ಜೆಡಿಎಸ್ ರ್ಯಾಲಿಗೆ ಮಾಜಿ ಸಚಿವರಿಂದ ಚಾಲನೆ
ಕನ್ನಡಪ್ರಭ ವಾರ್ತೆ, ಕೋಲಾರ, ಜ.29
ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಯುವ ಚೈತನ್ಯ ರ್ಯಾಲಿಗೆ ಕೋಲಾರದಿಂದ ಸುಮಾರು 200ಕ್ಕೂ ಹೆಚ್ಚು ಯುವಕರು ಬೈಕ್ನಲ್ಲಿ ತೆರಳಿದರು.
ನಗರದ ಪ್ರವಾಸಿ ಮಂದಿರದ ಬಳಿ ಬೈಕ್ ರ್ಯಾಲಿಗೆ ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಚಾಲನೆ ನೀಡಿದರು.
ಬೈಕ್ ರ್ಯಾಲಿಯಲ್ಲಿ ತೆರಳಿದ ಯುವಕರಿಗೆ ಇಂಧನಕ್ಕಾಗಿ ತಲಾ 300 ರು. ಬೆಲೆಯ ಕೋಪನ್ ವಿತರಣೆ ಮಾಡಲಾಯಿತು. ಕೆಲವರು ಒಂದಕ್ಕಿಂತ ಹೆಚ್ಚು ಕೂಪನ್ಗಳನ್ನು ಪಡೆದಿದ್ದರಿಂದ ಕಾರ್ಯಕರ್ತರು ಹಲವರು ತಮಗೆ ಕೂಪನ್ ಸಿಕ್ಕಿಲ್ಲವೆಂದು ಮುಖಂಡರ ಬಳಿ ಅಳಲು ತೋಡಿಕೊಂಡರು.
ಬೈಕ್ ರ್ಯಾಲಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜು, ಎಪಿಎಂಸಿ ಅಧ್ಯಕ್ಷೆ ರಾಜೇಶ್ವರಿ ಲೋಕೇಶ್, ನಗರಸಭೆ ಸದಸ್ಯ ಮುಬಾರಕ್, ಮುರಳಿಗೌಡ, ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್, ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಇದ್ದರು.
ಜೆಡಿಎಸ್ ಬೈಕ್ ರ್ಯಾಲಿ
ಶಿಡ್ಲಘಟ್ಟ: ಪಟ್ಟಣದ ಪ್ರವಾಸಿ ಮಂದಿರದಿಂದ ಜೆಡಿಎಸ್ ಕಾರ್ಯಕರ್ತರು ಬೆಂಗಳೂರು ಅರಮನೆ ಮೈದಾನದಲ್ಲಿ ಬುಧವಾರ ನಡೆಯುವ ಯುವಚೇತನ ಕಾರ್ಯಕ್ರಮಕ್ಕೆ ಬೈಕ್ ರ್ಯಾಲಿ ಮೂಲಕ ತೆರಳಿದರು. ಬೈಕ್ ಓಡಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದ ಶಾಸಕ ಎಂ. ರಾಜಣ್ಣ, ರಾಜ್ಯ ಘಟಕದ ಯುವ ನಾಯಕ ಮಧು ಬಂಗಾರಪ್ಪ ಅವರ ಕೈ ಬಲಪಡಿಸಲು ಜೆಡಿಎಸ್ ಯುವ ಚೇತನ ಕಾರ್ಯಕ್ರಮ ಆಯೋಜಿಸಿದ್ದು, ತಾಲೂಕಿನಿಂದ ಯುವಕರು ಹಾಗೂ ಮುಖಂಡರು ಹೊರಟರು ಎಂದು ತಿಳಿಸಿದರು. ಅಫ್ಸರ್ಪಾಷ, ರಹಮತ್ತುಲ್ಲ, ಮುನಿಯಪ್ಪ, ದೊಣ್ಣಹಳ್ಳಿ ರಾಮಣ್ಣ, ಲಕ್ಷ್ಮಿನಾರಾಯಣ, ಸುರೇಶ್, ಮಂಜುನಾಥ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

