ಹಿರಿಯ ನಾಗರಿಕರ ಗುರುತಿನ ಚೀಟಿ ನೋಂದಣಿ ಅಭಿಯಾನ ಆರಂಭ
ಗುಡಿಬಂಡೆ: ಪಟ್ಟಣದ ವಿವಿಧೆಡೆ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಹಾಗೂ ಸರ್ಕಾರ-ಸರ್ಕಾರೇತರ ಸಂಸ್ಥೆಗಳಿಂದ ಸೋಮವಾರ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸುವ ಅಭಿಯಾನವನ್ನು ಆಯೋಜಿಸಲಾಗಿತ್ತು.
ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸುಲಭವಾಗುವಂತೆ ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಇವರ ಸಹಯೋಗದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಿಶ್ವನಾಥ್, ಸರ್ಕಾರ ಹಿರಿಯ ನಾಗರಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. 2009ರಿಂದ ಉನ್ನತಿ ಮಾನವ ಹಕ್ಕುಗಳ ಸಂಘದ ವತಿಯಿಂದ ತಾಲೂಕಿನಾದ್ಯಂತ ಇಲ್ಲಿಯವರೆಗೆ 3000ಕ್ಕೂ ಹೆಚ್ಚು ಗುರುತಿನ ಚೀಟಿಗಳನ್ನು ನೋಂದಾಯಿಸಿ, ವಿತರಿಸಲಾಗಿದೆ ಎಂದರು.
ಸಂಘದಿಂದ ಹಿರಿಯರಿಗೆ ನೆರವು: ಪಪಂ ಸದಸ್ಯ ರಿಯಾಜ್ ಪಾಷ ಮಾತನಾಡಿ, ಯಾವುದೇ ತಾರತಮ್ಯವಿಲ್ಲದೆ ಹಿರಿಯ ನಾಗರಿಕರಿಗೆ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಗುರುತಿನ ಚೀಟಿಗಳನ್ನು ನಿಗದಿತ ಶುಲ್ಕಕ್ಕೆ ವಿತರಿಸುತ್ತಿದೆ. ಅದರಲ್ಲೂ ಸ್ಥಳದಲ್ಲಿಯೂ ತಜ್ಞರಿಂದ ರಕ್ತದ ಗುಂಪು ಪರೀಕ್ಷೆ ಮತ್ತು ಭಾವಚಿತ್ರ ತೆಗೆಯುವ ಸೌಲಭ್ಯವನ್ನೂ ರಿಯಾಯಿತಿ ದರದಲ್ಲಿ ಮಾಡಿಕೊಡುವ ಮೂಲಕ ಹಿರಿಯರಿಗೆ ನೆರವಾಗುತ್ತಿರುವುದು ಸಂತಸದ ವಿಷಯವೆಂದರು.
ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದ ವ್ಯವಸ್ಥಾಪಕ ಶಶಾಂಕ್ ಹಿರಿಯ ನಾಗರಿಕರಿಗೆ ಸಾರಿಗೆ ಸಂಸ್ಥೆಯಲ್ಲಿ, ಆಸ್ಪತ್ರೆ, ಆ್ಯಂಬುಲೆನ್ಸ್, ಕಂದಾಯ ಇಲಾಖೆ, ಬ್ಯಾಂಕ್, ಅಂಚೆ ಕಚೇರಿ, ರೇಲ್ವೆ ಮೊದಲಾದ ಇಲಾಖೆಗಳಲ್ಲಿ ರಿಯಾಯತಿ ಮತ್ತು ಕಾಯ್ದಿರಿಸುವ ಸವಲತ್ತುಗಳು ಲಭ್ಯವಿದೆ. ಪ್ರತಿಯೊಬ್ಬ ಹಿರಿಯ ನಾಗರಿಕರನೂ ಈ ಸವಲತ್ತುಗಳನ್ನು ಪಡೆಯಲು ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯ ದ್ವಾರಕನಾಥ್ ನಾಯ್ಡು, ಎಂ.ಎನ್.ರಾಜಣ್ಣ, ರಮೇಶ್, ಜಿ.ಎಸ್.ಚಂದ್ರಶೇಖರ್, ಪರ್ತಕರ್ತರ ಸಂಘದ ಕಾರ್ಯದರ್ಶಿ ರಾಮಮೂರ್ತಿ ಸೇರಿದಂತೆ ಹಲವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

