ಕೋಲಾರ

ಇದೇನು ಸಭ್ಯತೆ, ಇದೇನು ಸಂಸ್ಕೃತಿ?

Published On :

ಪಾ.ಶ್ರೀ. ಅನಂತರಾಮ್
ಕೋಲಾರ: ಶಾಲಾ-ಕಾಲೇಜುಗಳಲ್ಲಿ ಒಂದಿಷ್ಟು ಜಾಲಿ, ಚೆಷ್ಟೆ, ತುಂಟಾಟ ಸಾಮಾನ್ಯ. ಆದರೆ, ಯಾವುದಕ್ಕೂ ಒಂದು ಮಿತಿ ಇರದಿದ್ದರೆ  ಟೀಕೆಗೆ ಗುರಿಯಾಗಬೇಕಾಗುತ್ತದೆ.
ಮಕ್ಕಳಾಗಿದ್ದಾಗ ಮನೆಗಳ ಗೋಡೆ, ನೆಲದ ಮೇಲೆ, ಸಿಕ್ಕ ಸಿಕ್ಕ ಪುಸಕ್ತಗಳ ಮೇಲೆ ಪೆನ್ನು, ಪೆನ್ಸಿಲ್, ಬಳಪದಿಂದ ಮನಬಂದಂತೆ ಗಿಚುವುದನ್ನೇ ಸಹಿಕೊಳ್ಳಲು ಕಷ್ಟವಾಗುತ್ತದೆ. ಆದರೆ, ಮಕ್ಕಳಲ್ಲಿನ ಮುಗ್ಧತೆ, ಅಮಾಯಕತನ ಸಿಟ್ಟು ಬರಿಸಲ್ಲ, ಒಂದು ವೇಳೆ ಸಿಟ್ಟು ಬಂದರೂ ಪಾಪ ಮಕ್ಕಳು ಎಂದು ಸಮ್ಮನಾಗಬೇಕಾಗುತ್ತದೆ.
ಸಾಮಾನ್ಯವಾಗಿ 5ನೇ ತರಗತಿಯವರೆಗೆ ಮಕ್ಕಳು ಏನು ಮಾಡಿದರೂ ಚಂದವಾಗಿಯೇ ಕಾಣುತ್ತದೆ, ನಂತರ ಮನೆಯಲ್ಲಿನ ವಾತಾವರಣ, ಶಾಲಾ ಕಾಲೇಜಿನಲ್ಲಿ ಸಿಗುವ ಗುಣಮಟ್ಟದ ಪಾಠ ಪ್ರವಚನ, ಶಿಸ್ತು, ಶಿಕ್ಷಕರ ಮೇಲಿನ ಭಯ ಇತ್ಯಾಧಿ ಕಾರಣಗಳಿಂದ ಸುಧಾರಣೆ ಆಗುವ ಸಾಧ್ಯತೆಗಳು ಇವೆ.
ಆದರೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳು ತಾವೇನು ಮಕ್ಕಳೆಂದೇ ಭಾವಿಸಿ ಶಿಸ್ತಿನ ಕೊರತೆಯಿಂದ ಅಸಭ್ಯವಾಗಿ ವರ್ತಿಸುತ್ತಿದ್ದು ಕಡಿವಾಣ ಹಾಕದಿದ್ದರೆ ಕಾಲೇಜಿನ ಮಾರ್ಯದೆ ಹಾಳಾಗುತ್ತದೆ.
ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬರುವ ಶೇ.70ಕ್ಕಿಂತ ಹೆಚ್ಚು ಮಕ್ಕಳು ಬಡವರು, ಹಳ್ಳಿಯಿಂದ ಬರುವವರು ಎಂಬ ಕಾರಣಕ್ಕೆ ಸರ್ಕಾರ ಅನೇಕ ರೀತಿಯ ಸವಲತ್ತುಗಳನ್ನು ನೀಡುತ್ತಿದೆ ಇವುಗಳ ಮೂಲಕ ಚನ್ನಾಗಿ ಓದಿ ಜ್ಞಾನಭಂಡಾರ ಹೆಚ್ಚಿಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಬೇಕಾದ ವಿದ್ಯಾರ್ಥಿಗಳು ತರಗತಿಗಳಲ್ಲಿ ಉಪನ್ಯಾಸಕರು ಹೇಳುವ ಪಾಠ-ಪ್ರವಚನ ಚನ್ನಾಗಿ ಕೇಳಿಸಿಕೊಂಡು ತಂದೆ-ತಾಯಿ ಕಷ್ಟ ಪಟ್ಟು ಕೊಡಿಸುವ ನೋಟ್ ಪುಸಕ್ತದಲ್ಲಿ ಬರೆದು ಆದರ್ಶ ವಿದ್ಯಾರ್ಥಿ ಆಗುವ ಬದಲು