ಕೋಲಾರ

ಲಂಚ ಪಡೆಯದೆ ಕಾರ್ಯ ನಿರ್ವಹಿಸಲು ಶಾಸಕರ ಸೂಚನೆ

Published On :

ಬಂಗಾರಪೇಟೆ: ಅಧಿಕಾರಿಗಳು ಲಂಚ ಪಡೆಯದಿದ್ದರೆ ಮಾತ್ರ ಸರ್ಕಾರದ ಯೋಜನೆಗಳು ಸಕಾಲಕ್ಕೆ ಅರ್ಹ ಫಲಾನುಬಿಗಳಿಗೆ ತಲುಪಲು ಸಾಧ್ಯ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಾರಹಳ್ಳಿ ಪಂಚಾಯ್ತಿಯಲ್ಲಿ ಗ್ರಾಮಸ್ಥರ ಕುಂದುಕೊರತೆ ಸ್ವೀಕರಿಸಿ ಮಾತನಾಡಿ, ನಾನು ಕ್ಷೇತ್ರದ ಯಾವುದೇ ಅಧಿಕಾರಿಗಳಿಂದ ಪರ್ಸೆಂಟೇಜ್ ಪಡೆಯುವುದಿಲ್ಲ, ವರ್ಗಾವಣೆಗಾಗಿ ಹಣ ಮುಟ್ಟುವುದಿಲ್ಲ. ಸರ್ಕಾರ ನೀಡುವ ವೇತನವನ್ನು ಅಧಿಕಾರಿಗಳು ಪಡೆದು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಿಕೊಡಬೇಕೆಂದು ಹೇಳಿದರು.
ಕೆಲವು ಪಿಡಿಒಗಳು ರಾಜಕೀಯ ಪಕ್ಷವೊಂದರ ಪರಕೆಲಸ ಮಾಡುತ್ತಿದ್ದು ಅವರು ರಾಜಕೀಯ ಮಾಡುವ ಉದ್ದೇಶವಿದ್ದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮಾಡಲಿ ಎಂದು ಹೇಳಿದರು. ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಜಾಗ ಖಾಲಿ ಮಾಡಿ ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ,ಪಂಚಾಯ್ತಿ ಅಧ್ಯಕ್ಷ ಶಾರದ ಶ್ರೀನಿವಾಸ್, ಸದಸ್ಯರಾದ ತಿಮ್ಮಾಪುರ ಕೃಷ್ಣಮೂರ್ತಿ, ಧನ್ವಂತ್ರಿ, ಗೌರಮ್ಮ, ಸಂದ್ಯ, ಪ್ರತಾಪ್,ಚಿನ್ನಿವೆಂಕಟೇಶ್, ಶಫಿ, ಮುನಿಸ್ವಾಮಿ,ಶ್ರೀರಾಮರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.