ಕೋಲಾರ

ರು. 350 ಕೋಟಿ ವೆಚ್ಚದಲ್ಲಿ ಗೌರಿಬಿದನೂರು-ಚಿಕ್ಕಬಳ್ಳಾಪುರ ರೈಲು ಮಾರ್ಗ

Published On :

ಗೌರಿಬಿದನೂರು: ಕೇಂದ್ರ ಮತ್ತು ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಹೆಚ್ಚು ಅಭಿವೃದ್ಧಿ ಆಗುತ್ತಿರುವುದು ಶ್ಲಾಘನೀಯ ಎಂದು ಉಪಸಭಾಧ್ಯಕ್ಷ ಎನ್.ಹೆಚ್. ಶಿವಶಂಕರ ರೆಡ್ಡಿ ತಿಳಿಸಿದರು.
 ಪಟ್ಟಣದ ಕರೇಕಲ್ಲಹಳ್ಳಿ ಸಮೀಪದ ರೈಲ್ವೆ ಸೇತುವೆ ಬಳಿಯ ಸುಮಾರು 2ಕೋಟಿ ರು. ವೆಚ್ಚದಲ್ಲಿ ರೈಲ್ವೆ ಒಳಸೇತುವೆ (ಅಂಡರ್ಪಾಸ್) ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತ ಈ ಭಾಗದ ಸಂಘ ಸಂಸ್ಥೆಯ ಮುಖಂಡರುಗಳಾದ ಹಲವು ವರ್ಷಗಳ ಹೋರಾಟದ ಫಲವಾಗಿ ಇಂದು ರೈಲ್ವೆ ಒಳ ಸೇತುವೆ ಕಾಮಗಾರಿ ಆಗುತ್ತಿರುವ ಘನತೆ ಹೋರಾಟಗಾರರಿಗೆ ಸಲ್ಲುತ್ತದೆ. ಜೊತೆಗೆ ರೈಲ್ವೆ ನಿಲ್ದಾಣದ ನವೀಕರಣ ಪ್ಲಾಟ್ಫಾರಂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಹಾಗೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗ ಮಧ್ಯದಲ್ಲಿ ಸುಮಾರು 350 ಕೋಟಿ ವೆಚ್ಚದಲ್ಲಿ ರೈಲ್ವೆ ಮಾರ್ಗಮುಂದಿನ ಬಜೆಟ್ನಲ್ಲಿ ಮಂಡನೆ ಆಗಲಿದ್ದು ಈಗಾಗಲೇ ಕೇಂದ್ರ ಸರ್ಕಾರ ಈ  ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ಇದರಿಂದ ತಾಲೂಕಿನ ಜನತೆಗೆ ಹೆಚ್ಚು ಉಪಯೋಗವಾಗಲಿದೆ. ಜೊತೆಗೆ ಮಧುಗಿರಿ ಗೌರಿಬಿದನೂರು ರಸ್ತೆಯ ರೈಲ್ವೆ ಮಾರ್ಗಕ್ಕೆ ಮೇಲ್ಸೇತುವೆ ಸಹ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯಲಿವೆ ಎಂದು ತಿಳಿಸಿದರು. ರೈಲ್ವೆ ಅಭಿಯಂತರರಾದ ನಂದಕುಮಾರ್, ಜಿ.ಕೆ ಸತೀಶ್, ಗೀತಾಜಯಂದರ್, ಮುನಿರಾಜು, ಕಲ್ಪನ ರಮೇಶ್, ವಿ. ರಮೇಶ್,ಚಿದಾನಂದಗುಪ್ತಾ ಇದ್ದರು.



ನಾಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಗೌರಿಬಿದನೂರು: ತಾಲೂಕಿನಲ್ಲಿ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದು ಜನವರಿ 31ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ ಎಂದು ಉಪಾಸಭಾಧ್ಯಕ್ಷ ಎನ್.ಹೆಚ್. ಶಿವಶಂಕರ ರೆಡ್ಡಿ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ಡಾ. ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಮಂತ್ರಿಗಳಾದ ಕೆ.ಹೆಚ್. ಮುನಿಯಪ್ಪ, ಎಂ. ವೀರಪ್ಪ ಮೊಯ್ಲಿ ಮತ್ತಿತರರು ಭಾಗವಹಿಸಲಿದ್ದಾರೆ. ವಿಶೇಷವಾಗಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಡಾ. ಹೆಚ್.ಎನ್ ಕಲಾಭವನ, ಪಟ್ಟಣದ ಹಿರೇಬಿದನೂರು ಬಳಿಯ ನೇತಾಜಿ ಕ್ರೀಡಾಂಗಣ, ಕುಡುಮಲಕುಂಟೆ ಕೈಗಾರಿಕಾ ವಲಯದಲ್ಲಿ 2ನೇ ಹಂತದ ಕಾಮಗಾರಿ ಉದ್ಘಾಟನೆ, ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ, ತಾಪಂ ಸಭಾಂಗಣ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಅವರು ಮನವಿ ಮಾಡಿದರು. ಜಿಲ್ಲಾ ಬಂದ್ ಬಗ್ಗೆ ಯಾವುದೇ ಗೊಂದಲ ಬೇಡ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.


ಲೋಹ ಸಂಗ್ರಹ ಕಾರ್ಯಕ್ರಮ
ಚಿಂತಾಮಣಿ: ಆಲಂಬಗಿರಿಯ ಶ್ರೀ ವೆಂಕಟೇಶ್ವರಸ್ವಾಮಿ ಸನ್ನಿಧಿಯಲ್ಲಿ ಲೋಹ ಸಂಗ್ರಹಕ್ಕೆ ಈಗಾಗಲೇ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಚಾಲನೆ ನೀಡಿದ್ದು, ಎರಡನೇ ಹಂತವಾಗಿ ಲೋಹ ಸಂಗ್ರಹ ರಥ ಕೈವಾರ, ಅಂಬಾಜಿದುರ್ಗ, ಕಸಬಾ ಹೋಬಳಿಗಳಲ್ಲಿ ಸಂಚರಿಸಲಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಪ್ರತಿ ಗ್ರಾಪಂನಲ್ಲಿ ರಥ ಸಂಚರಿಸಲಿದ್ದು, ರೈತರು ತುಂಡು ಕಬ್ಬಿಣ ಕೊಟ್ಟು ಯಶಸ್ವಿಗೊಳಿಸಲು ಲೋಹ ಸಂಗ್ರಹಣೆಯ ತಾಲೂಕು ಸಂಚಾಲಕ ತಳಗವಾರ ಪ್ರತಾಪ್ ಕುಮಾರ್, ಬಟ್ಲಹಳ್ಳಿ ರಾಜಾರೆಡ್ಡಿ, ಸೂರ್ಯ ಪ್ರಕಾಶ್ ಕೋರಿದ್ದಾರೆ.
ಶಾಶ್ವತ ನೀರಾವರಿ: ಬಿಜೆಪಿ ಬೆಂಬಲ: 31 ರಂದು ಚಿಕ್ಕಬಳ್ಳಾಪುರ ಜಿಲ್ಲಾಧ್ಯಂತ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಇದಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ  ತಳಗವಾರ ಪ್ರತಾಪ್, ಸೂರ್ಯಪ್ರಕಾಶ್, ಗಾಜುಲ ಶಿವ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.