ಪಿಸ್ತೂಲ್ ತೋರಿಸಿ ನಗ, ನಾಣ್ಯ ಲೂಟಿ
ಬಾಗೇಪಲ್ಲಿ: ಸಿನಿಮೀಯ ಮಾದರಿಯಲ್ಲಿ ಮನೆ ಮಾಲೀಕರಿಗೆ ಪಿಸ್ತೂಲ್ ಮತ್ತು ಚಾಕು ತೋರಿಸಿ ಬೆದರಿಕೆ ಹಾಕಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಬಂಗಾರದ ಒಡವೆ ಹಾಗೂ ನಗದು ದೋಚಿರುವ ಘಟನೆ ಪಟ್ಟಣದ ಹೊರವಲಯದ ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ನಡೆದಿದೆ. ಬಸ್ ಡಿಪೋಗೆ ಹೋಗುವ ರಸ್ತೆಯಲ್ಲಿರುವಂತಹ ಬ್ರಹ್ಮಾನಂದರೆಡ್ಡಿ ಮನೆಗೆ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನುಗ್ಗಿದ 3 ಜನ ಡಕಾಯಿತರು ನಾಡ ಬಂದೂಕು ತೋರಿಸಿ ಮಾಲೀಕ ಬ್ರಹ್ಮಾನಂದರೆಡ್ಡಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಬಂಗಾರದ ಒಡವೆ ಮತ್ತು ನಗದನ್ನು ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಬ್ರಹ್ಮಾನಂದರೆಡ್ಡಿ ಅವರ ಚೈನು ಮತ್ತು ಉಂಗುರ, ಆತನ ಪತ್ನಿಯ ಬಳಿ ಇದ್ದ ಮಾಂಗಲ್ಯ ಸರ ಮತ್ತು ಉಂಗುರ ಪಡೆದು ಬೀರುವಿನಲ್ಲಿದ್ದ ಮಾಂಗಲ್ಯ ಸರ, ಓಲೆ, ಉಂಗುರ, ಬೆಳ್ಳಿ ಕಾಲು ಚೈನುಗಳು, ಕ್ಯಾಮೆರಾ ಮತ್ತು 5 ಸಾವಿರ ನಗದು ಹಣ, ಕಾರ್ಪೊರೇಷನ್ ಬ್ಯಾಂಕಿಗೆ ಸೇರಿದ ಎಟಿಎಂ ಕಾರ್ಡ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿದು ಎಸ್ಪಿ ದಿವ್ಯ.ವಿ. ಗೋಪಿನಾಥ್, ಡಿವೈಎಸ್ಪಿ ಚಿನ್ನಸ್ವಾಮಿ, ವೃತ್ತ ನಿರೀಕ್ಷಕ ಸಿ. ವಸಂತ್, ಉಪನಿರೀಕ್ಷಕ ವಿ. ಮುನಿರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಎಂ. ಕೃಷ್ಣಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

