ಅಂಬಿಗರ ಪದಗಳು ಬದುಕಿಗೆ ಮಾರ್ಗಸೂಚಿ
ಗೌರಿಬಿದನೂರು: 12ನೇ ಶತಮಾನದಲ್ಲಿ ಸಮಾಜ ಸುಧಾರಕರಿಂದ ನಡೆದ ಸಮಾನತೆಯ ಕ್ರಾಂತಿ ಹಾಗೂ ಜಗತ್ತಿಗೆ ಸಾರಿದ ತತ್ವಗಳು ನಮ್ಮ ಬದುಕಿಗೆ ಮಾದರಿ. ಈ ಸಾಲಿನಲ್ಲಿ ಅಂಬಿಗರ ಚೌಡಯ್ಯನ ಪದ್ಯಗಳು ನಮ್ಮ ಸರಳ ಹಾಗೂ ಅರ್ಥಪೂರ್ಣ ಬದುಕಿಗೆ ಮಾರ್ಗ ಸೂಚಿಸುವಂತಿವೆ ಎಂದು ವಿಧಾನಸಭಾ ಉಪಸಭಾಪತಿ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ಆಸೆಗೆ ಮಿತಿಯಿಲ್ಲ. ಆಸೆ ಸಹಜ ಆದರೆ, ದುರಾಸೆ ಎಂದಿಗೂ ಒಳ್ಳೆಯದಲ್ಲ. ನಮ್ಮ ಬದುಕು ನೆಮ್ಮದಿಯಿಂದ ಇರಬೇಕಾದರೆ ಸರಳ ಹಾಗೂ ಸಾತ್ವಿಕ ಬದುಕನ್ನು ಕಟ್ಟಿಕೊಳ್ಳಬೇಕೆಂದು ಅಂಬಿಗರ ಚೌಡಯ್ಯ ತಮ್ಮ ಪದ್ಯಗಳಲ್ಲಿ ತಿಳಿಸಿದ್ದಾರೆ ಎಂದರು. ಪ್ರಾಸ್ತಾವಿಕ ಮಾತನಾಡಿದ ತಹಸೀಲ್ದಾರ್ ಡಾ.ಭಾಸ್ಕರ್, 12ನೇ ಶತಮಾನದ ಅಂಬಿಗರ ಚೌಡಯ್ಯ ಅವರು ಬೆಸ್ತ ಜನಾಂಗದಲ್ಲಿ ಹುಟ್ಟಿದರೂ, ಎಲ್ಲಾ ಜನಾಂಗದರನ್ನು ಅರಿತು ಬಾಳಬೇಕಿರುವ ಕುರಿತು, ಸಮಾನತೆಯಿಂದ ಬದುಕಿನ ಬಗ್ಗೆ ಉತ್ತಮವಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು. ಬೆಸ್ತ ಜನಾಂಗದ ಮುಖಂಡರು, ಡಿವೈಎಸ್ಪಿ ಚಿನ್ನಸ್ವಾಮಿ, ಇಒ ರೆಡ್ಡೆಪ್ಪ ಉಪಸ್ಥಿತರಿದ್ದರು. ಬಿಇಒ ಬೈಯಪ್ಪರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.
ಕಳಪೆ ಕಾಮಗಾರಿ: ತನಿಖೆಗೆ ಆದೇಶ
ಟೇಕಲ್: ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 2011-12ನೇ ಸಾಲಿನಲ್ಲಿ ಆರ್.ಐ.ಡಿ.ಎಫ್. ಅನುದಾನದಡಿ ಐದುವರೆ ಲಕ್ಷ ಅಂದಾಜು ವೆಚ್ಚದಲ್ಲಿ ಶಾಲಾ ಕಟ್ಟಡ ಕಟ್ಟಿ ಒಂದೂವರೆ ವರ್ಷದಲ್ಲೆ ಛಾವಣಿಯ ಸಿಮೆಂಟ್ ಕೆಳಗೆ ಬಿದ್ದಿದ್ದು, ನೆಲದ ಕಾಂಕ್ರಿಟ್ ಮಣ್ಣು ಸಹಿತ ಮೇಲಕ್ಕೆ ಎದ್ದಿದೆ. ನೆನ್ನೆಯಷ್ಟೆ ಶಾಸಕ ಕೆ.ಎಸ್. ಮಂಜುನಾಥಗೌಡರು ಸೈಕಲ್ ವಿತರಿಸಲು ಶಾಲೆಗೆ ಭೇಟಿ ನೀಡಿದಾಗ ಇದನ್ನು ಕಂಡು ಕೆಂಡಾ ಕಮಂಡಲರಾಗಿ ಸ್ಥಳದಲ್ಲಿದ್ದ ಬಿಇಒ ಸುಬ್ರಮಣ್ಯಂರನ್ನು ಕಾಮಗಾರಿ ವಿವ ಕೇಳಿದಾಗ ಪ್ರೌಢಶಾಲಾ ವಿಭಾಗದ ಶಾಲಾ ಸಿಬ್ಬಂದಿ ಈ ಹಿಂದೆ ಉಪಪ್ರಾಂಶುಪಾಲರಾಗಿದ್ದ ಮುನಿವೆಂಕಟಚಾರಿರವರ ಕಾಲದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟೇಶಪ್ಪ ಕಾಮಗಾರಿ ಮಾಡಿದ್ದು ಇದಕ್ಕೆ ಇನ್ನೂ ವಿದ್ಯುತ್ ನೀಡಿಲ್ಲ.
ಅದರ ಕೆಲಸ ಮಾಡಿಲ್ಲ ಹಾಗೂ ಅಂಗವಿಕಲ ಮಕ್ಕಳಿಗಾಗಿಯೆ ಒಂದು ರಾಂಪ್ (ಇಳಿಜಾರು) ಕಟ್ಟಿಲ್ಲವೆಂದು ತಿಳಿಸಿದಾಗ ಶಾಸಕರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಇಒ ಅವರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

