ಪ್ರಬಂಧ ಸ್ಪರ್ಧೆಯಲ್ಲಿ ಶ್ರೀಲಲಿತಾ ಪ್ರಥಮ
ಕೋಲಾರ: ಯುವ ಸಪ್ತಾಹ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಿಎಸ್ಸಿಯ ವಿದ್ಯಾರ್ಥಿನಿ ಸಿ.ಎಸ್.ಶ್ರೀಲತಾ ಪ್ರಥಮ ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿ ಯುವಜನತೆಯಲ್ಲಿ ವೀರಸನ್ಯಾಸಿ ವಿವೇಕಾನಂದರ ತತ್ವಗಳು, ಮೌಲ್ಯಗಳ ಕುರಿತು ಅರಿವು ಮೂಡಿಸುವ ಯತ್ನವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಾಮಿ ವಿವೇಕಾನಂದರು ಮತ್ತು ತರುಣ ಶಕ್ತಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಕಾಲೇಜಿನ ಹಲವಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು, ದ್ವಿತೀಯ ಬಿಎಸ್ಸಿಯ ಸಿ.ಎಸ್. ಶ್ರೀಲತಾ ಪ್ರಥಮ, ಎ.ಎಂ.ನಾಗವೇಣಿ-ದ್ವಿತೀಯ ಹಾಗೂ ಎಸ್. ಸಹನ-ತೃತೀಯ ಬಹುಮಾನ ಪಡೆದುಕೊಂಡರು.ಇಂದಿನ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಪರಿಹಾರವೇ ಕುರಿತ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಬಿಎಸ್ಸಿಯ ಎಸ್. ಸಹನ ಪ್ರಥಮ ಮತ್ತು ಪ್ರಥಮ ಬಿಎಸ್ಸಿಯ ಎಚ್.ಎಸ್. ಪ್ರತಿಮಾ ದ್ವಿತೀಯ ಬಹುಮಾನ ಗಳಿಸಿಕೊಂಡರು.
ಸ್ಪರ್ಧೆಗಳ ಉಸ್ತುವಾರಿಯನ್ನು ಸಂಸ್ಥೆಯ ಪ್ರಾಂಶುಪಾಲ ನಂದವಾಡಗಿ, ಉಪನ್ಯಾಸಕ ಹೇಮಮಾಲಿನಿ, ಸುಜಾತಾ, ಎಸ್. ರವೀಂದ್ರ ಮತ್ತಿತರರು ವಹಿಸಿದ್ದರು.
ಹಾಲು ಉತ್ಪಾದಕರ ನಿರ್ದೇಶಕರ ಮಂಡಳಿಗೆ ಫೆ.2ರಂದು ಚುನಾವಣೆ
ಮಾಲೂರು: ನಂಬಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ 11 ಸ್ಥಾನಗಳಿಗೆ ಮತದಾನ ಫೆ. 2ರಂದು ಭಾನುವಾರ ನಡೆಯಲಿದೆ ಎಂದು ಚುನಾವಣಾಧಿಕಾರಿ ಟಿ. ಕೃಷ್ಣಪ್ಪ ತಿಳಿಸಿದ್ದಾರೆ. ನಂಬಿಗಾನಹಳ್ಳಿ ಹಾಲು ಉತ್ವಾದಕರ ಸಂಘದ ನಿರ್ದೇಶಕ ಮಂಡಳಿಯ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ 7, ಪರಿಶಿಷ್ಠ ಜಾತಿ ಪಂಗಡಗಳಿಗೆ ತಲಾ 1,ಹಿಂದುಳಿಂದ ವರ್ಗ 1 ಹಾಗೂ ಮಹಿಳೆ 2 ಸ್ಥಾನಗಳಿವೆ. ಜ. 25 ನಾಮಪತ್ರ ಸಲ್ಲಿಸಿಕೆ ಕಡೆಯ ದಿನ, ಜ. 26 ಪರಿಶೀಲನೆ, ಜ. 27 ನಾಮಪತ್ರ ಹಿಂಪಡೆಯುವ ಕಡೆ ದಿನ ಹಾಗೂ ಚಿಹ್ನೆ ಹಂಚಿಕೆ, ಫೆ. 2 ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಸಂಜೆ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

