ಸುಭಾಷ್ ಚಂದ್ರಬೋಸ್ ಜಯಂತಿ ಆಚರಣೆ
ಚಿಂತಾಮಣಿ: ಸುಭಾಷ್ ಚಂದ್ರಬೋಸರು ಸ್ವಾತಂತ್ರ್ಯದ ಸಿಡಿ ಗುಂಡಿನಂತಾಗಿದ್ದರೆಂದು ಸಿರಿಗನ್ನಡ ವೇದಿಕೆ ಉಪಾಧ್ಯಕ್ಷ ಸಿ. ವೆಂಕಟರವಣಪ್ಪ ತಿಳಿಸಿದರು.
ಸಿರಿಗನ್ನಡ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ತಾಲೂಕಿನ ಮೈಲಾಂಡ್ಲಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನೇತಾಜಿಯವರ ಕುರಿತು ಮಾತನಾಡಿ, ಸುಭಾಷ್ ಚಂದ್ರಬೋಸರು ಬಾಲ್ಯದಿಂದಲೇ ಸ್ವಾವಲಂಭಿ ಹಾಗೂ ಸ್ವಾಭಿಮಾನಿಯಾಗಿದ್ದರು ಎಂದರು.
ವೇದಿಕೆಯ ಗೌರವಾಧ್ಯಕ್ಷ ಎಸ್. ವಸಂತ್, ವಿವೇಕಾನಂದರು ಸಾಂಸ್ಕೃತಿಕವಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಯುವಚೇತನರಾಗಿದ್ದರೆಂದು ಬಣ್ಣಿಸಿದರು. ವೇದಿಕೆ ಅಧ್ಯಕ್ಷ ಕೆ.ಎನ್. ಅಕ್ರಂಪಾಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕೆ. ಕೃಷ್ಣಪ್ಪ ಮಾತನಾಡಿದರು. ಶಾಲಾ ಮಕ್ಕಳಿಂದ ಹಾಗೂ ಗೌರಿಬಿದನೂರು ಪ್ರಜ್ಞಾಟ್ರಸ್ಟ್ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎಂ.ಎನ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಹಸೀನಾ ಬೇಗಂ, ಎಂ.ವಿ. ಅಶ್ವಥನಾರಾಯಣ, ಗ್ರಾಪಂ ಸದಸ್ಯ ಮುನಿಯಪ್ಪ, ಎಸ್.ಸಿ. ಶ್ರೀನಿವಾಸರೆಡ್ಡಿ, ಜಿ. ಕೃಷ್ಣಪ್ಪ ಇದ್ದರು.
ವಿದ್ಯುತ್ ಸುರಕ್ಷತೆ ಮಾಸಾಚರಣೆ
ಬಂಗಾರಪೇಟೆ: ವಿದ್ಯುತ್ ಅಪಘಾತಗಳಿಂದ ರಕ್ಷಿಸಿಕೊಳ್ಳುವ ಬಗ್ಗೆ ಇಲ್ಲಿನ ಬೆಸ್ಕಾಂ ಕಚೇರಿಯಲ್ಲಿ ಲೈನ್ ಮೆನ್ಗಳಿಗೆ ಹಾಗೂ ಗ್ರಾಹಕರಿಗೆ ತಿಳುವಳಿಕೆ ಮೂಡಿಸುವ ವಿದ್ಯುತ್ ಸುರಕ್ಷತೆ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
ಬೆಸ್ಕಾಂ ಎಇಇ ಚಲಪತಿ ಮಾತನಾಡಿ, ಎಲ್ಲೆಡೆ ವಿದ್ಯುತ್ ಅವಘಡಗಳು ನಡೆಯುತ್ತಲೆ ಇವೆ. ಇದನ್ನು ತಡೆಯಲು ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಲೈನ್ಮೆನ್ಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಸಾಕ್ಷ್ಯ ಚಿತ್ರದ ಮೂಲಕ ಅರಿವು ಮೂಡಿಸಲಾಯಿತು.ನಂತರ ವಿದ್ಯುತ್ ಗ್ರಾಹಕರು ಮನೆಗಳಿಗೆ ಬಳಸುವ ವಿದ್ಯುತ್ ಉಪಕರಣಗಳನ್ನು ಐಎಸ್ಐ ಪ್ರಮಾಣಿತ ಸ್ಟಾರ್ ರೇಟೆಡ್ ಉಪಕರಣಗಳನ್ನೇ ಬಳಸಬೇಕು, ಇದು ಇಲ್ಲದಿದ್ದರೆ ಅವಘಡ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಸರ್ಕಾರ ವಿದ್ಯುತ್ ಅವಘಡಗಳನ್ನು ನಿಯಂತ್ರಿಸಲು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಅಂಗವಾಗಿ ಪಟ್ಟಣದಲ್ಲಿ ಮೊದಲ ಹಂತವಾಗಿ ಕೇಬಲ್ ಬಂಪ್ ಯೋಜನೆ ಜಾರಿಯಲ್ಲಿದೆ ಇದನ್ನು ಅಳವಡಿಸುವುದರಿಂದ ಶಾಕ್ ಹೊಡೆಯುವುದಿಲ್ಲ,ಪಟ್ಟಣದಲ್ಲಿ ಯಶಸ್ವಿಯಾದ ಬಳಿಕ ಗ್ರಾಮಾಂತರ ಭಾಗಕ್ಕೂ ಇದನ್ನು ವಿಸ್ತರಿಸುವುದಾಗಿ ಹೇಳಿದರು. ಸಭೆಯಲ್ಲಿ ಜೆಇ ಸೈಯದ್ ಹುಸೇನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

