10ನೇ ಶತಮಾನದ ಜೈನ ಬಸದಿಗೆ ಕಾಯಕಲ್ಪ
ಗುಡಿಬಂಡೆ: ಪಟ್ಟಣದದ್ದು ಜೈನರ ಬೀದಿಯ ಶ್ರೀ ಪಚ್ಚೆ ಪಾರ್ಶ್ವನಾಥಸ್ವಾಮಿ ದೇವಾಲಯ ಮತ್ತು ಶ್ರೀ ಚಂದ್ರನಾಥ ಸ್ವಾಮಿ ದೇವಾಲಯ ಜೈನರ ಪ್ರಮುಖ ದೇವಾಲಯಗಳಿದ್ದು ಜಿನ ತೀರ್ಥಂಕರರ ಹಲವು ಐತಿಹ್ಯಗಳನ್ನು ಒಳಗೊಂಡಿದೆ.
10ನೇ ಶತಮಾನಕ್ಕೆ ಸೇರಿದ ಇಲ್ಲಿನ ಜೈನ ಬಸದಿಗೆ ಜೀರ್ಣೋದ್ಧಾರಗೊಳ್ಳಲಿದೆ. ಸುಮಾರು 40 ಲಕ್ಷ ವೆಚ್ಚದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್, ರಾಜ್ಯ ಸರ್ಕಾರದ ಪ್ರಾಚ್ಯ ವಸ್ತು ಇಲಾಖೆ ಹಾಗೂ ಗುಡಿಬಂಡೆ ದಿಗಂಬರ ಜೈನ ದೇವಾಲಯಗಳ ಟ್ರಸ್ಟ್ನಿಂದ ಜೀರ್ಣೋದ್ದಾರ ಕಾರ್ಯ ನಡೆಯಲಿದ್ದು, ಸೋಮವಾರ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸನ್ನಡತೆ ಮತ್ತು ಸತ್ಕರ್ಮಗಳ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳುವುದು ನಮ್ಮ ಧರ್ಮ ಎಂದರು.
ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಮಾತನಾಡಿ, ಹಿಂದೆ ಋಷಿ ಮುನಿಗಳು ತಮ್ಮ ತಪೋಭೂಮಿಯಲ್ಲಿ ಸೂಕ್ತ ಸ್ಥಳವನ್ನಾರಿಸಿ ಅಲ್ಲಿ ದೇವ ಸಾನ್ನಿಧ್ಯಗಳ ನಿರ್ಮಾಣ ಮಾಡಿದ್ದರಿಂದ ನಾಡಿನಲ್ಲಿ ಸುಭೀಕ್ಷೆ, ಸುಖ ಸಮೃದ್ಧಿ ನೆಲೆಯಾಗುತ್ತಿತ್ತು. ಆದರೆ ಈಗ ಖಾಲಿ ಜಮೀನಿನಲ್ಲಿ ದೇವಾಲಯಗಳು ನಿರ್ಮಾಣಗೊಳ್ಳುತ್ತಿರುವುದರಿಂದ ವೈಪರಿತ್ಯಗಳಾಗುತ್ತಿವೆ ಎಂದರು.
ಮೈಸೂರು ಪ್ರಾಚ್ಯ ವಸ್ತು ನಿರ್ದೇಶನಾಲಯದ ನಿರ್ದೇಶಕ ಡಾ.ಆರ್. ಗೋಪಾಲ್, ಕೈಗಾರಿಕೋದ್ಯಮಿ ಅನಿಲ್ ಸೇಥಿ, ಕರ್ನಾಟಕ ಜೈನ ಅಸೋಸಿಯೇಷನ್ ಜೀತೇಂದ್ರ ಕುಮಾರ್, ನಿವೃತ್ತ ಲೋಕಾಯುಕ್ತ ಅಧಿಕಾರಿ ಎಂ.ಜೆ. ಇಂದ್ರಕುಮಾರ್, ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶ ಆರ್.ವಿ. ವಸಂತ್ ಕುಮಾರ್, ಗುಡಿಬಂಡೆ ಜೈನ ಟ್ರೆಸ್ಟ್ ಅಧ್ಯಕ್ಷ ಜಿ.ಬಿ. ಪುಟ್ಟಣ್ಣಯ್ಯ, ಉಪಾಧ್ಯಕ್ಷ ಎ. ಅಜಿತ್ ಪ್ರಸಾದ್, ಆಶಾ ಪ್ರಭು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