ಡೆಸ್ಕ್ಗಳ ಮೇಲೆ ಪ್ರೇಮ ಸಂಕೇತ, ತಮಗಿಷ್ಟವಾದ ಗೆಳೆಯ-ಗೆಳತಿಯರ ಹೆಸರು, ಅಸಭ್ಯ ಹಾಗೂ ಆಶ್ಲೀಲವಾದ ಸಾಹಿತ್ಯವನ್ನು ಚಿತ್ರಿಸಿ ಕಾಲೇಜಿನ ಘನತೆ-ಗೌರವಕ್ಕೆ ಮಸಿ ಬಳೆದಿರುವುದು ಗಮನಿಸಿದರೆ ಈ ವಿದ್ಯಾರ್ಥಿಗಳಿಗೆ ಸಂಸ್ಕಾರ, ಜೀವನದ ಮೌಲ್ಯಗಳನ್ನು ಕಲಿಸಲು ಪೋಷಕರು ಮಾತ್ರವಲ್ಲ ಕಾಲೇಜಿನ ಆಡಳಿತ ವರ್ಗವೂ ವಿಫಲವಾಗಿದೇ ಎಂದೇ ಭಾವಿಸಬೇಕಾಗುತ್ತದೆ.
ಕಾಲೇಜಿನ ವಿದ್ಯಾರ್ಥಿಗಳನ್ನು ತರಗತಿಯಿಂದ ಬಿಡಿಸಿಕೊಂಡು ಪ್ರತಿಭಟನೆ, ಸಭೆ, ಸಮಾರಂಭಗಳಿಗೆ ಕರೆದೊಯ್ಯುವ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನ ಕಟ್ಟಡಗಳು ವಿಕೃತವಾಗುತ್ತಿರುವ ಬಗ್ಗೆ ಚಿಂತನೆ ಮಾಡದಿರುವುದು ದುರ್ದೈವ.
ಕಾಲೇಜುಗಳಲ್ಲಿ ಮೂಲ ಸೌಕರ್ಯಗಳಿಲ್ಲ, ಸ್ವಚ್ಛತೆ ಇಲ್ಲ, ಆಕರ್ಷಣೆಯಿಲ್ಲವೆಂದು ಗಂಟಲು ಕಿತ್ತು ಹೋಗುವ ರೀತಿಯಲ್ಲಿ ಕಿರುಚಾಡುವ ವಿದ್ಯಾರ್ಥಿ ಮುಖಂಡರು ಶಿಸ್ತು, ಸಂಸ್ಕಾರಗಳ ಬಗ್ಗೆ ನಿಷ್ಟೂರವಾಗಿ ಮಾತನಾಡಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡದೆ ಕೇವಲ ಸಂಘಟನೆಗಳ ಬಲವರ್ಧನೆಗೆ ಆಸಕ್ತಿ ತೋರಿದರೆ ಫಲ ಸಿಗುವುದಿಲ್ಲ.ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಶಿಸ್ತು, ಸಂಸ್ಕಾರ ಕಲಿತು ಹೊರ ಬರುವ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಗೆ ಆದರ್ಶಪ್ರಾಯರಾಗುತ್ತಾರೆ. ವಿದ್ಯಾರ್ಥಿ ಸಮಾವೇಶ, ಸಮ್ಮೇಳನ, ಸಭೆ, ಸಮಾರಂಭ ಮಾಡುವ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಅಲ್ಲಿಗೆ ಬರುವ ವಿದ್ಯಾರ್ಥಿಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಹೇಗಿರಬೇಕೆಂಬುದರ ಬಗ್ಗೆ ತಿಳುವಳಿಕೆ ನೀಡದಿದ್ದರೆ ಅಂತಹ ವಿದ್ಯಾರ್ಥಿಗಳನ್ನು ಸದಸ್ಯರನ್ನಾಗಿ ಹೊಂದುವ ಸಂಘಟನೆಗಳಿಗೂ ಬೆಲೆ ಇಲ್ಲದಂತಾಗುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.