ಕೋಲಾರ

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ: ವರ್ತೂರು

Published On :

ಕೋಲಾರ: ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸುವ ಹೊಣೆ ಶಿಕ್ಷಕರದ್ದು ಎಂದು ಶಾಸಕ ವರ್ತೂರು ಪ್ರಕಾಶ್ ತಿಳಿಸಿದರು.
ತಾಲೂಕಿನ ಚೌಡದೇನಹಳ್ಳಿಯ ಶ್ರೀಯೋಗಿ ಬೀರೇಶ್ವರ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಇಂದು ಪ್ರಪಂಚ ವೇಗವಾಗಿ ಬೆಳೆಯುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಹಳ್ಳಿ ಮಕ್ಕಳು ನಗರ ಮಕ್ಕಳ ಜತೆ ಪೈಪೋಟಿ ನಡೆಸಬೇಕಾದ್ದರಿಂದ ಅವರಿಗೆ ತಾಂತ್ರಿಕ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್, ವಿದ್ಯಾರ್ಥಿಗಳಲ್ಲಿ ಶಿಸ್ತು,ಬದ್ದತೆ, ಸಾಮಾಜಿಕ ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರೊಂದಿಗೆ ಪೋಷಕರು ಸಹಕರಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ನಮ್ಮ ಹೊಣೆ ಮುಗಿಯಿತು ಎಂಬ ಮನೋಭಾವ ಸರಿಯಲ್ಲ. ಪೋಷಕರು ಶಾಲೆಗಳಿಗೆ ತೆರಳಿ ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಕುರಿತು ಗಮನ ಹರಿಸಬೇಕೆಂದರು.
ಶಿಕ್ಷಕ ಸಿ.ಎಲ್.ಶ್ರೀನಿವಾಸಲು ಮಾತನಾಡಿ, ಮಕ್ಕಳಿಗೆ ಹಿರಿಯರೆಂಬ ಗೌರವ ಬೆಳೆಸುವ ಕಾರ್ಯದಲ್ಲಿ ಶಿಕ್ಷಕರ ಪ್ರಯತ್ನಕ್ಕೆ ಪೋಷಕರ ಸಹಕಾರ ಅಗತ್ಯ. ಗುರುಕುಲ ಪದ್ಧತಿಯಲ್ಲಿ ಮಕ್ಕಳ ಕಲಿಕೆಯಂತೆ ಇಂದು ಶಿಕ್ಷಣ ಪದ್ದತಿ ಇಲ್ಲ. ಗುರುವನ್ನು ಗೌರವಿಸುವವನು ಮಾತ್ರವೇ ತನ್ನ ಬದುಕಿನ ಗುರಿ ತಲುಪಬಲ್ಲ ಎಂಬ ಸತ್ಯವನ್ನು ಅರಿತು ಬಾಳಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಜೆ.ಆರ್.ವಿಲಿಯಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡರಾದ ವಿಜಯಕುಮಾರ್, ಮಾಲೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ, ವಕೀಲರಾದ ಶ್ರೀಮಂತಿನಿ, ರಾಮರೆಡ್ಡಿ, ಸಂಸ್ಥೆ ಸಂಸ್ಥಾಪಕ ವೆಂಕಟೇಶಪ್ಪ, ಕಾರ್ಯದರ್ಶಿ ವರಲಕ್ಷ್ಮಿ, ಅರಾಭಿಕೊತ್ತನೂರು ಗ್ರಾಪಂ ಅಧ್ಯಕ್ಷ ಸಿ.ನಾಗರಾಜ್, ಶಿಕ್ಷಕರಾದ ಎಂ.ವೆಂಕಟೇಶ್ ನಿರೂಪಿಸಿ, ನಜ್ಮಾತಾಜ್ ಸ್ವಾಗತಿಸಿ, ಮಂಗಳಗೌರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.