ಮೂಲಭೂತವಾದಿಗಳಿಂದ ಯುವಜನರ ದುರ್ಬಳಕೆ
ಕೋಲಾರ: ಹಿಂದೂ, ಕ್ರೈಸ್ತ, ಇಸ್ಲಾಂ ಸೇರಿದಂತೆ ವಿವಿಧ ಧರ್ಮಗಳಲ್ಲಿ ಮೂಲಭೂತವಾದಿಗಳು ತಮ್ಮ ಸ್ವಾರ್ಥಕ್ಕಾಗಿ ಹಾಗೂ ದೇಶದಲ್ಲಿ ಅಶಾಂತಿ ಮೂಡಿಸಿ ಅದರ ಲಾಭ ಪಡೆಯಲು ವಿದ್ಯಾರ್ಥಿಗಳನ್ನು ಮತ್ತು ಯುವಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಎನ್. ಅನಂತ ನಾಯ್ಕ್ ಆರೋಪಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಎಸ್ಎಫ್ಐನಿಂದ ಹಮ್ಮಿಕೊಂಡಿದ್ದ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ, ಮಹಾತ್ಮಾಗಾಂಧಿ ಜನಪರ ಚಳವಳಿಯ ಮೂಲಕ ಸಾಮ್ರಾಜ್ಯಶಾಹಿಗಳಿಗೆ ಎದುರೇಟು ನೀಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು, ಮೇಲ್ಜಾತಿಯಲ್ಲಿ ಹುಟ್ಟಿದರೂ ಪ್ರಗತಿಪರ ಚಿಂತಕರಾಗಿದ್ದರು, ಜಾತಿಯತೆ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದರು, ಭಾರತ ಜ್ಯಾತ್ಯತೀತ ರಾಷ್ಟ್ರವಾಗಬೇಕೆಂದು ಬಯಸಿದ್ದರು. ಆದರೆ, ಭಾರತ ಹಿಂದೂ ರಾಷ್ಟ್ರವಾಗಬೇಕೆಂಬ ಉದ್ದೇಶದಿಂದ ಹಿಂದೂ ಮಹಾಸಭಾದ ನಾಯಕರು ಆರ್ಎಸ್ಎಸ್ನಲ್ಲಿದ್ದ ಮೂಲಭೂತವಾದಿ ನಾತುರಾಮ್ ಮೂಲಕ ಗಾಂಧಿಯನ್ನು ಕೊಲೆ ಮಾಡಿಸಿ ಗಾಂಧೀಜಿಯ ಆಶಯಗಳಿಗನ್ನು ನುಚ್ಚುನೂರು ಮಾಡಿದರೆಂದು ಹೇಳಿದರು.
ಗಾಂಧಿಯನ್ನು ಕೊಂದವರೇ ಮತ್ತೆ ದೇಶವನ್ನು ಛಿದ್ರಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಗಾಂಧಿ ಹುಟ್ಟಿದ ರಾಜ್ಯವಾದ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ದೇಶವನ್ನು ಆಳುವುದಕ್ಕೆ ಯತ್ನಿಸುತ್ತಿದ್ದಾರೆ. ಶಾಂತಿ ಸೌಹಾರ್ದತೆ ಇಲ್ಲದಿದ್ದರೆ ದೇಶದ ಪ್ರಗತಿ ಸಾಧ್ಯವಾಗದು, ಇದಕ್ಕಾಗಿ ಯುವಕರು, ವಿದ್ಯಾರ್ಥಿಗಳು ಒಗ್ಗೂಡಿ ದೇಶದ ಹಿತ ಕಾಪಾಡಲು ಸಂಘಟಿತರಾಗಬೇಕೆಂದು ತಿಳಿಸಿದರು.
ಉಪನ್ಯಾಸಕ ಡಾ. ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ಕುವೆಂಪು ಅವರ ಮನುಜ ಮತ, ವಿಶ್ವಪಥ ಸಂದೇಶವನ್ನು ಪಾಲಿಸಬೇಕು, ಕುವೆಂಪು ಹೇಳಿದ ರೀತಿಯಲ್ಲಿ ಗುಡಿ,ಚರ್ಚು ಮಸೀದಿಗಳನ್ನು ಬಿಟ್ಟು ಹೊರ ಬಂದು ಭಾರತವೇ ದೊಡ್ಡ ಮಂದಿರವೆಂದು ತಿಳಿಯದಿದ್ದರೆ ಉಳಿಗಾಲವಿಲ್ಲವೆಂದು ಎಚ್ಚರಿಸಿದರು. ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ವಿ. ಅಂಬರೀಶ್, ಜಿಲ್ಲಾ ಮಾಜಿ ಉಪಾಧ್ಯಕ್ಷ ಎನ್. ಅಂಬರೀಶ್ ಇದ್ದರು, ಜಿಲ್ಲಾ ಅಧ್ಯಕ್ಷ ವಾಸುದೇವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

