ಕೋಲಾರ

ಜೆಡಿಎಸ್ ಮುಖಂಡನ ಮೇಲೆ ಹಲ್ಲೆ: ಪ್ರತಿಭಟನೆ

Published On :

ಚಿಂತಾಮಣಿ: ಕೋಲಾರದ ಪತ್ರಕರ್ತರ ಭವನ ಮುಂಭಾಗದಲ್ಲಿ ವಿನಾಕಾರಣ ಜೆಡಿಎಸ್ ಮುಖಂಡರಾದ ಮಂಜು ಮತ್ತು ರಮೇಶ್ ಅವರು ಏಕಾಏಕಿ ಡಿವೈಎಫ್ಐ ಮುಖಂಡ ವಿಜಯ್ಕೃಷ್ಣ ಅವರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಡಿವೈಎಫ್ಐ ತಾಲೂಕು ಶಾಖೆ ವತಿಯಿಂದ ನಗರದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಡಿವೈಎಸ್ಪಿ ಪೊಲೀಸ್ ಕಚೇರಿ ಮುಂಭಾಗದಲ್ಲಿ ಡಿವೈಎಫ್ಐ ತಾಲೂಕು ಸಂಘಟನೆಯ ಪದಾಧಿಕಾರಿಗಳು ಕೋಲಾರದ ಪತ್ರಕರ್ತರ ಭವನದ ಮುಂಭಾಗದಲ್ಲಿ ವಿನಾಕಾರಣ ಜೆಡಿಎಸ್ ಮುಖಂಡರಾದ ಮಂಜು ಮತ್ತು ರಮೇಶ್ ಅವರು ಏಕಾಏಕಿ ಡಿವೈಎಫ್ಐ ಮುಖಂಡ ವಿಜಯ್ಕೃಷ್ಣ ಅವರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ತಾಲೂಕು ಅಧ್ಯಕ್ಷ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ರಾಮು, ಮುಖಂಡರಾದ ನರಸಿಂಹ, ರಾಜು, ಬಾಬುರೆಡ್ಡಿ, ನರಸಿಂಹಪ್ಪ,ಗೋಪಾಲ್, ಶ್ರೀನಿವಾಸ್ ಯಾದವ್ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ


ಟೇಕಲ್: ಇಲ್ಲಿನ ಪ್ರೌಢಶಾಲಾ ಮಕ್ಕಳಿಗೆ ಆಟದ ಮೈದಾನಕ್ಕಾಗಿ ಶಾಲೆ ಪಕ್ಕದಲ್ಲಿರುವ 10 ಎಕರೆ ಸರ್ಕಾರಿ ಜಾಗವನ್ನು ಸ್ಥಳದಲ್ಲೇ ಮಂಜೂರು ಮಾಡುವಂತೆ ಶಾಸಕ ಮಂಜುನಾಥಗೌಡ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಕಾಯ್ದಿರಿಸಿ ಜಾಗವನ್ನು ಜಿಲ್ಲಾಧಿಕಾರಿ ಮುಖಾಂತರ ಟೇಕಲ್ ಪ್ರೌಢಶಾಲೆಗೆ ಉತ್ತಮ ಜಾಗ ನಿರ್ಮಿಸಿಕೊಡಲು ತಿಳಿಸಿದರು. ಇಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು.  ಇದೇ ವೇಳೆ ಶಾಸಕರು ಶಾಲಾ ಮೈದಾನಕ್ಕೆ ಎಸ್ಬಿಸಿ ಸಮಿತಿ ನೀಡಿದ ಮನವಿ ಪತ್ರಕ್ಕೆ ಸ್ಪಂದಿಸಿ ಸ್ಥಳ ವೀಕ್ಷಣೆ ಮಾಡಿದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ, ಆನೇಪುರದ ಹನುಮಂತಪ್ಪ, ಆರ್.ರಾಜಣ್ಣ, ರವಿಶಂಕರ್ ಮತ್ತಿತರರು ಮಾತನಾಡಿದರು.  ಬಿಇಒ ಸುಬ್ರಹ್ಮಣ್ಯಂ, ಎಸ್ಬಿಸಿ ಅಧ್ಯಕ್ಷ ಕೆ.ಬಿ.ನಾರಾಯಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ವೆಂಕಟಪತಿ,  ಪ್ರಾಂಶುಪಾಲ ಎ.ಕೆ.ಪಾಪಣ್ಣ, ಉಪ ಪ್ರಾಂಶುಪಾಲೆ ಪುಷ್ಪಾ, ತಾಪಂ ಸದಸ್ಯರಾದ ನಿರ್ಮಲಾ ಆಂಜಿನಪ್ಪ, ಮಂಜುಳಾ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.