ಕೋಲಾರ

ಶಾಲಾ ವಾರ್ಷಿಕೋತ್ಸವ

Published On :

ಶಿಡ್ಲಘಟ್ಟ: ಶಿಕ್ಷಣ ಯಾರೂ ಕದಿಯಲಾರದ ಸಂಪತ್ತು ಎಂದು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಎ.ಜಿ. ನಾಗೇಂದ್ರ ಹೇಳಿದರು. ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿದ್ದ ಪೋಷಕರಿಗೆ ನೆನಪಿನ ಕಾಣಿಕೆ ನೀಡಲಾಯಿತು.



ಮೊಯ್ಲಿ ಜನರನ್ನು ಮರುಳು ಮಾಡುತ್ತಿದ್ದಾರೆ


ಗೌರಿಬಿದನೂರು: ಕೇಂದ್ರ ಸಚಿವ ವೀರಪ್ಪಮೊಯ್ಲಿ ಅವರು ಈ ಭಾಗದ ಜನರನ್ನು ಮರಳು ಮಾಡಲು ಎತ್ತಿನ ಹೊಳೆ ಯೋಜನೆ ಮುಂದಿಟ್ಟಿದ್ದು, ಇದರ ಹಿಂದೆ ಷಡ್ಯಂತರ ಅಡಗಿದೆ ಎಂದು ಮಾಜಿ ಶಾಸಕ ಎಸ್.ವಿ. ಅಶ್ವತ್ಥನಾರಾಯಣರೆಡ್ಡಿ ಆರೋಪಿಸಿದರು.
ಬರ ಪೀಡಿತ ಪ್ರದೇಶವಾದ ಈ ಭಾಗದಲ್ಲಿ ಅಂತರ್ಜಲ ಕುಸಿದಿದ್ದು, ರೈತರು ವಲಸೆ ಹೋಗುವ ಸ್ಥಿತಿ ಎದುರಾಗಿದೆ. ಇದಕ್ಕೆ ಪರಿಹಾರವಾಗಿ ಡಾ. ಪರಮ ಶಿವಯ್ಯನವರ ವರದಿಯ ಯೋಜನೆ ಅನುಷ್ಠಾನ ಮಾಡುವುದು ಅಗತ್ಯವಾಗಿದೆ. ಆದರೆ ಕೇಂದ್ರ ಸಚಿವರು ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಪಟ್ಟಣದ ಮರಿಗಮ್ಮ ದೇವಸ್ಥಾನದ ಆವರಣದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ಸಮ ಯದಲ್ಲಿ ಈ ಭಾಗಕ್ಕೆ ಡಾ. ಪರಮಶಿವಯ್ಯನವರ ವರದಿ ಆದರಿಸಿ ನೇತ್ರಾವತಿ ತಿರುವು ಯೋಜನೆ ಅನುಷ್ಠಾನ ಮಾಡುವುದಾಗಿ ವಚನ ನೀಡಿದ್ದ ವೀರಪ್ಪಮೊಯ್ಲಿ ನಂತರ ಅದು ಸೇರಿದಂತೆ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳೆಲ್ಲ ಹುಸಿಯಾದವು ಎಂದರು.
ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ವೀರಪ್ಪಮೊಯ್ಲಿ ಇಲ್ಲಿನ ಜನರನ್ನು ಮರಳು ಮಾಡುವ ನಾಟಕ ಮಾಡಲು ಎತ್ತಿನ ಹೊಳೆ ಯೋಜನೆಯಿಂದ ನೀರು ತರುವುದಾಗಿ ಹೇಳುತ್ತಿದ್ದಾರೆ. ಇನ್ನು ಡಿಪಿಆರ್ ಆಗದ ಯೋಜನೆಯನ್ನು ಶಂಕು ಸ್ಥಾಪನೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಇದನ್ನು ವಿರೋಧಿಸಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಇದೇ ತಿಂಗಳು 31ರಂದು ಕರೆ ನೀಡಿರುವ ಜಿಲ್ಲಾ ಬಂದ್ ಯಶಸ್ವಿಯಾಗಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಕಾ.ಲಕ್ಷ್ಮಣ್ ಮಾತನಾಡಿ, ಗೌರಿಬಿದನೂರು ಜನರು ಹೋರಾಟಗಳಿಗೆ ಹೆಸರಾದವರು, ದೇಶದಿಂದ ಇಂಗ್ಲಿಷರನ್ನು ಓಡಿಸಲು ಪ್ರಾಣವನ್ನೇ ಬಲಿದಾನ ಮಾಡಿದವರು. ಇಂತಹ ಜನರು ಇಂದು ನೀರಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯ ಎದುರಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಶಾಶ್ವರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ಬಯಲು ಸೀಮೆ ಜಿಲ್ಲೆಗಳಿಗೆ ನೀರು ತರಲು ಎಲ್ಲರೂ ಕಂಕಣ ಬದ್ದರಾಗಿ ಜಿಲ್ಲೆಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಬೇಕು ಎಂದರು.
ಕೋಮುಲ್ ನಿರ್ದೇಶಕ ಎಸ್.ವಿ. ಸುಬ್ಬಾರೆಡ್ಡಿ, ಎಸ್.ಎಸ್. ರೆಡ್ಡಿ, ರಾಮಕೃಷ್ಣಾರೆಡ್ಡಿ, ವಕೀಲ ಲಕ್ಷ್ಮೀನಾರಾಯಣ್, ಲೋಕೇಶ್ಗೌಡ, ಸನತ್ಕುಮಾರ್, ಪುರಸಭೆ ಸದಸ್ಯ ಕೆ.ಎಸ್. ಅನಂತರಾಜು, ಜಿ. ಬಾಲಾಜಿ, ಬಿ.ವಿ. ಗೋಪಿನಾಥ್, ನಾಗರಾಜರೆಡ್ಡಿ, ಚೌಡಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.