ಬಿಲ್ಕಲೆಕ್ಟರ್ಗಳ ಬಡ್ತಿ: ಅವ್ಯವಹಾರ
ಕ.ಪ್ರ.ವಾರ್ತೆ ಕೋಲಾರ್ಣ ಜ. 21
ಗ್ರಾಪಂ ಬಿಲ್ ಕಲೆಕ್ಟರ್ಗಳಿಗೆ ಕಾರ್ಯದರ್ಶಿಯಾಗಿ ಮತ್ತು ಗ್ರೇಡ್-1 ಹೊಂದಿರುವವರಿಗೆ ಪಿಡಿಒಗಳಾಗಿ ಬಡ್ತಿ ನೀಡುವುದಕ್ಕೆ ವರ್ಗಾವಣೆಗೂಂಡಿರುವ ಸಿಇಒ ಝುಲ್ಫಿಖಾರ್ ಉಲ್ಲಾ ಅವರು ಕಾನೂನು ಬಾಹಿರವಾಗಿ ಪ್ರಕ್ರಿಯೆ ನಡೆಸಿದ್ದಾರೆಂಬ ದೂರನ ಮೇರೆಗೆ ಬಡ್ತಿಗೆ ಸಂಬಂಧಿಸಿದ ಕಡತವನ್ನು ಪರಿಶೀಲನೆಗಾಗಿ ತಮಗೊಪ್ಪಿಸಬೇಕೆಂದು ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ನೂತನ ಸಿಇಒರವರಿಗೆ ಪತ್ರ ಬರೆದಿದ್ದಾರೆ.
ಗ್ರಾಪಂನಲ್ಲಿ ಅನೇಕ ವರ್ಷಗಳಿಂದ ಬಿಲ್ ಕ್ಕಲೆಕ್ಟರ್ಗಳಾಗಿ ಕೆಲಸ ನಿರ್ವಹಿಸಿರುವವರಿಗೆ ಕಾನೂನು ಪ್ರಕಾರ ಬಡ್ತಿ ನೀಡಬೇಕು. ಇದು ಆಡಳಿತಾತ್ಮಕ ವಿಚಾರವಾದರೂ ಜಿಪಂ ಸಾಮಾನ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಜಿಪಂ ಅಧ್ಯಕ್ಷರ ಗಮನಕ್ಕೆ ತಂದು ಪಾರದರ್ಶಕವಾಗಿ ಬಡ್ತಿ ನೀಡಬೇಕಾದದ್ದು ಅಧಿಕಾರಿಗಳ ಕರ್ತವ್ಯ. ಆದರೆ, ಈ ಹಿಂದಿನ ಸಿಇಒ ಅವರು ತಮ್ಮ ಗಮನಕ್ಕೆ ಯಾವುದೇ ವಿಚಾರ ತರದೆ ಏಕ ಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದಾರೆಂದು ಅಕ್ಷೇಪಿಸಿದ್ದಾರೆ.
ವರ್ಗಾವಣೆಯಾದ ನಂತರ ಯಾವುದೇ ಕಡತಗಳ ವಿಲೇವಾರಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ವರ್ಗಾವಣೆಯಾಗಿರುವ ಸಿಇಒ ಝುಲ್ಫಿಖಾರ್ ಉಲ್ಲಾ ಅವರು, ಸೋಮವಾರ ನೂತನ ಸಿಇಒರವರಿಗೆ ಅಧಿಕಾರ ಹಸ್ತಾಂತರ ಮಾಡಿದ ಬಳಿಕ ರಾತ್ರೋರಾತ್ರಿ ಮನೆಗೆ ಕಡತಗಳನ್ನು ತರಿಸಿಕೊಂಡು ತುರ್ತಾಗಿ ಕಡತಗಳ ವಿಲೇವಾರಿ ಮಾಡಿದ್ದಾರೆಂದು ಅನೇಕರು ತಮಗೆ ಮೌಖಿಕವಾಗಿ ದೂರು ನೀಡಿರುವ ಹಿನ್ನಲೆಯಲ್ಲಿ ಬಡ್ತಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆಗಾಗಿ ಅವಕಾಶ ಮಾಡಿಕೊಡುವಂತೆ ನೂತನ ಸಿಇಒರವರಿಗೆ ಪತ್ರ ಬರೆದಿದ್ದೇನೆ. ಒಂದು ವೇಳೆ ಕಡತದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡುವೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.
