ಕೋಲಾರ

ನಕಲಿ ಒಡವೆ ಗಿರಿವಿಗೆ; ವಂಚನೆ ಪ್ರಕರಣ ದಾಖಲು

Published On :

ಕೆಜಿಎಫ್: ಕಾರ್ಪೋರೇಷನ್ ಬ್ಯಾಂಕ್ನ ಬಂಗಾರದ ಒಡವೆಗಳ ಪರೀಕ್ಷನಿಂದ ನಕಲಿ ಚಿನ್ನದ ಒಡವೆಗಳನ್ನು ಅಸಲಿ ಎಂದು ದೃಢೀಕರಿಸಿ ಬ್ಯಾಂಕ್ ಖಾತೆಯಲ್ಲಿಟ್ಟು ಸುಮಾರು 45,70,950 ಲಕ್ಷ ರು. ವಂಚನೆ ಮಾಡಿರುವುದಾಗಿ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕರು ಆಂಡ್ರಸನ್ಪೇಟೆ ಮತ್ತು ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಬರ್ಟ್ಸನ್ಪೇಟೆ ಠಾಣಾ ವ್ಯಾಪ್ತಿಯ 2ನೇ ಅಡ್ಡರಸ್ತೆಯ ವಾಸವಿ ಕಲ್ಯಾಣ ಮಂಟಪ ಪಕ್ಕದ ನಿವಾಸಿ ಚಮನ್ಲಾಲ್ ಎಂಬವರನ್ನು ರಾಬರ್ಟ್ಸನ್ಪೇಟೆ ಮತ್ತು  ಆಂಡ್ರಸನ್ಪೇಟೆ ಕಾರ್ಪೋರೇಷನ್ ಬ್ಯಾಂಕ್ ಬಂಗಾರದ ಪರೀಕ್ಷಕರಾಗಿ 2011ರಲ್ಲಿ ನೇಮಕಮಾಡಲಾಗಿತ್ತು.
ಚಿನ್ನದ ಒಡವೆಗಳನ್ನು ಗಿರವಿ ಇಟ್ಟು ಸಾಲ ಪಡೆಯಲು ಶಿವರಾಂರೆಡ್ಡಿ, ಕುಮರೇಶನ್, ಪ್ರಶಾಂತ್ ಹಾಗೂ ರತ್ನ ಅವರ ಖಾತೆಯಲ್ಲಿ ನಕಲಿ ಬಂಗಾರದ ಒಡವೆಗಳನ್ನು ಅಸಲಿ ಬಂಗಾರದ ಒಡವೆಗಳು ಎಂದು ಅಪ್ರಾಮಾಣಿಕವಾಗಿ ದೃಢೀಕರಿಸಿ ಬ್ಯಾಂಕಿಗೆ 45,70,950 ಲಕ್ಷ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ವೆಂಕಟಕೃಷ್ಣಮೂರ್ತಿ ಬ್ಯಾಂಕಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವ ಚಮನ್ಲಾಲ್ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ಚಮನ್ಲಾಲ್ ಸೇರಿದಂತೆ ಶಿವರಾಂರೆಡ್ಡಿ, ಕುಮರೇಶನ್, ಪ್ರಶಾಂತ್ ಹಾಗೂ ರತ್ನ ವಿರುದ್ಧ ವಂಚನೆ ಪ್ರಕರಣದ ದೂರು ದಾಖಲಿಸಿಕೊಂಡಿರುವ ರಾಬರ್ಟ್ಸನ್ಪೇಟೆ ಹಾಗೂ ಆಂಡ್ರಸನ್ಪೇಟೆ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.