ಕೋಲಾರ

ಟೇಕಲ್ ನೂತನ ನಾಡಕಚೇರಿ ಕಟ್ಟಡಕ್ಕೆ ಮನವಿ

Published On :

ಟೇಕಲ್: ಟೇಕಲ್ ನಾಡಕಚೇರಿ ಬಹುತೇಕ ಶಿಥಿಲಗೊಂಡಿದ್ದ ಪರಿಣಾಮ ನೂತನ ಕಟ್ಟಡ ಕಟ್ಟಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಹಸೀಲ್ದಾರ್ ಡಾ. ಸುಧಾಪಾಯಸ್ ತಿಳಿಸಿದರು. ಮಾಕಾರಹಳ್ಳಿಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದಡಿ ಗ್ರಾಮಸ್ಥರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬಹುತೇಕ ನೂತನ ಕಟ್ಟಡ ಕಟ್ಟಲು ಇನ್ನೆರಡು ಮೂರು ತಿಂಗಳಲ್ಲಿ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಬಹುತೇಕ ರೈತರಿಗೆ ಈ ಕಂದಾಯ ಅದಾಲತ್ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ ಎಂದು ತಿಳಿಸಿದರು.  ಇಂಡೇನ್ ಸಿಲಿಂಡರ್ ಗ್ರಾಹಕರು ಟೇಕಲ್ನ್ನಲ್ಲಿ ಸಮರ್ಪಕ ಸಿಲಿಂಡರ್ ವಿತರಣೆಯಾಗುತ್ತಿಲ್ಲವೆಂದು ಆರೋಪಿಸಿ ತಹಸೀಲ್ದಾರ್ಗೆ ಮನವಿ ನೀಡಿದರು.

ಹಾಲು ಉತ್ಪಾದಕ ಸಂಘಕ್ಕೆ ಚುನಾವಣೆ

ಮುಳಬಾಗಲು: ತಾಲೂಕಿನ ಐದು ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಆಡಳಿತ ಮಂಡಳಿ ರಚನೆಗಾಗಿ ಫೆ.2ರಂದು ಆಯಾ ಸಂಘಗಳ ಕಚೇರಿಯಲ್ಲಿ ಚುನಾವಣೆ ನಡೆಸಲಾಗುವುದೆಂದು ತಹಸೀಲ್ದಾರ್ ಸೋಮಶೇಖರಯ್ಯ ತಿಳಿಸಿದ್ದಾರೆ. ಪಟ್ಟಣದ ಮಿನಿವಿಧಾನಸೌಧದಲ್ಲಿ ಗುರುವಾರ ಮಾತನಾಡಿ, ತಾಲೂಕಿನ ಕಗ್ದಿನಹಳ್ಳಿ, ಬಲ್ಲ, ಕೊಂಡೇನಹಳ್ಳಿ, ಶೆಟ್ಟಿಬಣಕನಹಳ್ಳಿ, ಎನ್. ವಡ್ಡಹಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ 2014-19ನೇ ಸಾಲಿನ ಆಡಳಿತ ಮಂಡಳಿಗೆ ಸಂಬಂಧಿಸಿ ಚುನಾವಣೆ ಪ್ರಕ್ರಿಯೆ ಜ.25ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ, 26ರಂದು ನಾಮಪತ್ರ ಪರಿಶೀಲನೆ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, 27ರಂದು ನಾಮಪತ್ರ ವಾಪಸಾತಿ  ಫೆ.2ರಂದು ಬೆಳಿಗ್ಗೆ 9ರಿಂದ 4ರವರೆವಿಗೂ ಮತದಾನ ನಡೆಯಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.