ಅಂಬೇಡ್ಕರ್ ಭವನ ನಿರ್ಮಾಣ ವಿಳಂಬ; ಸಚಿವರಿಗೆ ಘೇರಾವ್
ಆಂಜನೇಯ ಅವರಿಗೆ ಮುತ್ತಿಗೆ ಹಾಕಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಳೆದ ಒಂದು ದಶಕದಿಂದ ಶಾಸಕರು, ಕೇಂದ್ರ ಸಚಿವರ ಧೋರಣೆ ವಿರುದ್ಧ ದಲಿತಪರ ಸಂಘಟನೆಗಳು ಕಿಡಿ ಕಾರಿದದರು. ಈ ಸಂದರ್ಭದಲ್ಲಿ ಸಚಿವರು ಪ್ರತಿಭಟನಾಕಾರರಿಗೆ ಸಮಾದಾನ ಹೇಳಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರವೇ ಸರ್ಕಾರಿ ಜಾಗ ಗುರ್ತಿಸಿ ಭವನ ನಿರ್ಮಾಣ ಮಾಡುವ ಭರವಸೆ ನೀಡಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಚಿವ ಆಂಜನೇಯ ಅವರಿಗೆ ಮನವಿ ಸಲ್ಲಿಸಿದರು. ಪಿ.ವಿ. ವೆಂಕಟರವಣಪ್ಪ, ಜಂಗಮಶೀಗೇನಹಳ್ಳಿ ದೇವರಾಜ್, ಕೃಷ್ಣಮೂರ್ತಿ, ನಾರಾಯಣಜಿ ಇದ್ದರು.
ವಾಲ್ಮೀಕಿ ಭವನ ನಿರ್ಮಾಣಕ್ಕೆ ಒಂದು ಕೋಟಿ: ಸಚಿವ
ಶಿಡ್ಲಘಟ್ಟ: ಪಟ್ಟಣದಲ್ಲಿ ವಾಲ್ಮೀಕಿ ಭವನ ಹಾಗೂ ಜಗಜೀವನರಾಮ್ ಭವನಗಳ ನಿರ್ಮಾಣಕ್ಕೆ ತಲಾ ಒಂದು ಕೋಟಿ ರುಪಾಯಿ ಮಂಜೂರು ಮಾಡಿರುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಪಟ್ಟಣದ ಮಯೂರ ವೃತ್ತದಲ್ಲಿರುವ ವಾಲ್ಮೀಕಿ ದೇವಾಲಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಎಚ್. ಆಂಜನೇಯ, ಭವನ ನಿರ್ಮಾಣಕ್ಕೆ ಗುರುತಿಸಿರುವ ಜಾಗ ಪರಿಶೀಲನೆ ಮಾಡಿ ಮಾತನಾಡಿ, ತಾಲೂಕಿನ ತಲಕಾಯಬೆಟ್ಟದ ವಾಲ್ಮೀಕಿ ಭವನಕ್ಕೆ ವಿಶೇಷ ಅನುದಾನ 50 ಲಕ್ಷ, ಗಂಭಿರನಹಳ್ಳಿ ವಸತಿ ಶಾಲೆಗೆ 6 ಕೋಟಿ ಘೋಷಣೆ ಮಾಡಿದರು. ಶಾಸಕ ಎಂ. ರಾಜಣ್ಣ, ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ, ಎಂ. ಕೃಷ್ಣಪ್ಪ, ಎನ್. ಮುನಿಯಪ್ಪ, ಯರಬಚ್ಚಪ್ಪ, ಹುಜುಗೂರು ರಾಮಣ್ಣ, ಮುಗಿಲಡಿಪಿ ನಂಜಪ್ಪ, ಪಿ.ವಿ.ನಾಗರಾಜ್, ಅಪ್ಸರ್ ಪಾಷಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

