ಕೋಲಾರ

ಪ್ರಥಮ ರ್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ

Published On :

ಮಾಲೂರು: ಕಳೆದ ಮೇ-ಜೂನ್ನಲ್ಲಿ ನಡೆದ ಬಿಎ ಪರೀಕ್ಷೆ ಫಲಿತಾಂಶ ಬಂದಿದ್ದು, ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿ.ಎಂ.ತಿಮ್ಮರಾಯಪ್ಪ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಬಿಎನಲ್ಲಿ 2,400 ಅಂಕಗಳಲ್ಲಿ 2,097 ಅಂಕ ಪಡೆದು ಶೇ.87.38 ಫಲಿತಾಂಶ ಪಡೆದಿರುವ ತಿಮ್ಮರಾಯಪ್ಪನ ಸಾಧನೆಯನ್ನು ಅಭಿನಂದಿಸಿ ಸಂಭ್ರಮ ಹಂಚಿಕೊಂಡ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ನಂಗಲಿ, ಗ್ರಾಮಾಂತರ ಪ್ರದೇಶದ ಕನ್ನಡ ಮಾಧ್ಯಮದ ಹುಡುಗ ಮಾಡಿರುವ ಸಾಧನೆ ಹೆಮ್ಮೆ ತಂದಿದೆ. ಇತ್ತೀಚೆಗೆ ನಡೆದ ಎಂಎ. ಸಿಇಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಮಾಸ್ಟರ್ ಡಿಗ್ರಿ ಪರೀಕ್ಷೆ ಬರೆಯುತ್ತಿರುವ ತಿಮ್ಮರಾಯಪ್ಪ ಬಹುಮುಖ ಪ್ರತಿಭೆ ಎಂದರು. ಕೋಲಾರ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಮೊದಲ ರ್ಯಾಂಕ್ ಬಂದಿದ್ದು, ವ್ಯಾಸಂಗದ ವೇಳೆ ಆತನ ನಡುವಳಿಕೆ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು. ಫ್ರಾಧ್ಯಾಪಾಕರಾದ ಜಯರಾಂ, ಶಿವಮೂರ್ತಿ ಇದ್ದರು.
ಬಿಎ ಪ್ರಥಮ ರ್ಯಾಂಕ್ಗಳಿಸಿರುವ ಸಿ.ಎಂ. ತಿಮ್ಮರಾಯಪ್ಪ ಕನ್ನಡ ಪ್ರಭದೂಂದಿಗೆ ಮಾತನಾಡಿ, ಆಸ್ತಿ ಇಲ್ಲದ ನಮಗೆ ವಿದ್ಯೆಯೇ ಆಸ್ತಿಯಾಗಬೇಕು ಎಂಬ ಹಂಬಲ ರ್ಯಾಂಕ್ ಪಡೆಯುವಂತೆ ಮಾಡಿದೆ. ನನ್ನ ಓದಿಗೆ ಮಾಲೂರು ಕಾಲೇಜಿನ ಎಲ್ಲ ಪ್ರಾಧ್ಯಾಪಕರು ನೀಡಿದ ಸಹಕಾರ ಕಾರಣ ಎನ್ನುತ್ತಾರೆ.
ತಾಲೂಕಿನ ಮಾಸ್ತಿ ಹೋಬಳಿಯ ಚವರಮಂಗಲದ ಕೂಲಿ ಮಾಡುವ ಮುನಿಕೃಷ್ಣಪ್ಪ, ಅನುಸೂಯಮ್ಮರ ಎರಡನೇ ಪುತ್ರನಾಗಿರುವ ತಿಮ್ಮರಾಯಪ್ಪ ಕನ್ನಡ ಮಾಧ್ಯಮದ ಗ್ರಾಮಾಂತರ ಪ್ರತಿಭೆ. ಪ್ರಾಥಮಿಕ ಹಂತವನ್ನು ಸ್ವಗ್ರಾಮ ಚವರಮಂಗಲದಲ್ಲಿ, ಕೆಸರೆಗೆರೆ ಗ್ರಾಮದಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ವ್ಯಾಸಂಗವನ್ನು ಮಾಸ್ತಿಯಲ್ಲಿ ಪೂರೈಸಿ ಪದವಿಯನ್ನು ಮಾಲೂರಿನ ಹಾಸ್ಟೆಲ್ನಲ್ಲಿ ಇದ್ದು ಪೂರ್ಣಗೊಳಿಸಿದ್ದಾರೆ.
ಇಲ್ಲಿ ವ್ಯಾಸಂಗದ ಜತೆಗೆ ಸಾಹಿತ್ಯದಲ್ಲೂ ತೊಡಗಿಸಿಕೊಂಡಿರುವ ತಿಮ್ಮರಾಯಪ್ಪ ಸಾಧನೆ ಗಮನಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಮ್ಮರಾಯಪ್ಪರನ್ನು ಸನ್ಮಾನಿಸುವ ನಿರ್ಧಾರ ಕೈಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.