ದಿ. ಶಿವಣ್ಣರ ಜನ್ಮದಿನಾಚರಣೆ
ಚಿಂತಾಮಣಿ: ಅಧಿಕಾರಕ್ಕೆ ಆಸೆ ಬೀಳದೆ ದಲಿತರ ಹಾಗೂ ಅಲ್ಪ ಸಂಖ್ಯಾತರ ಪರ ಧ್ವನಿಯೆತ್ತಿದ ಉಭಯ ಜಿಲ್ಲೆಗಳ ದಲಿತ ಮುಖಂಡ ಎನ್. ಶಿವಣ್ಣನವರ ಹೋರಾಟಗಳ ಮಹತ್ವದ ಬಗ್ಗೆ ಡಿವೈಎಸ್ಪಿ ಸಣ್ಣತಿಮ್ಮಪ್ಪ ಹೇಳಿದರು.
ನಗರದ ಗುರುಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯ ಸಂಚಾಲಕ ದಿವಂಗತ ಎನ್. ಶಿವಣ್ಣ ನವರ 64 ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಹೋರಾಟಗಳನ್ನು ಬಾಲ್ಯದಲ್ಲಯೇ ಮೈಗೂಡಿಸಿಕೊಂಡ ಎನ್.ಶಿವಣ್ಣ ಅವರ ಕೊಡುಗೆ ಅಪಾರ ಎಂದರು.
ದಲಿತ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಎನ್. ಶಿವಣ್ಣ ರಾಜ್ಯ ನಾಯಕರಾಗಿ ಅನೇಕ ಜನಪರ ಹೋರಾಟ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದರು. ರಾಜ್ಯ ಸಂಚಾಲಕ ವಿ. ನಾರಾಯಣಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗೀಯ ಸಂಚಾಲಕ ಕವಾಲಿ ವೆಂಕಟರವಣಪ್ಪ ವಹಿಸಿದ್ದರು. ಪುಲಿಕೃಷ್ಣ, ಮೇಲೂರು ಮಂಜುನಾಥ್ ಮಾತನಾಡಿದರು.
ದಿವಂಗತ ಎನ್. ಶಿವಣ್ಣನವರ ಜನ್ಮದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ ಹಂಚಲಾಯಿತು. ನಗರಸಭೆ ಆಯುಕ್ತ ಚನ್ನೇಗೌಡ, ವೃತ್ತ ನಿರೀಕ್ಷಕ ನಂಜಪ್ಪ, ಲಕ್ಷ್ಮಿನಾರಾಯಣರೆಡ್ಡಿ, ನಗರಸಭಾ ಸದಸ್ಯ ಶ್ರೀರಾಮಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

