ಮಾಲೂರು ತಾಲೂಕಿನಲ್ಲಿ....
ಮಾಲೂರು: 65ನೇ ಗಣರಾಜ್ಯೋತ್ಸವ ತಾಲೂಕಿನ ವಿವಿದಢೆ ಶಾಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.
ಬ್ಯಾಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಾಲೂಕಿನ ಬ್ಯಾಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ. ಕೃಷ್ಣಪ್ಪ ದ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಷ್ಟ್ರೀಯ ಹಬ್ಬವನ್ನು ರಾಷ್ಟ್ರ ಅಭಿವೃದ್ಧಿಗೆ ಸಹಕರಿಯಾಗುವ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಆಚರಿಸಬೇಕು ಎಂದರು. ಬಿ.ಎಂ. ಈರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ದಾನಿಗಳು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಹಾಗೂ ಜಾಮಿಟ್ರಿ ವಿತರಿಸಿದರು. ಮುಖ್ಯ ಶಿಕ್ಷಕ ಎ.ಜಿ. ನಾರಾಯಣಪ್ಪ, ಸಹ ಶಿಕ್ಷಕಿ ಸಿ.ಕೆ. ಭಾರತಿ, ಪಂಚಾಯ್ತಿ ಸದಸ್ಯರು ಇದ್ದರು.
ಹುಲಿಮಂಗಲ ಸರ್ಕಾರಿ ಶಾಲೆ: ಶಾಲಾ ಮುಖ್ಯೋಪಾಧ್ಯಯ ಎಂ.ಸಿ. ರಾಮಕೃಷ್ಣಪ್ಪ ದ್ವಜಾರೋಹಣ ನೇರವೇರಿಸಿದರು. ಪಂಚಾಯ್ತಿ ಸದಸ್ಯ ವೆಂಕಟೇಶ್ರೆಡ್ಡಿ ಮಾತನಾಡಿದರು. ಕವಿ ಜ.ಮು. ಚಂದ್ರ, ಶಿಕ್ಷಕಿ ಸುನೀತಾರನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಕವಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಚಿಕ್ಕರಾಮರೆಡ್ಡಿ ಕುಂಟುಂಬದವರಿಂದ ಸಿಹಿ ಹಂಚಲಾಯಿತು. ಶಿಕ್ಷಕ ಆರ್. ನಾರಾಯಣಪ್ಪ, ಎಂ. ವೆಂಕಟೇಶ್ ಮಾತನಾಡಿದರು. ತಿಮ್ಮಯ್ಯ, ಮಂಜುನಾಥ್, ಸುಶೀಲಮ್ಮ, ಚಿನ್ನಮ್ಮ, ಲಕ್ಷ್ಮಿನಾರಾಯಣಪ್ಪ, ತಿಮ್ಮಾರೆಡ್ಡಿ, ಪ್ರವೀಣ್ಕುಮಾರ್ ಇದ್ದರು.
ಚಿಂತಾಮಣಿಯಲ್ಲಿ....
ಚಿಂತಾಮಣಿ: ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಚಾರ, ಅಸಮಾನತೆ ತೊಲಗಿಸಲು ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಕರೆ ನೀಡಿದರು.
ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 65ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿನ ಮೇಲು ಕೀಲೆಂಬ ಭಾವನೆ ಹೋಗಲಾಡಿಸಲು ಅಂಬೇಡ್ಕರ್ ಭಾರತದ ಸಂವಿಧಾನ ರಚಿಸಿದರು. ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ತಾಲೂಕು ದಂಡಾಧಿಕಾರಿ ರಾಷ್ಟ್ರಧ್ವಜಾರೋಹಣ ಮಾಡಿ ಪೊಲೀಸ್, ಗೃಹ ರಕ್ಷಕ ದಳ, ಎನ್ಸಿಸಿ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಸಲ್ಲಿಸಿದರು. ರಾಜ್ಯಮಟ್ಟದಲ್ಲಿ ಮಹಿಳಾ ಥ್ರೋಬಾಲ್ನಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಜೇತರಿಗೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅಭಿನಂದಿಸಿದರು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.
ತಾಪಂ ಅಧ್ಯಕ್ಷ ಗೌರಮ್ಮ ನಾಗೇಶ್ ಪ್ರಾಸ್ಥಾವಿಕ ನುಡಿಗಳನ್ನು ನುಡಿದರು. ತಾಪಂ ಇಒ ವಸಂತ್ ಕುಮಾರ್, ನಗರಸಭೆ ಆಯುಕ್ತ ಚನ್ನೇಗೌಡ, ಬಿಇಒ ಕೆ.ಜಿ. ರಂಗಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

