ಕೋಲಾರ

ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

Published On :

ಕೆಜಿಎಫ್: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಸೌಲಭ್ಯಗಳು ಸದ್ಬಳಕೆಯಾಗಲು ಪೋಷಕರ ಸಹಕಾರ ಅಗತ್ಯ ಎಂದು ಮುಖ್ಯ ಶಿಕ್ಷಕ ಎಲ್.ಬಿ. ಶಿವಕುಮಾರ್ ಹೇಳಿದರು.
ಕ್ಷೇತ್ರದ ಕರಡುಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿ, ಆರ್ಟಿಇ ಅಡಿ ಯಾವುದೇ ಶಾಲೆಯಲ್ಲಿ ಮಗು ವಿದ್ಯಾಭ್ಯಾಸ ಪಡೆಯಬೇಕೆಂಬ ಇಚ್ಚೆ ಇದ್ದಲ್ಲಿ ನಿಯಮಾನುಸಾರ ದಾಖಲಿಸಿಕೊಂಡು ಉಚಿತ ಕಡ್ಡಾಯ ಶಿಕ್ಷಣ ನೀಡುವಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ತಿಳಿಸಿದರು.   ಕ್ಷೇತ್ರ ಸಂಪ್ಮೂಲ ವ್ಯಕ್ತಿ ಆರ್. ಶ್ರೀನಿವಾಸನ್, ಶಿಕ್ಷಣದ ಮಹತ್ವವನ್ನು ಪೋಷಕರು ಅರಿತಾಗ ಎಲ್ಲಾ ಪ್ರದೇಶಗಳಲ್ಲೂ ಮಕ್ಕಳು ವಿದ್ಯಾವಂತರಾಗಿ ಸತ್ಪಜೆಗಳಾಗಿ ಬಾಳಲು ಸಾಧ್ಯವೆಂದು ತಿಳಿಸಿದರು. ಆನಂದಕುಮಾರ್, ಲಕ್ಷ್ಮಪ್ಪ, ಈಶ್ವರ್, ಸಗಾಯ್, ಮೇರಿ, ಉಷಾರಾಣಿ ಇದ್ದರು.


'ಯುವಶಕ್ತಿ ಉಪಯೋಗವಾಗಲಿ'
ಶಿಡ್ಲಘಟ್ಟ: ಪ್ರಜಾಪ್ರಭುತ್ವದ ಯಶಸ್ಸು ಯುವಕರ ಕೈಯಲ್ಲಿದ್ದು ರಾಷ್ಟ್ರದ ಯುವಶಕ್ತಿ ಸದುಪಯೋಗವಾದಲ್ಲಿ ದೇಶದ ಸಮಸ್ಯೆಗಳನ್ನು ಕೊನೆಗಾಣಿಸಬಹುದೆಂದು ಶಾಸಕ ಎಂ. ರಾಜಣ್ಣ ತಿಳಿಸಿದರು.
ನೆಹರೊ ಕ್ರೀಡಾಂಗಣದಲ್ಲಿ 65 ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ನಿರುದ್ಯೋಗ, ಭ್ರಷ್ಟಾಚಾರ, ಆಹಾರದ ಸಮಸ್ಯೆ, ಭಯೋತ್ಪಾದನೆ ಮುಂತಾದ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳ ವೈಪಲ್ಯವೇ ಕಾರಣವೆಂದರು.  ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ನಾರಾಯಣಸ್ವಾಮಿ, ವಿವಿಧ ಸಂಸ್ಕೃತಿ, ಹಲವುಮ ಭಾಷೆ, ಧರ್ಮಗಳ ನಡುವೆ ಉತ್ತಮ ಸಂವಿಧಾನದಿಂದ ಮಾತ್ರ ಒಕ್ಕೂಟ ವ್ಯವಸ್ಥೆ ಬಲಗೊಳ್ಳಲಿದೆಯೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.