ಸಾಮಾನ್ಯ ಸ್ಥಾಯಿ ಸಮಿತಿ ಸದಸ್ಯರನ್ನು ಹಾಗೂ ಜಿಪಂ ಅಧ್ಯಕ್ಷ ತಮ್ಮನ್ನು ಕತ್ತಲಿನಲ್ಲಿಟ್ಟು ಗುಟ್ಟಾಗಿ ಬಡ್ತಿ ಪ್ರಕ್ರಿಯೆ ನಡೆಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ, ಹಣಕಾಸಿನ ವ್ಯವಹಾರ ನಡೆದಿದೆ ಎಂಬ ದೂರುಗಳು ಕೇಳಿ ಬಂದಿವೆ. ಕಡತ ನೋಡಿ ಪರಿಶೀಲನೆ ಮಾಡುವ ತನಕ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ, ನೂತನ ಸಿಇಒ ಅವರು ಇಂದು ಬೆಂಗಳೂರಿಗೆ ಹೋಗಿರುವುದರಿಂದ ಇಂದೇ ಕಡತ ಪರಿಶೀಲನೆ ಸಾಧ್ಯವಾಗಿಲ್ಲ. ಬುಧವಾರ ಕಡತ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆಂದು ಸ್ಪಷ್ಟಪಡಿಸಿದರು. ಈ ಹಿಂದೆಯೇ ಇದೇ ರೀತಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಝುಲ್ಫಿಖಾರ್ ಉಲ್ಲಾ ಅವರು ಕೆಲವು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದರು. ಆಗ ಚೌಡೇಶ್ವರಿ ಜಿಪಂ ಅಧ್ಯಕ್ಷರಾಗಿದ್ದರು. ಆಡಳಿತಾತ್ಮ ವಿಚಾರದಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುವಂತಿಲ್ಲವೆಂಬ ಉತ್ತರ ನೀಡಲಾಗಿತ್ತು. ಆದರೆ ತಾವು ಇದನ್ನು ಒಪ್ಪುವುದಿಲ್ಲ. ಜಿಪಂನ ಯಾವುದೇ ಆಡಳಿತಾತ್ಮಕ ವಿಚಾರಗಳು ಸಾಮಾನ್ಯ ಸ್ಥಾಯಿ ಸಮಿತಿಯ ಮುಂದೆ ಚರ್ಚೆ ಆಗಬೇಕು. ಇದರ ಅಧ್ಯಕ್ಷ ತಾವೇ ಆಗಿದ್ದರೂ ಯಾವುದೇ ವಿಚಾರಗಳು ಪ್ರಸ್ತಾಪವಾಗುತ್ತಿಲ್ಲ. ಬಿಲ್ಕಲೆಕ್ಟರ್ಗಳಿಗೆ ಬಡ್ತಿ ನೀಡುವ ವಿಚಾರದಲ್ಲಿ ತಮ್ಮನ್ನು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಹಿಂದಿನ ಸಿಇಒ ಅವರು ತಮ್ಮ ಮನೆಯಲ್ಲಿ ವ್ಯವಹಾರ ಮುಗಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರಲ್ಲದೆ, ವರ್ಗಾವಣೆಯಾದ ಮೇಲೆ ಹೊಸಬರಿಗೆ ಅಧಿಕಾರ ವಹಿಸಿದ ನಂತರವೂ ತಾವೇ ಸಿಇಒ ಎಂಬಂತೆ ವರ್ತಿಸಿರುವುದು ಬೇಸರ ತಂದಿದೆ. ಒಂದು ವೇಳೆ ಬಡ್ತಿ ನೀಡಲು ಯಾರಿಂದಾದರೂ ಹಣ ಪಡೆದಿರುವುದು ನಿಜವೇ ಆಗಿದ್ದಲ್ಲಿ ಕಾನೂನು ಪ್ರಕಾರ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವೆ ಎಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ವರ್ಗಾವಣೆಗೊಂಡಿರುವ ಸಿಇಒ ಮತ್ತೆ ಕೋಲಾರದಲ್ಲೇ ಮುಂದುವರೆಯಲು ಲಾಬಿ ನಡೆಸಿದ್ದು ಇದಕ್ಕೆ ಜಿಲ್ಲೆಯ ಕೆಲ ಜನಪ್ರತಿನಿಧಿಗಳ ಬೆಂಬಲವಿದೆ ಎನ್ನಲಾಗಿದೆ. ಜಿಪಂ ನೂತನ ಸಿಇಒ ಆಗಿ ಐಎಎಸ್ ಅಧಿಕಾರಿ ವಿನೂತ್ ಪ್ರಿಯ ಅವರು ಸೋಮವಾರ ಅಧಿಕಾರ ಸ್ವೀಕರಿಸಿ ಇಲಾಖೆಯ ಹಿರಿಯ ಅದಿಕಾರಿಗಳು ಕರೆದಿರುವ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ಬೆಂಗಳೂರಿಗೆ ತೆರಳಿದ್ದಾರೆ. ವರ್ಗಾವಣೆಯಾಗಿರುವ ಸಿಇಒ ಅವರಿಗೆ ಇನ್ನೂ ಜಾಗ ತೋರಿಸಿಲ್ಲ. ಕೆಲ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಮತ್ತೆ ಇವರನ್ನೇ ಮುಂದುವರೆಸಲು ಯತ್ನಿಸುತ್ತಿದ್ದಾರೆನ್ನಲಾಗಿದ್ದು ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಐಎಎಸ್ ಅಧಿಕಾರಿಗಳ ವಲಯದಲ್ಲಿ ಅಸಮಾಧಾನ ಬುಗಿಲೇಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲವೆಂಬ ಮಾತು ಕೇಳಿ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

