ಖಾತರಿ ಕಾರ್ಮಿಕ ಕುಸಿದು ಬಿದ್ದು ಸಾವು
ಬಾಗೇಪಲ್ಲಿ: ಉದ್ಯೋಗ ಖಾತರಿ ಯೋಜನೆಯಡಿಯ ಕೆಲಸದಲ್ಲಿ(ಕೆರೆಗಳ ಪುನಶ್ಚೇತನ ಯೋಜನೆ) ಕಾರ್ಯನಿರತರಾಗಿದ್ದ ಕೂಲಿ ಕಾರ್ಮಿಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ವೆಂಕಟರೆಡ್ಡಿ(58) ಮೃತಪಟ್ಟ ದುರ್ದೈವಿ. ಕೆರೆಗಳ ಪುನಶ್ಚೇತನ ಯೋಜನೆಯಡಿಯಲ್ಲಿ ಕೆರೆಯಲ್ಲಿ ಕೆಲಸ ಮಾಡುವ ಕಾಮಗಾರಿಯನ್ನು ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ಸಮೀಪದಲ್ಲಿರುವ ಮಾಮಿಡಿಮಾಕಲಕುಂಟೆಯಲ್ಲಿ ಕೈಗೊಳ್ಳಲಾಗುತ್ತಿತ್ತು. ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಕೆಲಸದಲ್ಲಿ ನಿರತರಾಗಿದ್ದ ವೆಂಕಟರೆಡ್ಡಿಯವರು ಹಠಾತ್ ಕುಸಿದು ಬಿದ್ದ. ಕೂಡಲೇ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಆಂಬುಲೆನ್ಸ್ ವಾಹನದ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಕೂಲಿ ಕಾರ್ಮಿಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 25 ಸಾವಿರ ರು.ಗಳ ಪರಿಹಾರ ಕೊಡಿಸುವ ಭರವಸೆ ನೀಡಿದರು. ನಾರಾಯಣನಾಯಕ್,ಇಓ ಶ್ರೀನಿವಾಸ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಡಿ.ಎಸ್. ನಾಗಿರೆಡ್ಡಿ, ಗ್ರಾಮದ ಮುಖಂಡರಾದ ಡಿ.ಎನ್. ನರಸರೆಡ್ಡಿ, ಜಿ.ಪಂ. ಎಇಇ ಪಿ.ವಿ. ನಾಗಪ್ಪ, ಗ್ರಾಪಂ ಪಿಡಿಓ ಎಂ. ಪ್ರಸನ್ಕುಮಾರ್, ಕಾರ್ಯದರ್ಶಿ ಪಾರ್ಥಸಾರಥಿ, ಡಿ.ಎನ್. ಭಾಸ್ಕರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಟ್ರ್ಯಾಕ್ಟರ್ ಹರಿದು ಕೂಲಿ ಕಾರ್ಮಿಕ ಸಾವು
ಬಂಗಾರಪೇಟೆ: ಟ್ರ್ಯಾಕ್ಟರ್ ಹರಿದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಕೂಲಿ ಕಾರ್ಮಿಕನನ್ನು ಕೊಳಮೂರು ಗ್ರಾಮದ ದೇವೇಂದ್ರರಾವ್(30) ಎಂದು ಗುರುತಿಸಲಾಗಿದೆ. ಮೃತ ದೇವೇಂದ್ರರಾವ್ ಪಕ್ಕದ ಕನಮನಹಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ, ಕನಮನಹಳ್ಳಿ ಗ್ರಾಮದ ಗುತ್ತಪ್ಪ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದರು ಅದರಲ್ಲಿ ಅವರ ಮಗ ಹರೀಶ್ಕೊಳಮೂರು ಗ್ರಾಮದ ಕೂಲಿ ಕಾರ್ಮಿಕರನ್ನು ಅವರ ಗ್ರಾಮಕ್ಕೆ ಬಿಟ್ಟು ಬರಲು ಕೂರಿಸಿಕೊಂಡು ಬರುತ್ತಿದ್ದಾಗ ಕಾಮಸಮುದ್ರ ಸಮೀಪ ಎದ್ವಾತದ್ವ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಕಾರಣ ಟ್ರ್ಯಾಲಿಯಲ್ಲಿ ಕೂತಿದ್ದ ದೇವೇಂದ್ರರಾವ್ ಕೆಳಗೆ ಬಿದ್ದ ಆಗ ಹಿಂದಿನ ಚಕ್ರ ಅವರ ಮೇಲೆ ಹರಿಯಿತು. ತಕ್ಷಣ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

