ಕೋಲಾರ

ಕಂದಾಯ ಅದಾಲತ್ ಮುಂದೂಡಿಕೆ

Published On :

ಟೇಕಲ್: ಟೇಕಲ್ನ ಬನಹಳ್ಳಿ ಗ್ರಾಮದಲ್ಲಿ 27ರಂದು ನಡೆಯಬೇಕಿದ್ದ ಕಂದಾಯ ಅದಾಲತ್ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಫೆ.12ರಂದು ಅದೇ ಗ್ರಾಮದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಹಸೀಲ್ದಾರ್ ಡಾ.ಸುಧಾಪಾಯ್ ತಿಳಿಸಿದ್ದಾರೆ.
ಅವಿಶ್ವಾಸ ಮಂಡನೆಗೆ ಮನವಿ
ಬಂಗಾರಪೇಟೆ: ಕಾರಹಳ್ಳಿ ಗ್ರಾಪಂ ಅಧ್ಯಕ್ಷೆ ಶಾರದಮ್ಮ ಅವರನ್ನು ಅವಿಶ್ವಾಸದ ಮೂಲಕ ಪದಚ್ಯುತಿಗೊಳಿಸಲು 11 ಮಂದಿ ಸದಸ್ಯರು ಕೋಲಾರದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಶಾರದಮ್ಮ ಶ್ರೀನಿವಾಸ್ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಪ್ರತಿಯೊಂದಕ್ಕೂ ಪತಿ ಶ್ರೀನಿವಾಸ್ ಕಡೆ ಬೆರಳು ಮಾಡುತ್ತಿದ್ದಾರೆ. ಹೀಗಾಗಿ ಸದಸ್ಯರು ಅಧ್ಯಕ್ಷರ ಪತಿರಾಯ ಶ್ರೀನಿವಾಸ್ ಅವರನ್ನು ಅವಳಂಬಿಸುವಂತಾಗಿದೆ. ಅಲ್ಲದೆ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಬೇಕಿದ್ದರೂ ಎಲ್ಲಾ ಸಭೆಗಳನ್ನು ಶ್ರೀನಿವಾಸ್ ಅವರೇ ಮಾಡುವ ಮೂಲಕ ಮಹಿಳಾ ಸದಸ್ಯರ ಹಕ್ಕುಗಳನ್ನು ಕಸಿದುಕೊಂಡು ಕಾನೂನು ಉಲ್ಲಂಘನೆ ಮಾಡಿದ್ದಾರೆ.
  ಪಂಚಾಯ್ತಿ ವ್ಯಾಪ್ತಿಯಲ್ಲಿ ವರ್ಷದಿಂದ ಅಭಿವೃದ್ಧಿ ಕಾರ್ಯಗಳು ಸಹ ಆಮೆ ನಡಿಗೆಯಲ್ಲಿ ಸಾಗಿವೆ. ಇದಕ್ಕೆ ಅಧ್ಯಕ್ಷರ ಪತಿ ಶ್ರೀನಿವಾಸ್ ಹಸ್ತಕ್ಷೇಪವೇ ಕಾರಣ. ಇದರಿಂದ ಬೇಸತ್ತಿರುವ ಸದಸ್ಯರು 16 ಮಂದಿ ಸದಸ್ಯರ ಪೈಕಿ 11 ಮಂದಿ ಸದಸ್ಯರಾದ ಧನ್ವಂತ್ರಿ, ಕೃಷ್ಣಮೂರ್ತಿ, ಪ್ರತಾಪ್, ಎಂ.ನಾರಾಯಣಸ್ವಾಮಿ, ರತ್ಮಮ್ಮ, ಎಂ.ಮುನಿಸ್ವಾಮಿ, ಸುಜಾತಮ್ಮ, ಶಾಂತಕುಮಾರ್, ಆನಂದ್, ನಾಸೀರ್ ಅಹ್ಮದ್ ಹಾಗೂ ವೆಂಕಟಮ್ಮ ಉಪ ವಿಭಾಗಾಧಿಕಾರಿ ಮಂಜುನಾಥ್ ಅವರಿಗೆ ಅವಿಶ್ವಾಸ ಸಭೆ ಕರೆಯಲು ಮನವಿ ಸಲ್ಲಿಸಿದ್ದಾರೆ. ಅವಿಶ್ವಾಸಕ್ಕೆ ಸಹಿ ಹಾಕಿರುವ ವೆಂಕಟಮ್ಮರನ್ನು ಅಧ್ಯಕ್ಷರ ಪತಿ ಶ್ರೀನಿವಾಸ್ ಅಪಹರಿಸಿಕೊಂಡು ಹೋಗಿದ್ದಾರೆಂದು ಸದಸ್ಯರು ಆರೋಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.