ಅಂಬೇಡ್ಕರ್ರನ್ನು ಚುನಾವಣೆಯಲ್ಲಿ ಸೋಲಿಸಿದ್ದು ನೆಹರು
ಕೋಲಾರ: ಬಿ.ಆರ್. ಅಂಬೇಡ್ಕರ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಜವಹರಲಾಲ್ ನೆಹರು ಅವರ ಕುತಂತ್ರದಿಂದ ಹಿನಾಯ ಸೋಲು ಅನುಭವಿಸಬೇಕಾಯಿತು ಎಂದು ಬಿಜೆಪಿಯ ಎಸ್ಸಿ ಮೋರ್ಚಾ ಮುಖಂಡ ಚಿ.ನಾ. ರಾಮು ಆರೋಪಿಸಿದರು.
ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಎಸ್ಸಿ ಮೋರ್ಚಾ ಸಭೆಯಲ್ಲಿ ಅವರು ಮಾತನಾಡಿ, ಅಂಬೇಡ್ಕರ್ ವಿರುದ್ಧ ಅನಕ್ಷರಸ್ಥರೊಬ್ಬರನ್ನು ಕಣಕ್ಕೆ ಇಳಿಸಿ ಸಂವಿಧಾನ ಶಿಲ್ಪಿಯನ್ನು ಸಂಸತ್ಗೆ ಪ್ರವೇಶ ಮಾಡದಂತೆ ತಡೆದದ್ದು ಜವಹರಲಾಲ್ ನೆಹರು. ಆದರೆ, ಸಂವಿಧಾನ ರಚನೆಯ ಕರಡು ಸಮಿತಿಯಲ್ಲಿ ಸದಸ್ಯರಾಗಿದ್ದ ಜನಸಂಘದ ನೇತಾರ ಶ್ಯಾಮ್ ಪ್ರಕಾಶ್ ಮುಖರ್ಜಿಯವರು ಅಂಬೇಡ್ಕರ್ ಅವರನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದರು.
ಬಿಜೆಪಿ ದಲಿತ ವಿರೋಧಿ ಅಲ್ಲ, ಕೋಮುವಾದಿಯೂ ಅಲ್ಲ, ಓಟ್ಬ್ಯಾಂಕ್ ರಾಜಕಾರಣಕ್ಕಾಗಿ ಕೆಲವರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಮತದಾರರಿಗೆ ನಿಜ ಸಂಗತಿಗಳನ್ನು ತಿಳಿಸಲು ಎಸ್ಸಿ ಮೋರ್ಚಾ ಪದಾಧಿಕಾರಿಗಳು ಕಾರ್ಯಕ್ರಮ ಹಾಕಿಕೊಳ್ಳಬೇಕೆಂದರು.
ಅಂಬೇಡ್ಕರ್ ಅವರಿಗೆ ದೇಶ ವಿಭಜನೆ ಇಷ್ಟವಿರಲಿಲ್ಲ. ಆದರೆ, ಗಾಂಧಿ ಹಠ ಹಿಡಿದು ದೇಶ ವಿಭಜನೆ ಮಾಡಿದರು. ಇಲ್ಲಿದ್ದ ಮುಸ್ಲಿಂ ಜನತೆ ಅಲ್ಲಿಗೆ ಹೋಗಲಿಲ್ಲ, ಅಲ್ಲಿದ್ದ ಹಿಂದೂಗಳು ಪಾಕಿಸ್ತಾನದವರು ಭಾರತಕ್ಕೆ ಓಡಿಸಿದರೆಂದು ಟೀಕಿಸಿದರು.
ದಲಿತರು ಕಡಿಮೆ ಇದ್ದಾಗ ಜಾರಿಗೆ ತಂದ ಶೇ.18 ಮೀಸಲಾತಿ ಈ ವರ್ಗಕ್ಕೆ 85 ಜಾತಿಗಳು ಸೇರಿದ್ದರೂ ಮೀಸಲಾತಿ ಪ್ರಮಾಣ ಹೆಚ್ಚಿಲ್ಲ, ವಾಜಪೇಯಿ ಅವರು ದಲಿತ ಕ್ರೈಸ್ತರಿಗೆ ಮೀಸಲಾತಿ ನೀಡುವುದಕ್ಕೆ ವಿರೋಧಿಸಿದ್ದರು, ಬಿಜೆಪಿಯ ನಿಲುವು ಇದೇ ಆಗಿತ್ತು, ಕಾಂಗ್ರೆಸ್ ಮತ್ತು ಇನ್ನಿತರ ಅವಕಾಶವಾದಿ ರಾಜಕಾರಣಿಗಳು ದಲಿತ ಕ್ರೈಸ್ತರಿಗೆ ಮೀಸಲಾತಿ ನೀಡುವುದಕ್ಕೆ ಬೆಂಬಲ ವ್ಯಕ್ತಪಡಿಸಿ ಅಂಬೇಡ್ಕರ್ ಅವರ ಪರಿಕಲ್ಪನೆ ಮತ್ತು ಆಶಯಗಳಿಗೆ ಕೊಳ್ಳಿ ಇಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

