ಬರ ತಂಡ ಬಂದ್ರೂ ಬದಲಾಗ್ಲಿಲ್ಲ ಸ್ಥಿತಿ
ಕೆ.ರಮೇಶ್
ಬಂಗಾರಪೇಟೆ: ಕೇಂದ್ರ ಸರ್ಕಾರ ಬರಪೀಡಿತ ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ತಂಡ ಕಳುಹಿಸಿ ತಿಂಗಳಾದರೂ ಕ್ಷೇತ್ರದಲ್ಲಿ ಈವರೆಗೂ ಯಾವುದೇ ಬದಲಾವಣೆ ಕಾಣಿಲ್ಲ.
ಬರದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಿರುವ ಬರ ಕಾಮಗಾರಿ ಹಾಗೂ ಜಾನುವಾರುಗಳಿಗೆ ಮೇವು ಬ್ಯಾಂಕು, ಕುಡಿಯುವ ನೀರು, ಗೋಶಾಲೆ ಮತ್ತಿತರೆ ಕೆಲಸಗಳನ್ನು ತ್ವರಿತವಾಗಿ ಕೈಗೊಂಡು ಜನರಿಗೆ ನೆಮ್ಮದಿ ಕಲ್ಪಿಸಲು ಈ ಅಧ್ಯಯನ ತಂಡ ಬೇಟಿ ನೀಡಿರುವ ಉದ್ದೇಶವಾಗಿದೆ. ಕೇಂದ್ರ ಅಧ್ಯಯನ ತಂಡ ಬಂದು ಮೊದಲು ಗ್ರಾಮೀಣ ಭಾಗದಲ್ಲಿ ರೈತರು ಬೆಳೆದಿರುವ ಬೆಳೆಗಳು ನೀರಿಲ್ಲದೆ ಒಣಗಿರುವುದನ್ನು ಪರಿಶೀಲಿಸಬೇಕಿತ್ತು,ನಂತರ ರೈತರನ್ನು ಭೇಟಿ ಮಾಡಿ ಕಷ್ಟಸುಖಗಳನ್ನು ಖುದ್ದಾಗಿ ಆಲಿಸಬೇಕಿತ್ತು. ಆದರೆ ಕ್ಷೇತ್ರಕ್ಕೆ ಬಂದಿದ್ದ ತಂಡ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಮೊದಲೇ ಸಿದ್ಧಪಡಿಸಿದ್ದ ವೇಳಾ ಪಟ್ಟಿಯಂತೆ ಆಯ್ದ ಕಡೆಗೆ ಕರೆದುಕೊಂಡು ಹೋಗಿ ಹೆಸರಿಗೆ ಬಂದು ಹೋಗಿದ್ದಾರೆ ಹೊರತು ಅಧ್ಯಯನ ಮಾಡಿಯೇ ಇಲ್ಲ.
ಸರ್ಕಾರ ಕುಡಿಯುವ ನೀರಿಗೆ ಮಾತ್ರ ಹಣ ಮಂಜೂರು ಮಾಡುತ್ತಿದೆ ಆದರೂ ಅಧು ಫಲ ನೀಡುತ್ತಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕೆ ಹೋಗಿರುವುದರಿಂದ ಎಷ್ಚೇ ಬೋರ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಮಳೆಯಾಶ್ರಿತ ಪ್ರದೇಶವಾಗಿರುವ ಕ್ಷೇತ್ರದಲ್ಲಿ ಕೆರೆಗಳು ಒಣಗಿದ್ದರೆ ಮತ್ತೊಂದೆಡೆ ಮಳೆ ಬಂದರೂ ನೀರು ಶೇಖರಣೆಯಾಗುತ್ತಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿರುವುದೇ ಇದಕ್ಕೆ ಕಾರಣವಾಗಿದೆ. ಕೆರೆಗಳಲ್ಲಿ ಹೂಳೆತ್ತುವ ಯೋಜನೆ ಮಂದಗತಿಯಲ್ಲಿ ಸಾಗಿದೆ. ಪ್ಲೋರೈಡ್ ಅಂಶ ತುಂಬಿರುವ ಕ್ಷೇತ್ರದಲ್ಲಿ ಎಂಟು ವರ್ಷಗಳ ನಂತರ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಪ್ಲೋರೈಡ್ ಅಂಶ ಅಧಿಕವಾಗಿರುವ ಕಡೆಗಳಲ್ಲಿ ಶುದ್ದ ನೀರು ಪೂರೈಕೆಗೆ ಯಂತ್ರಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.
ಇಲ್ಲಿನ ಸ್ಥಿತಿಗತಿಗಳ ಬಗ್ಗೆ ತಂಡಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿವರಿಸಿದ್ದಾರೆ. ತಿಂಗಳಾದರೂ ವಾತಾವರಣದಲ್ಲಿ ಬದಲಾಗಿಲ್ಲ, ಉದ್ಯೋಗ ಖಾತ್ರಿಯಲ್ಲಿಯೂ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಇದರಿಂದ ಕಾರ್ಮಿಕರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ.
ಬರೀ ಭರವಸೆಗಳಲ್ಲೇ ಸರ್ಕಾರಗಳು ಜನರನ್ನು ಮರಳು ಮಾಡುತ್ತಿದೆ ಎಂಬುದು ಬುದ್ದಿ ಜೀವಿಗಳ ಆಪಾದನೆಯಾಗಿದೆ, ಇನ್ನಾದರು ಸರ್ಕಾರ ಕೂಲಿ ಕಾರ್ಮಿಕರ ವಲಸೆ ತಡೆದು ಇಲ್ಲೆ ಉದ್ಯೋಗ ಕಲ್ಪಿಸಲು ಮುಂದಾಗುವರೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

