ಕಾಡಿನಿಂದ ನಾಡಿಗೆ ಬಂದ ನವಿಲು
ಬಂಗಾರಪೇಟೆ: ಕಾಡಿನಲ್ಲಿರಬೇಕಾದ ನವಿಲೊಂದು ಕಳೆದ ಒಂದು ತಿಂಗಳಿಂದ ಗ್ರಾಮದ ಕೋಳಿಗಳೊಂದಿಗೆ ಅನ್ಯೋನ್ಯವಾಗಿ ಬೆರತಿರುವುದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ತಾಲೂಕಿನ ಕಣಿಂಬೆಲೆ ಗ್ರಾಮದ ಸುಮಲತ ಎಂಬುವರ ಕೋಳಿಗಳ ಜೊತೆ ನವಿಲು ತಿಂಗಳಿಂದ ಬೆರೆತು ಆಹಾರ ತಿನ್ನುತ್ತಿದೆ. ಕತ್ತಲಾಗುತ್ತಿದ್ದಂತೆ ಪಕ್ಕದಲ್ಲೇ ಇರುವ ಹುಣಸೆಮರದಲ್ಲಿ ತಂಗುವುದು. ಗ್ರಾಮದ ಸಮೀಪದಲ್ಲೇ ಇರುವ ಕಾಡಿನಿಂದ ಈ ನವಿಲು ಬಂದು ಕೋಳಿಗಳ ಜೊತೆ ಉತ್ತಮ ಒಡನಾಟ ಬೆಳೆಸಿಕೊಂಡಿದೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡೊಡನೆ ನವಿಲು ಮೈಲುಗಟ್ಟಲೆ ಓಡಿ ಹೋಗುವುದು. ಆದರೆ ಕಣಿಂಬೆಲೆ ಗ್ರಾಮದಲ್ಲಿ ನಿತ್ಯ ಗ್ರಾಮಸ್ಥರಿಗೆ ದರ್ಶನ ನೀಡುವುದು ಯಾರೂ ಇದನ್ನು ತಿಟಲೆ ಮಾಡುವುದಿಲ್ಲ. ಕಾಡಿನಲ್ಲಿ ಆಹಾರ ಕೊರತೆಯಿಂದ ಗ್ರಾಮದತ್ತ ಮುಖ ಮಾಡಿರುವ ನವಿಲನ್ನು ಗ್ರಾಮಸ್ಥರು ಪ್ರೀತಿಯಿಂದ ಕಾಣುತ್ತಾರೆ. ಎರಡು ತಿಂಗಳ ಹಿಂದೆ ಮತ್ತೊಂದು ನವಿಲು ಬಂದಿತ್ತು. ಆದರೆ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿತ್ತಾದರೂ ಈ ನವಿಲನ್ನು ಮಾತ್ರ ಅರಣ್ಯ ಇಲಾಖೆಗೆ ಒಪ್ಪಿಸದೆ ಗ್ರಾಮದಲ್ಲೇ ಇರುವಂತೆ ನೋಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

