಶಾಖೆಯ ವಿವಿಧ ಘಟಕಗಳಿಗೆ ಜಿಲ್ಲಾ ಶ್ರೀರಾಮಸೇನೆ ಮುಖಂಡ ಆರ್.ವಿಶ್ವನಾಥ್ ಅವರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಘಟಕ ಜಿ.ರಮೇಶ್ರನ್ನು ಅಧ್ಯಕ್ಷರಾಗಿ, ನಾಗರಾಜ್, ಅಡಿಕೆ ಮಂಜುನಾಥ್, ವೇಣು ಉಪಾಧ್ಯಕ್ಷರಾಗಿ, ವಕೀಲ ಕೃಷ್ಣಮೂರ್ತಿ ಪ್ರಧಾನ ಕಾರ್ಯದರ್ಶಿಯಾಗಿ, ಇ.ಸರವಣ ಸಂಘಟನಾ ಸಂಚಾಲಕರಾಗಿ, ಪ್ರದೀಪ್, ವೇಣು, ಪ್ರಸನ್ನ ಕಾರ್ಯದರ್ಶಿಗಳಾಗಿ, ಕಿರಣ್ಕುಮಾರ್, ಖಚಾಂಚಿಸಂಪತ್ ಸಹಸಂಚಾಲಕರಾಗಿ, ಮನು ವೈಯುಕ್ತಿಕ ಸಲಹೆಗಾರರಾಗಿ, ನಗರ ಘಟಕ ಅಧ್ಯಕ್ಷರಾಗಿ ಆನಂದ್ ಅಧ್ಯಕ್ಷ, ಕೆ.ರಘುಪತಿ ಗೌರವಾಧ್ಯಕ್ಷ, ಡಿಶ್ ಮಣೆ, ಶ್ರೀನಾಥ್ ಮಂಜುನಾಥ್, ಬುಸಾಲಕುಂಟೆ ಮಧು ಉಪಾಧ್ಯಕ್ಷ, ಕುರುಬರಪೇಟೆ ಶಂಕರ್ ಪ್ರಧಾನ ಕಾರ್ಯದರ್ಶಿ, ಮಂಜುನಾಥ್, ಶ್ರೀನಿವಾಸ್, ರಾಜೇಶ್ ಕಾರ್ಯದರ್ಶಿಗಳು, ಚೇತನ್ ಸಂಘಟನಾ ಕಾರ್ಯದರ್ಶಿ, ನರೇಶ್ ಖಚಾಂಚಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.