ಕೋಲಾರ

ಸರಸ್ವತಿ ಕಾನ್ವೆಂಟ್ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವ

Published On :

ಶಿಡ್ಲಘಟ್ಟ: ಹುಟ್ಟಿದ ಊರು, ವಿದ್ಯಾರ್ಥಿ ಜೀವನ, ಬಾಲ್ಯದ ಸ್ನೇಹಿತರು, ಪಾಠ ಹೇಳಿದ ಗುರುಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಶ್ರೀರಂಗಪಟ್ಟಣದಲ್ಲಿ ಪ್ರಧಾನ ಸಿವಿಲ್‌ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ವಿ. ನಾಗರಾಜ ಅಭಿಪ್ರಾಯಪಟ್ಟರು.
ಪಟ್ಟಣದ ಸರಸ್ವತಿ ಕಾನ್ವೆಂಟ್ ಹಿರಿಯ ವಿದ್ಯಾರ್ಥಿಗಳ ಸಂಘದ ನಾಲ್ಕನೇ ವಾರ್ಷಿಕೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಇದೇ ಶಾಲೆಯ ಕೊಠಡಿಗಳಲ್ಲಿ ಕುಳಿತು ಪಾಠ ಕಲಿತಿದ್ದು, ಆವರಣದಲ್ಲಿ ಆಟವಾಡಿದ್ದು ನೆನೆಸಿಕೊಂಡು ತಮ್ಮ ನೆಚ್ಚಿನ ಶಿಕ್ಷಕರೆಲ್ಲರನ್ನು ವೇದಿಕೆ ಮೇಲಿಂದಲೇ ಗುರುತಿಸಿ ನಮಸ್ಕರಿಸಿದ ಅವರು ತಮ್ಮ ಅಧಿಕಾರ ಮರೆತು ಪಾಠ ಹೇಳಿಕೊಟ್ಟ ಶಿಕ್ಷಕರ ಮಧ್ಯೆ ಬಾಲ್ಯದ ವಿದ್ಯಾರ್ಥಿಯಂತಾಗಿದ್ದರು.
ನಟ ಪ್ರೇಮ್ ಮಾತನಾಡಿ, ಪ್ರಪಂಚದಲ್ಲಿ ಗುರುವಿಗಿಂತ ಮಿಗಿಲಾದ ಜೀವ ಇಲ್ಲ. ಯಾರ್ಯಾರನ್ನು ಏನೇನೋ ಮಾಡಿ ಅವರು ಅವರಾಗಿಯೇ ಕೊನೆಯವರೆಗೂ ಉಳಿದುಕೊಳ್ಳುವ ಶಿಕ್ಷಕರು ಸಮಾಜದ ಶಿಲ್ಪಿಗಳು ಎಂದು ಬಣ್ಣಿಸಿದರು. ಎನ್. ವೆಂಕಟಸುಬ್ಬರಾವ್, ವಿ. ಸೀತಾಲಕ್ಷ್ಮಿ, ಎಸ್.ಕೆ. ಗೋಪಿನಾಥ್, ಎನ್. ಶ್ರೀಕಾಂತ್, ಮಿಥುನ್, ಸುನಿಲ್‌ದತ್, ಆರ್. ಗಾಯಿತ್ರಿ, ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.