ಕೋಲಾರ

ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ

Published On :

ಕೋಲಾರ: ಗಣರಾಜ್ಯೋತ್ಸವ ಮತ್ತು ತೋಟಗಾರಿಕೆ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ ಜ.26 ರಿಂದ 28ವರೆಗೆ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಂಡಿದ್ದು ಜನರನ್ನು ಆಕರ್ಷಿಸಲು ಸಿದ್ಧತೆ ನಡೆದಿದೆ.
ಇಲಾಖೆಯ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎನ್. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ರೈತರಿಗೆ ಉಪಯುಕ್ತವಾಗ ಮಾಹಿತಿ ಒದಗಿಸಲು, ತೋಟಗಾರಿಕೆ ಬೆಳೆಗಳ ಬಗ್ಗೆ ಅರಿವು ಮೂಡಿಸಲು, ವಿವಿಧ ತಳಿಗಳ ಹಣ್ಣುಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಫಲಪುಷ್ಪ ಪ್ರದರ್ಶನದಲ್ಲಿ ಕಳೆದ ವರ್ಷದಂತೆ ವೈವಿಧ್ಯಮಯ ತಳಿಗಳ ಹೂವುಗಳ ಪ್ರದರ್ಶನ, ತರಕಾರಿ ಕಲಾ ಕೆತ್ತನೆ ಮತ್ತು ಆಕಿಡ್ಸ್, ಸಿತಾಳೆ ಲಿಲಿಯಮ್ ಸೆರಿದಂತೆ ವಿಭಿನ್ನ ಹೂಗಳನ್ನು ಬಳಸಿ ಚಿಟ್ಟೆ, ಡಾಲ್ಪೀನ್ ಕಲಾಕೃತಿಗಳನ್ನು ಮಾಡಲಾಗಿದೆ.
ಹಸಿರು ಮನೆಯಲ್ಲಿ ತರಕಾರಿ ಬೆಳೆಯ ಮತ್ತು ಜೇನು ಸಾಕಾಣಿಕಾ ಪ್ರಾತ್ಯಕ್ಷಿಕೆಗೆ ಸಿದ್ಧತೆ ನಡೆದಿದೆ.
ಪ್ರದರ್ಶನದಲ್ಲಿ ತಾಜಾ ತರಕಾರಿಗಳನ್ನು ಹೊತ್ತ ಎತ್ತಿನ ಬಂಡಿ, ವಿವಿಧ ಬಗೆಯ ತರಕಾರಿ ಬೆಳೆಯುವ ಮಾದರಿಗಳು, ರೈತರು ತಾವು ಬೆಳೆದ ಅತ್ಯುತ್ತಮ ಮಾದರಿಯ ತರಕಾರಿಗಳನ್ನು ಪ್ರದರ್ಶನದಲ್ಲಿಡಲಾಗಿದ್ದು ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ವಿವಿಧ ಇಲಾಖೆಗಳ ಹಾಗೂ ಖಾಸಗಿ ಸಂಸ್ಥೆಗಳ  ಸುಮಾರು 15 ಮಳಿಗೆಗಳು ಇಡಲಾಗುತ್ತಿದ್ದು ಉತ್ಪನ್ನಗಳ ಮಾರಾಟಕ್ಕೆ ಇದರಿಂದ ಸಹಾಯವಾಗಿದೆ. ನರ್ಸರಿಯ ಹಿಂಭಾಗದಲ್ಲಿರುವ ಸುಂದರವಾದ ಕಲ್ಯಾಣಿಯಲ್ಲಿ ಹೂಳು ತೆಗೆದು ಇದರಲ್ಲಿ ನೀರು ಸಂಗ್ರಹಣೆಯ ಜೊತೆಗೆ ಕ್ಯಾಟ್ ಕಾರ್ಪ್ ಎಂಬ ಹೆಸರಿನ ಮೀನುಗಳನ್ನು ಬಿಡಲಾಗಿದೆ. ಇದು ಜನರ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 6 ಸಾವಿರಕ್ಕೂ ಹೆಚ್ಚು ಹೂಗಳ ಕುಂಡಗಳನ್ನು ಇಡಲಾಗುತ್ತಿದೆ, ಆಸಕ್ತಿ ಇರುವವರು ಬೇಕಾದರೆ ಖರೀದಿ ಮಾಡಿ ತಮ್ಮ ಮನೆಗಳ ಮುಂದೆ ಇಡಬಹುದು, ಇದರ ಜತೆಗೆ ತೋಟಗಾರಿಕೆ ಇಲಾಖೆಯಲ್ಲಿ ಬೆಳೆದಿರುವ ಸುಮಾರು 20 ಸಾವಿರ ಅಲಂಕೃತ ಗಿಡಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಜ.26ರಂದು ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು,ಅಧ್ಯಕ್ಷತೆಯನ್ನು ಶಾಸಕ ವರ್ತೂರ್ ಪ್ರಕಾಶ್ ವಹಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜ.27 ರಂದು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ನಗರದ ಹಿರಿಯ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಜ.28ರಂದು ರೈತರಿಗಾಗಿ ವಿಚಾರ ಸಂಕಿರಣ, ಆಹಾರ ಸಂಸ್ಕೃರಣೆ ಉದ್ದಿಮೆ ಸ್ಥಾಪಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.