ಆರೋಪಿಗಳ ಬಂಧನ; ಸಿಬ್ಬಂದಿಗೆ ಬಹುಮಾನ
ಮುಳಬಾಗಲು: ಕಳೆದ ಶುಕ್ರವಾರ ಬೈಕಿನಲ್ಲಿ ಬಂದು ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಬಹುಮಾನವನ್ನು ಕೋಲಾರ ಎಸ್ಪಿ ಡಾ. ರಾಮ ನಿವಾಸ್ ಸಫೆಟ್ ಘೋಷಿಸಿದ್ದಾರೆ.
ಡಿವೈಎಸ್ಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಂಧಿತರು ಕೆಜಿಎಫ್ ಉರಿಗಾಂ ಇಟಿ ಬ್ಲಾಕ್ನ ರಾಜಕುಮಾರ್, ಬಂಗಾರಪೇಟೆ ತಾಲೂಕಿನ ಅಜ್ಜಪನಹಳ್ಳಿ ಗ್ರಾಮದ ಸಂತೋಷ್ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕ, ಆರೋಪಿಗಳಿಂದ 17 ಲಕ್ಷರು. ಬೆಲೆಬಾಳುವ 580 ಗ್ರಾಮ್ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದರು. ಅಡಿಷನಲ್ ಎಸ್ಪಿ ಎಂ.ಐ. ಜಮೀಲ್, ಡಿವೈಎಸ್ಪಿ ಸಿದ್ದಪ್ಪನವರ ಮಾರ್ಗದರ್ಶನದಲ್ಲಿ ಮುಳಬಾಗಲು ಸರ್ಕಲ್ ಇನ್ಸ್ಪೆಕ್ಟರ್ ಎಂ. ಕೃಷ್ಣಪ್ಪ, ಪಿಎಸ್ಐಗಳಾದ ಮೇಲ್ವಿನ್ ಪ್ರಾನ್ಸಿಸ್, ಕೆ.ಶ್ರೀಧರ್, ಎಂ. ಶಂಕರಪ್ಪ ಹಾಗೂ ಸಿಬ್ಬಂದಿ ನಂಜುಂಡಗೌಡ, ನಾಗರಾಜ್, ಸುರೇಶ್, ಮುನಿವೆಂಕಟರೆಡ್ಡಿ, ರಾಮಪ್ಪ, ರಮೇಶ್, ಸುರೇಶ್, ವಿನಾಯಕ, ಗುರುಪ್ರಸಾದ್ ಮಂಜುನಾಥ್, ಅಮರನಾರಾಯಣ, ಸುಭಾಶ್ ಅವರನ್ನೊಳಗೊಂಡಂತೆ ಮೂರು ತಂಡರಚಿಸಲಾಗಿತ್ತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

