ಕೋಲಾರ

ಪೆಟ್ರೋಲ್ ಬಂಕ್ ದರೋಡೆಗೆ ಯತ್ನ

Published On :

ಕೋಲಾರ: ತಾಲೂಕಿನ ನರಸಾಪುರ ಬಳಿಯ ಕಾಮತ್ ಹೊಟೇಲ್ ಪಕ್ಕದ ಇಂಡಿಯನ್ ಆಯಿಲ್ ಕಂಪನಿಗೆ ಸೇರಿದ ಪೆಟ್ರೋಲ್ ಬಂಕ್ನಲ್ಲಿ ಆರು ಮಂದಿ ಮುಸುಕುಧಾರಿಗಳು ಮಂಗಳವಾರ ಮಧ್ಯರಾತ್ರಿ ದರೋಡೆಗೆ ವಿಫಲ ಯತ್ನ ನಡೆಸಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಬಂದಿದ್ದ ಮುಸುಕುಧಾರಿಗಳು ಪೆಟ್ರೋಲ್ ಬಂಕ್ನಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಮತ್ತು ಚಲಪತಿ ಎಂಬುವರನ್ನು ಬಂಕ್ ಆಫೀಸಿನಿಂದ ಹೊರಗೆ ಕರೆಸಿ ವಾಹನಕ್ಕೆ 800 ರು.ಗೆ ಡಿಸೇಲ್ ಹಾಕುವಂತೆ ಕೇಳಿದ್ದಾರೆ.
ಗಿರಾಕಿಗಳು ಇರಬಹುದೆಂದು ಸಿಬ್ಬಂದಿ ಡಿಸೇಲ್ ಹಾಕಿದ ನಂತರ ಮುಸುಕುಧಾರಿಗಳು, ನಮ್ಮ ಬಳಿ ಹಣ ಇಲ್ಲ. ನಮ್ಮ ಕಡೆಯವರು ಬಂದು ಹಣ ಕೊಡುವ ತನಕ ನಾವಿಲ್ಲೇ ಇರುತ್ತೇವೆಂದು ಹೇಳಿ ಬಂಕ್ ಆಫೀಸಿಗೆ ಹೋಗಿ ಹಣಕ್ಕಾಗಿ ಶೋಧನೆ ಮಾಡಿದ್ದಾರೆ.
ಇದರಿಂದ ಅನುಮಾನಗೊಂಡ ಸಿಬ್ಬಂದಿ ಮುಸುಕುಧಾರಿಗಳನ್ನು ಹಿಂಬಾಲಿಸಿ ಒಳಗೆ ಹೋದಾಗ, ಕತ್ತಿ ತೋರಿಸಿ ಹಣಕ್ಕಾಗಿ ಪೀಡಿಸಿದ್ದಾರೆ. ಆದರೆ, ಈ ಸಿಬ್ಬಂದಿ ಧೈರ್ಯ ಕಳೆದುಕೊಳ್ಳದೆ, ನಮ್ಮಲ್ಲಿ ಹಣ ಇಲ್ಲ, ನೀವು ಕಚೇರಿಯೊಳಗೆ ಶೋಧನೆ ಮಾಡುತ್ತಿರುವುದು ಸಿಸಿ ಟಿವಿಯಲ್ಲಿ ಚಿತ್ರಿಕರಣವಾಗಿದೆ ಎಂದಾಗ, ಅಪರಿಚಿತರು ಬಂಕ್ ಸಿಬ್ಬಂದಿಯಾದ ಉಮೇಶ್ ಮತ್ತು ಚಲಪತಿಯನ್ನು ತಳ್ಳಿಕೊಂಡು ಹೊರಬಂದು ವಾಹನದಲ್ಲಿ ಪರಾರಿಯಾಗಿದ್ದಾರೆ.
ಈ ಸಂಬಂಧ ಸಿಬ್ಬಂದಿ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬುಧವಾರ ಸ್ಥಳಕ್ಕೆ ಜಿಲ್ಲಾ ಎಸ್ಪಿ ರಾಮ್ನಿವಾಸ್ ಸಪೆಟ್, ಎಎಸ್ಪಿ ಜಮೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ನಂಬರ್ ಪ್ಲೇಟ್ ಇಲ್ಲದ ಮಹೇಂದ್ರ ಗಾಡಿಯ ಪತ್ತೆಗಾಗಿ ಮತ್ತು ದರೋಡೆಗಾಗಿ ಯತ್ನಿಸಿರುವ ಅಪರಿಚಿತರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿದೆಯಲ್ಲದೆ ಹೆದ್ದಾರಿ ಗಸ್ತು ಹೆಚ್ಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.